ಸರಗೂರು: ನನ್ನ ವೃತ್ತಿ ಜೀವನದ ಜೊತೆಗೆ ನನ್ನ ಕೌಟುಂಬಿಕ ಬದುಕಿಗೆ ಮಹತ್ತರ ತಿರುವು ನೀಡಿದ ತಾಲೂಕು ಹೆಚ್.ಡಿ.ಕೋಟೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಶ್ರೀ ಗುರುಮಲ್ಲೇಶ್ವರ ಪದವೀಧರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಲ್ಮಳ್ಳಿ ನಟರಾಜು ಹೇಳಿದರು.

ತಾಲೂಕಿನ ಬಿಡಗಲು ಗ್ರಾಮದ ಪಡುವಲ ಶ್ರೀ ಮಠದಲ್ಲಿ ಎಚ್ ಡಿ ಕೋಟೆ ತಾಲೂಕಿನ ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗದ 13ನೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ನಾನು ಜೀವನೋಪಾಯಕ್ಕಾಗಿ ಎಲ್ಲರಂತೆ ಉದ್ಯೋಗ ಅರಸಿ ಈ ತಾಲೂಕಿಗೆ ಬಂದಿದ್ದೆ ಆದರೆ ನನ್ನ ವೃತ್ತಿ ಜೀವನದ ಜೊತೆಗೆ ನನ್ನ ಕೌಟುಂಬಿಕ ಬದುಕಿಗೆ ಮಹತ್ತರ ತಿರುವು ನೀಡಿದ ತಾಲೂಕು ಇದಾಗಿತ್ತು ಸಮುದಾಯದ ಜನ ನನ್ನ ಮೇಲೆ ತೋರಿದ ನಿಷ್ಕಲ್ಮಶ ಪ್ರೀತಿ ವಿಶ್ವಾಸ ನಂಬಿಕೆ ಶಾಶ್ವತವಾಗಿ ಉಳಿಸಿ ಕೊಳ್ಳಬೇಕು ಎನ್ನುವ ದೃಢ ನಿರ್ಧಾರ ಮತ್ತು ಸಂಕಲ್ಪ ಎಚ್ ಡಿ ಕೋಟೆ ಮತ್ತು ಸರಗೂರಿನಲ್ಲಿ ಪುಟ್ಟದೊಂದು ಗೆಳೆಯರ ಬಳಗ ಸ್ಥಾಪಿಸಿ ಶಾಶ್ವತವಾಗಿ ಈ ತಾಲೂಕಿನ ಸಂಬಂಧ ಕಾಪಿಟ್ಟು ಕೊಳ್ಳಬೇಕು ಎನ್ನುವ ಮನಸ್ಸಿನ ಆಸೆಗೆ ಕೈಜೋಡಿಸಿ ನೀರೇರೆದು ಪೋಷಿಸಿದವರು ಮಿತ್ರರಾದ ಶ್ರೀ ಗಿರೀಶ್ ಮೂರ್ತಿ.

ಇದಕ್ಕೆ ಆಶೀರ್ವದಿಸಿದವರು ಪಡುವಲ ಮಠದ ಪೂಜ್ಯ ಮಹಾದೇವಸ್ವಾಮಿಗಳು ಅಂದು ತಿಂಗಳಿಗೊಮ್ಮೆ ಒಂದೆಡೆ ಸೇರಿ ಪರಸ್ಪರ ಸುಖ ದುಃಖಗಳನ್ನು ಹಂಚಿಕೊಂಡು ಭಾಗಿಯಾಗಲಿ ಎನ್ನುವ ಸದುದ್ದೇಶದಿಂದ ಸ್ಥಾಪಿಸಿದ ಸಮಾಗಮ ಎನ್ನುವ ಈ ಸಂಘಟನೆ ಯಾವುದೇ ಭಿನ್ನಭಿಪ್ರಾಯ ಗಳಿಲ್ಲದೆ 13ವರ್ಷ ಪೂರೈಸುವುದರ ಜೊತೆಗೆ ತಾಲೂಕಿನಲ್ಲಿ ಇದುವರೆಗೆ ನಡೆಸಿರುವ ಸಮಾಜ ಮುಖಿ ಚಟುವಟಿಕೆಗಳು ಇತರೆಲ್ಲ ಸಂಘಟನೆಗಳಿಗೆ ಮಾದರಿ ಸ್ಫೂರ್ತಿ ಮತ್ತು ಪ್ರೇರೆಪಣೆ ಆಗಿದೆ ಇದಕ್ಕೆ ಕಾರಣ ನಿಮ್ಮೆಲ್ಲರ ನಿಸ್ವಾರ್ಥ ಮನೋ ಭಾವನೆ ಇದರ ಬೆಳವಣಿಗೆಗೆ ಕೇವಲ ಪದಾಧಿಕಾರಿಗಳು ಅಷ್ಟ್ಟೇ ಅಲ್ಲ ಎಲ್ಲ ಸದಸ್ಯರ ತುಂಬು ಸಹಕಾರ ಪಾಲ್ಗೊಳ್ಳುವಿಕೆ ಎಂದರು.

