ಸ್ವಾತಂತ್ರ್ಯಗೊಂಡ ದಿನದಿಂದಲೇ ಭಾರತದೊಳಗೆ ನೂರಾರು ಸಮಸ್ಯೆಗಳಿದ್ದವು. ಆ ಪೈಕಿ ಮೊದಲನೆಯದಾಗಿ ಹರಿದು ಹಂಚಿಹೋಗಿದ್ದ ಇಂಡಿಯಾವನ್ನು ಒಂದುಗೂಡಿಸುವ ಬೃಹತ್ ಕಾರ್ಯ. ಇದನ್ನು ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಪ್ರಾರಂಭಿಸಿದ ಕ್ರಾಂತಿಯೇ ಆಪರೇಷನ್ ಪೋಲೊ….
1946ನೇ ಇಸವಿಯಲ್ಲಿ ಜರುಗಬೇಕಾಗಿದ್ದ ಲಂಡನ್ನಿನ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸುವ ಮುನ್ನ ಬ್ರಿಟನ್ ದೊರೆ ಮತ್ತು ಮಹಾರಾಣಿಯವರ ಚಕ್ರಾಧಿಪತ್ಯವು ಗಾಂಧೀಜಿ ಮತ್ತು ಮಿತ್ರರಿಗೆ ಮಾಡಿದ ಕಟ್ಟಾಜ್ಞೆ ಹೀಗಿತ್ತು… ಪ್ರಧಾನಿ ಗದ್ದುಗೆ ಏರಲು ನಿಮ್ಮ ಒಳಜಗಳದ ಭಿನ್ನಾಭಿಪ್ರಾಯ ತೊರೆದು ನೀವೆಲ್ಲರೂ ಒಮ್ಮತ ನಿರ್ಧಾರಕ್ಕೆ ಬಂದ ನಂತರವೇ ಭಾರತವನ್ನ ಸ್ವತಂತ್ರಗೊಳಿಸುವ ಇಂಡೋ -ಬ್ರಿಟಿಷ್ ಒಪ್ಪಂದವನ್ನ ಪೂರ್ಣಗೊಳಿಸಲಾಗುತ್ತದೆ …

ಏಕೆಂದರೆ ಇದೇ ವಿಷಯದ ಬಗ್ಗೆ ಮಾತುಕತೆಗೆ 14 ತಿಂಗಳಿಂದ 10 ಬಾರಿ ಸೇರಿದ್ದ ಸಭೆಯು ಅಪೂರ್ಣವಾಗಿ ವ್ಯರ್ಥವಾಗಿದ್ದರಿಂದ 11ನೇ ಬಾರಿ ಸಭೆಗೆ ಹಾಜರಾಗಲು ತೆರಳಿದ್ದ ಏಳು ಮಂದಿಯನ್ನು ಕಂಡು ಕೆರಳಿ ಕೆಂಡವಾದ ಬ್ರಿಟಿಷ್ ಎಂಪೈರ್ (ಕಿಂಗ್-ಕ್ವೀನ್) ರೇಗಿತ್ತು?! ತೀರಾ ಹದಗೆಟ್ಟ ಸಂದಿಗ್ಧ ಸಂದರ್ಭದಲ್ಲಿ ರೋಸಿಹೋಗಿದ್ದ ಗಾಂಧೀಜಿ ಸಿಟ್ಟಿನಿಂದ “ನೆಹರೂನು ಬೇಡ, ಜಿನ್ನಾನೂ ಬೇಡ, ಸರ್ದಾರ್ ಪಟೇಲರೇ ಪ್ರಧಾನಿಯಾಗಲಿ” ಎಂದು ನಡುಗಿ ಗುಡುಗಿದರು. ಆಗ ತಡಬಡಾಯಿಸುತ್ತ ಅಲ್ಲಿದ್ದ ಎಲ್ಲರೂ ಒಕ್ಕೊರಲಿಂದ ನಾವ್ಯಾರೂ ಬೇಡವೇ ಬೇಡ ನೀವೇ ಪ್ರಧಾನಿಯಾಗಿ ಎಂದಾಗ, ಅನಿವಾರ್ಯ ಸಂದರ್ಭವರಿತು ಒಂದುವೇಳೆ ಗಾಂಧೀಜಿ ಒಪ್ಪಿಗೆ ಸೂಚ್ಯವಾಗಿ ತಮ್ಮ ಕತ್ತನ್ನು ಗೋಣಾಡಿಸಿದ್ದರೆ ಸಾಕಾಗಿತ್ತು? ಮೋಹನದಾಸ್ ಕರಂಚಂದ್ ಗಾಂಧಿ, ಈ ದೇಶದ ಮೊಟ್ಟಮೊದಲ ಪ್ರಧಾನಿ ಆಗಬಹುದಿತ್ತು? ಆದರೆ ಕಿಂಗ್ ಮೇಕರ್ ತಾನೊಬ್ಬ ಕಿಂಗ್ ಆಗಲು ಇಚ್ಚಿಸಲೇ ಇಲ್ಲ!