ಸ್ವಾರ್ಥ ವೈಯಕ್ತಿಕ ಪ್ರತಿಷ್ಠೆ ಗಳಿಗೆ ಜೋತು ಬಿದ್ದಿದ್ದರೆ ಅಂದೇ ಸ್ಥಾಪನೆಗೊಂಡ ಕೆಲವು ದಿನಗಳಲ್ಲೇ ನಾಶ ಹೊಂದಿ ಕಣ್ಮರೆಯಾಗುತ್ತಿತ್ತು ಹಾಗಾಗಿ ಈ ಸಂಘಟನೆ ಸಂಖ್ಯೆಗಿಂತ ಸೇವಾಸಕ್ತ ಮನಸ್ಸು ಅಷ್ಟೇ ಅಲ್ಲದೆ ಕುಟುಂಬಗಳನ್ನು ಒಗ್ಗೂಡಿಸುವ ಮೂಲಕ ಸಂಬಂಧ ಬಲ ಳಿಸಿದೆ ಇಂದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಮುದಾಯದ ಸಂಬಂಧ ಬೆಸೆಯುವ ಮಟ್ಟಿಗೆ ವ್ಯಾಪಿಸಿದೆ.

ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ದಾಸ ವಾಣಿ ಮತ್ತು ಬಸವಣ್ಣ ವಿಶ್ವ ಪ್ರಜ್ಞೆಯ ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದೆನಿಸಿ ಶಿಕ್ಷಣ ಉದ್ಯೋಗ ಅರೋಗ್ಯ ಸೇರಿದಂತೆ ನಮ್ಮೆಲ್ಲರ ಕಿಂಚಿತ್ ಸೇವೆಯನ್ನು ಸಮುದಾಯಕ್ಕೆ ಸಲ್ಲಿಸಲು ಬುನಾದಿಯಾಗಿವೆ. ದೊಡ್ಡ ದೊಡ್ಡ ಸಂಘಟನೆ ಮಾತ್ರ ಸಮಾಜ ಸೇವೆ ಎನ್ನುವ ಸಂಕುಚಿತ ಮನಸ್ಸುಗಳ ಭಾವನೆ ಕಲ್ಪನೆ ಮಾತ್ರ ಎನ್ನುವುದು ಹುಸಿ ಎಂದು ಇದುವರೆಗೂ ಹಮ್ಮಿ ಕೊಂಡಿರುವ ಮುಂದಿನ ನೂತನ ಪದಾಧಿಕಾರಿಗಳು ಹಮ್ಮಿ ಕೊಳ್ಳಲು ಸಿದ್ದ ಪಡಿಸಿರುವ ಕ್ರಿಯಾ ಯೋಜನೆ ಅವಲೋಕಿಸಿದರೆ ಅರ್ಥವಾಗುತ್ತದೆ ಮತ್ತು ಸಂತೋಷ ವಾಗುತ್ತದೆ.
ಇಂತಹ ನನ್ನ ಜೀವಿತದ ಪುಣ್ಯ ಅವಕಾಶಕ್ಕಾಗಿ ನಾನು ಆಜೀವ ಪರ್ಯಂತ ಸಂಘಟನೆಗೆ ಚಿರಋಣಿ ಎಂದು ಭಾವೋದ್ರಿಕ್ತರಾದರು ಮತ್ತು ಎಲ್ಲರ ಸೇವೆಗೆ ವೈಯಕ್ತಿಕ ಅಭಿನಂದನೆಗಳುಮತ್ತು ಸಹಕಾರ ಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು

ಕಾರ್ಯಕ್ರಮದಲ್ಲಿ ಮೈಸೂರಿನ ಬಸವ ಬಳಗ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ನಡೆಯಲಿರುವ ಬಸವ ಜಯಂತಿ ಪ್ರಚಾರ ಪತ್ರವನ್ನು ಪೂಜ್ಯರು ಬಿಡುಗಡೆ ಗೊಳಿಸಿದರು ಮತ್ತು ಸಂಘದ ಲೋಗೋವನ್ನು ನೌಕರರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಬಿಡುಗಡೆ ಗೊಳಿಸಿದರು.
ಪಡುವಲ ಮಠದ ಶ್ರೀ ಮಹಾದೇವಸ್ವಾಮಿಗಳು, ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾದ ಬಿ ಆರ್ ಶಿವಕುಮಾರ್ ಗಜೇಂದ್ರ, ಸರಗೂರು ತಾಲೂಕು ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷರಾದ ಕಾಟವಾಳು ನಟರಾಜು, ನಿಕಟ ಪೂರ್ವ ಅಧ್ಯಕ್ಷರಾದ ಮಾದಾಪುರ ಗಿರೀಶ್ ಮೂರ್ತಿ ಸ್ವಾಮಿ ವಕೀಲರಾದ ಸಂಗಮೇಶ, ನಿರ್ಗಮಿತ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮುಂದಿನ ನಿಯೋಜಿತ ಅಧ್ಯಕ್ಷ ಆನಂದ್ ಕಾರ್ಯದರ್ಶಿ ಶಿವಕುಮಾರ್ ಚಿಕ್ಕೇರೆಯೂರು ಸೇರಿದಂತೆ ಅನೇಕ ಮುಖಂಡರು ಮತ್ತು ಕುಟುಂಬ ವರ್ಗ ಉಪಸ್ಥಿತರಿದ್ದರು