ಸ್ವಾತಂತ್ರ್ಯಗೊಂಡ ದಿನದಿಂದಲೆ ಭಾರತ ದೊಳಗೆ ನೂರಾರು ಸಮಸ್ಯೆಗಳಿದ್ದವು. ಆ ಪೈಕಿ ಮೊದಲನೇದಾಗಿ ಹರಿದು ಹಂಚಿಹೋಗಿದ್ದ ಇಂಡಿಯವನ್ನು ಒಂದುಗೂಡಿಸುವ ಬೃಹತ್ ಕಾರ್ಯ. ದೇಶದ ಪ್ರಥಮ ಉಪಪ್ರಧಾನಿ ಹಾಗೂ ಗೃಹಮಂತ್ರಿ ಸರ್ದಾರ್ಪಟೇಲ್ ಪ್ರಾರಂಭಿಸಿದ ಕ್ರಾಂತಿಯೇ ಆಪರೇಶನ್ ಪೋಲೊ! 1947 ಆಗಸ್ಟ್ 15 ರವರೆಗೂ ಪ[ಫಿ]ರಂಗಿ ಯವರನ್ನು ಗಾಂಧಿಗಿರಿಯಿಂದ ಗೆದ್ದಿದ್ದ ಗಾಂಧೀಜಿ ತನ್ನ ರಾಷ್ಟ್ರದ ಒಳಗಿದ್ದ ತುಂಡು-ತುಕ್ಡ ಪ್ರಾಂತ್ಯ, ರಾಜ್ಯ ಭೂಮಿ (ಪ್ರ)ದೇಶಗಳನ್ನ ಒಂದು ಗೂಡಿಸಲು ಮತ್ತು ಸಣ್ಣಪುಟ್ಟ ಪಾಳೇಗಾರ ಸಾಮಂತ ಮಹಾರಾಜ ನವಾಬ ಮುಂತಾದವರ ಮನಸ್ಸು ಗೆಲ್ಲಲು ಉಪವಾಸ ಸತ್ಯಾಗ್ರಹ ಕೈಗೊಳ್ಳುವಂತಾಯ್ತು.

ಆಜಾದೀ ನಂತರವೂ ದೇಶಾದ್ಯಂತ ದರ್ಬಾರ್ ನಡೆಸುತ್ತಿದ್ದ 25ಕ್ಕೂ ಹೆಚ್ಚು ದೊರೆಗಳ ಪೈಕಿ ಬಹುತೇಕರು ತಮ್ಮ ಸಹಮತ ಸಹಕಾರ ನೀಡಲೊಪ್ಪಿ ಸಹಾಯ ಹಸ್ತ ಚಾಚಿದರು. ಆದರೆ ತನ್ನ ಉದ್ಧಟತನದಿಂದ ಅಂತರ್ ಯುದ್ಧಕ್ಕೂ ಸೈ ಎನ್ನುತ್ತ ಭಾರತದ ಏಕತೆಗೆ ನಕಾರ ತೋರಿಸಿದ ಹೈದ್ರಾಬಾದ್ ನಿಜಾಮನ ಹೆಡೆಮುರಿ ಕಟ್ಟಲು ತಿಣುಕಾಡ ಬೇಕಾಯ್ತು! ಸಮಗ್ರತೆಯ ವಿರುದ್ಧ ಇದ್ದ ಗೋವಾ-ಪಾಂಡಿಚೇರಿ ಫ್ರೆಂಚರ ಸರ್ವಾಧಿಕಾರ ಬಗ್ಗುಬಡಿಯಲು ಸರ್ದಾರ್ ವಲ್ಲಭ ಬಾಯಿ ಪಟೇಲ್ ಭಾರತೀಯ ಸೇನೆಯನ್ನು ಕರೆಸ ಬೇಕಾಯ್ತು! ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಗಾಂಧಿ-ನೆಹರು ಮಿತ್ರಮಂಡಲಿಗೆ ಆಪತ್ಭಾಂಧವ ಎನಿಸಿದರು ಈ ದೇಶಭಕ್ತ!
ಯಾವ ದೇವರಿಗೆ ಏನು ಪೂಜೆ ಮಾಡಬೇಕೆಂದು ಚೆನ್ನಾಗಿಬಲ್ಲ ಈ ಉಕ್ಕಿನ ಮನುಷ್ಯ ತಮ್ಮ ಒಂದೇ ಭೇಟಿಯಿಂದ ಭಂಡ ಫ್ರೆಂಚರೂ ತಿಕ್ಕಲು ನವಾಬರೂ ನಡುಗುವಂತೆ ಮಾಡಿ ತಮ್ಮದೇ ಆದ ವಿಶಿಷ್ಟ ದಾದಾಗಿರಿ ಅಸ್ತ್ರದಿಂದ ಒಳಶತ್ರುಗಳನ್ನು ಸಾರಾಸಗಟಾಗಿ ಮಣ್ಣು ಮುಕ್ಕಿಸಿ ಮಂಡಿವೂರುವಂತೆ ಮಾಡಿದರು. ಇಡೀ ಭಾರತವನ್ನು ಒಂದೇ ಅಸ್ಮಿತೆ ಆಗಿಸಲು ಹಗಲು ರಾತ್ರಿ ಶ್ರಮ ಪಟ್ಟು ಯಶಸ್ವಿಯಾದರು. ಗಾಂಧಿ-ನೆಹರೂ ಮೊದಲ್ಗೊಂಡು ಪ್ರತಿ ಭಾರತೀಯನು ಕಬ್ಬಿಣದ ಗುಂಡಿಗೆಯುಳ್ಳ ಸರ್ದಾರ್ ಪಟೇಲ್ ಎಂದು ಮನಸಾರೆ ಕೊಂಡಾಡಿದರು.

ಸಂವಿಧಾನ ರಚನೆಗೂ ಮುನ್ನ ಮತ್ತು ಗಣರಾಜ್ಯ ಸ್ಥಾಪನೆಗೂ ಮುಂಚಿತವಾಗಿಯೇ ಭಾರತವು ಏಕದೇಶವಾಗಿ ರೂಪುಗೊಳ್ಳ ಬೇಕಿತ್ತು. ಸಂವಿಧಾನ ಬರವಣಿಗೆ ಮುಗಿಯುವ ಅವಧಿಯೊಳಗೆ ಸಮಗ್ರ, ಸಮಷ್ಠಿ ಭಾರತದ ನಿರ್ಮಾಣ ಅತ್ಯಗತ್ಯ ಆಗಿತ್ತು. ಆದ್ದರಿಂದ ಸರ್ದಾರ್ ಪಟೇಲ್ 16.8.1947ರಿಂದಲೇ ಅಂತರ್ದೇಶೀಯ ದ್ರೋಹಿ-ಶತ್ರುಗಳ ವಿರುದ್ಧ ಯುದ್ಧಕ್ಕೆ ನಾಂದಿ ಹಾಡಲು ಪ್ರಾರಂಭಿಸಿ ಕೇವಲ 100 ದಿನದೊಳಗೆ ಪ್ರಚಂಡ ಗೆಲುವು ಸಾಧಿಸಿದರು. ತತ್ಪರಿಣಾಮ 26.1.1950ರಂದು ದೇಶದ ಚೊಚ್ಚಲ ಗಣರಾಜ್ಯೋತ್ಸವ ಆಚರಿಸಲಾಯಿತು. ದೇಶದಲ್ಲಿ ಒಟ್ಟು 14 ರಾಜ್ಯ ಮತ್ತು 6 ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ ಬಂದವು. ಸೇನೆಯಿಲ್ಲದ ಸೇನಾಪತಿಯಾಗಿ ಅಪ್ರತಿಮ ಏಕಾಂಗಿಯಾಗಿ ಪಟೇಲ್ ನಿರ್ವಹಿಸಿದ ಮತ್ತೊಂದು ಘನಕಾರ್ಯ ಎಂದರೆ 1947ರ ಪ್ರಥಮ ಇಂಡೋ-ಪಾಕ್ ಯುದ್ಧದಲ್ಲಿ ರಾತ್ರೋ ರಾತ್ರಿ ಪಾಕೀ ಸೈನಿಕರು ರಣರಂಗದಿಂದ ಓಡಿ ಹೋಗುವಂತೆ ಮಾಡಿದರು! ಇಂಥ ಧೀರನಿಗೆ ಪ್ರತಿಭಾರತೀಯ ಪ್ರತಿಘಳಿಗೆ ಕೃತಜ್ಞತೆ ಸಲ್ಲಿಸಬೇಕಾದ್ದು ಆದ್ಯಕರ್ತವ್ಯ!
ಪ್ರತಿ ದಿನ, ಪ್ರತಿ ಕ್ಷಣ ಕನ್ನಡದ ಡಿಂಡಿಮ ಕನ್ನಡಿಗರ ಮನದಲ್ಲಿ ಮೊಳಗಲಿ… ಕನ್ನಡವೇ ಸತ್ಯ.. ಕನ್ನಡವೇ ನಿತ್ಯ!
ವಲ್ಲಭ ಬಾಯಿ ಪಟೇಲ್ ಗುಜರಾತ್ನ ಖೇಡ ಜಿಲ್ಲೆ ನಡಿಯದ್ ನಗರದಲ್ಲಿ ವಾಸವಿದ್ದ ಶ್ರೀಮತಿ ಲಾಡ್ ಬಾ ಮತ್ತು ಶ್ರೀ ಜವೇರಿ ಲಾಲ್ ದಂಪತಿಯ ಪುತ್ರರಾಗಿ 31.10.1875ರಂದು ಜನಿಸಿದರು. ಪದವೀಧರನಾದ ಮೇಲೆ ಲಂಡನ್ನಿನಲ್ಲಿ ಕಾನೂನು ಪದವಿ ಗಳಿಸಿ ಭಾರತಕ್ಕೆ ಹಿಂತಿರುಗಿ ಖ್ಯಾತ ವಕೀಲರಾಗಿ ಅಮೋಘ ಸೇವೆ ಸಲ್ಲಿಸಿ 1917 ರಲ್ಲಿ ಮುನ್ಸಿಪಾಲಿಟಿ ಹಂತದಿಂದ ರಾಜಕೀಯ ಆರಂಭಿಸಿ ಕ್ರಮೇಣ ಸಕ್ರಿಯ ರಾಜಕಾರಣಿಯಾದರು. ಗುಜರಾತ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆಗೈದು, ಅಖಿಲ ಭಾರತ ಕಾಂಗ್ರೆಸ್ಸಿನ 49ನೇ ಅಧಿವೇಶನದ ಅಧ್ಯಕ್ಷರಾಗಿ, ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ, ಸಂಸದರಾಗಿ, ಸಚಿವರಾಗಿ ದೇಶಕ್ಕೆ ಸಮಾಜಕ್ಕೆ ಮಹಾನ್ ಸೇವೆ ಸಲ್ಲಿಸಿದರು.

1895ರಲ್ಲಿ ವಿವಾಹವಾಗಿ ಮೂರು ಮಕ್ಕಳ ತಂದೆಯಾದರು. ಇವರ ಪತ್ನಿ ಶ್ರೀಮತಿ ಝವೇರಿಬಾ 1909ರಲ್ಲಿ ನಿಧನರಾದರು. ಇವರ ಪುತ್ರ ದಹ್ಯಾಭಾಯ್ ಮತ್ತು ಪುತ್ರಿ ಮಣಿಬೇನ್ ಇಬ್ಬರೂ ಸಹ ಇವರಿಗೆ ಮುನ್ನವೇ ನಿಧನರಾದರು. 15.12.1950ರಂದು ಹೃದಯದ ಚಿಕಿತ್ಸೆ ಫಲಕಾರಿ ಆಗದೇ ಮುಂಬೈನ ಬಿರ್ಲಾ ಹೌಸ್ ನಲ್ಲಿ ಸ್ವರ್ಗಸ್ಥರಾದರು. ಅಂತಿಮ ಸಂಸ್ಕಾರವು ಗುಜರಾತಿನಲ್ಲೆ ಜರುಗಿತು. ಪಟೇಲರಿಗೆ 1991ರಲ್ಲಿ ಮರಣೋತ್ತರ ಭಾರತರತ್ನ ಗೌರವ ಲಭಿಸಿತು.
ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಉಪಪ್ರಧಾನಿ- ಗೃಹಮಂತ್ರಿ ಆಗಿದ್ದ ಪಟೇಲರಿಗೆ ತಮ್ಮ ಊರಿನ ರೈತರು ಹಾಗೂ ರಾಜ್ಯದ ಜನತೆ ಇವರು ಕೈಗೊಂಡ “ಬ್ರಿಟಿಷರ ವಿರುದ್ಧದ ಬಾರ್ಡೋಲಿ ಸತ್ಯಾಗ್ರಹ ಮೂಲಕ ಅಭೂತಪೂರ್ವ ಜಯಸಾಧಿಸಿದ ಪ್ರಯುಕ್ತ ಪ್ರೀತಿ ವಿಶ್ವಾಸ ಗೌರವ ಪೂರ್ಣವಾಗಿ ಪಟೇಲರಿಗೆ ನೀಡಿದ ಬಿರುದು “ಸರ್ದಾರ್”. ಆ ನಂತರ ಗಾಂಧೀ ನೆಹರು ಆದಿಯಾಗಿ ಎಲ್ಲರೂ ಇವರನ್ನು “ಸರ್ದಾರ್ ಪಟೇಲ್” ಎಂದೇ ಕರೆಯಲು ಪ್ರಾರಂಭಿಸಿದರು. ಅಮೆರಿಕ, ಯುರೋಪ್ ಸೇರಿದಂತೆ ಬಹುತೇಕ ಎಲ್ಲ ವಿದೇಶಗಳಲ್ಲೂ “ಐರನ್ ಮ್ಯಾನ್ ಆಫ್ ಇಂಡಿಯ” ಎಂದೇ ಕರೆಸಿಕೊಳ್ಳುತ್ತಿದ್ದರು.

ಒಂದುವೇಳೆ ಅಂದು ಸರ್ದಾರ್ಪಟೇಲ್ ಮನಸ್ಸು ಮಾಡದಿದ್ದರೆ ಇಂದಿನ ಅಖಂಡ ಭಾರತ, ಕಾಣಲು ಸಾಧ್ಯವಾಗುತ್ತಿರಲಿಲ್ಲ! United India & Republic of India ಒಂದುದೇಶ, ಒಂದುಗಣರಾಜ್ಯ ಎಂಬುದು ಕನಸಾಗೆ ಉಳಿದು, ಪ್ರತಿದಿನವೂ ಕಚ್ಚಾಟ, ಕಾದಾಟ ಸಾಮಾನ್ಯವಾಗಿಸಿ ಶೀಘ್ರದಲ್ಲೆ ಸ್ವ್ವಾತಂತ್ರ್ಯ ಕಳೆದುಕೊಂಡು ಮತ್ತೆ ಪರಕೀಯರ ಆಡಳಿತ ದಾಸ್ಯಕ್ಕೆ ಒಳಗಾಗುವ ದುರಂತ ಸ್ಥಿತಿ ತಲುಪುತ್ತಿತ್ತೇನೋ? ಇಂದಿನ ಅದೆಷ್ಟು ನೇತಾರರು ಅಂದಿನ ಬಲಿದಾನ ತ್ಯಾಗ ಕಟುಸತ್ಯದ ಇತಿಹಾಸ ನೆನಪಿಸಿಕೊಳ್ಳುತ್ತಾರೆ? ಜಾತಿಮತ ನೆಲಜಲ ಭಾಷೆ ಧರ್ಮ ಮುಂತಾದ ಕ್ಷುಲ್ಲಕ ಕಾರಣಕ್ಕೆ ವೋಟ್ ಬ್ಯಾಂಕಿ[ಕುರ್ಚಿ]ಗೆ ರಕ್ತದೋಕುಳಿ ಆಡಿಸುತ್ತಾರೆ? ಇನ್ನು ಮುಂದಾದರೂ ನಮ್ಮ ಗ್ರೇಟ್ ಪ್ರಭು, ಪ್ರಜೆಗಳು ಡಾಂಭಿಕ ಅಥವ ಯಾಂತ್ರಿಕ ಆಚರಣೆ ಕೈಬಿಟ್ಟು ಇಂಥ ಮಹನೀಯರ ಜೀವನಚರಿತ್ರೆಯನ್ನು ಸರಿಯಾಗಿ ತಿಳಿದುಕೊಂಡು ಇವರನ್ನು ಮಾದರಿಯನ್ನಾಗಿಸಿಕೊಂಡು ಇವರದೇ ಹಾದಿಯಲ್ಲಿ ಸಾಗುತ್ತ ಇವರ ತತ್ವ- ಸಿದ್ಧಾಂತ ಅನುಕರಿಸಲು ಪ್ರಯತ್ನ ಪಡುವುದೇ ಶ್ರೇಷ್ಠ?
ವಿಶ್ವದ ಅತಿಎತ್ತರದ ಪಟೇಲರ ಪುತ್ಥಳಿ Statue of Unity
1980ರಲ್ಲಿ ಸರ್ದಾರ್ ಪಟೇಲರ ರಾಷ್ಟ್ರೀಯ ಸ್ಮಾರಕವನ್ನು ರಾಜ್ಯ ರಾಜಧಾನಿ ಅಹಮದಾಬಾದಿನ ಮೋತಿ ಶಾಹಿ ಮಹಲ್ ನಲ್ಲಿ ಅಂದಿನ ಪ್ರಧಾನಮಂತ್ರಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಅವರಿಂದ ಉದ್ಘಾಟಿಸಲ್ಪಟ್ಟಿತು. ಕಾಲಕ್ರಮೇಣ ಇಂದಿನ ಪ್ರಧಾನಿ ನರೇಂದ್ರ ಮೋದಿಜೀ ಆಡಳಿತ ಅವಧಿಯಲ್ಲಿ ಗುಜರಾತ್ನ ಸರ್ದಾರ್ ಸರೋವರ್ ಬಳಿ ಪ್ರಪಂಚದ ಅತಿ(182ಮೀ) ಎತ್ತರದ ಪಟೇಲರ ಲೋಹದ ಪುತ್ಥಳಿಯನ್ನು 31.10.2018ರಂದು ಅನಾವರಣಗೊಳಿಸುವ ಮೂಲಕ ದೇಶದ ಮಣ್ಣಿನಮಗನಿಗೆ ಭಾರತೀಯರೆಲ್ಲರ ಪರವಾಗಿ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.










First class article about THE IRON MAN OF INDIA 🇮🇳 🙌 👏 😀 👌 🙏 thank you so much sir
ನಮ್ಮ ಭಾರತ ದೇಶದ ಉಕ್ಕಿನಮನುಷ್ಯ ಸರ್ದಾರ್ ಪಟೇಲರ ಬಗೆಗಿನ ವಿಷಯ ವಿಚಾರ ಬಹಳ ಚಲೋ ಐತಿ ಸ…ರಾ… ಇಂಥ ಉತ್ತಮ ಲೇಖನ ಬರೆದವರಿಗೆ
ಧನ್ಯವಾದ ಸ…ರ್…
Thank you so much Lava sir
ನಮಸ್ಕಾರ ಸರ್, ಸರ್ದಾರ್ ಪಟೇಲರ ಬಗ್ಗೆ ಬರೆದ ಲೇಖನವು ನಿಜದಲ್ಲಿ ಸಂದರ್ಭೋಚಿತ ಹಾಗೂ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಮಾದರಿ ಆಗುವಂತೆ ಇದೆ. ಈ ಲೇಖನ ಮಾತ್ರವಲ್ಲ ಇಂತಹ ಪ್ರತಿಯೊಂದು ಇತಿಹಾಸ ಮಾಹಿತಿ ನೀಡುವ ಎಲ್ಲಾ ಲೇಖನಗಳನ್ನು ಒಂದು ಸಲವಾದರೂ ಇವತ್ತಿನ ಪೀಳಿಗೆ, ಓದಲೇಬೇಕು, ಓದಿ ತಿಳಿದುಕೊಳ್ಳಬೇಕಾದ ಸತ್ವಪೂರ್ಣ ಮಹಾನ್ ಲೇಖನ. ಜನಮನ ಕನ್ನಡ ಪತ್ರಿಕೆಯ ಎಲ್ಲರಿಗೂ ಆಭಾರಿ ಆಗಿರುವೆನು.
ಧನ್ಯವಾದ ಸರ್
ಇವತ್ತಿನ ಭಾರತದ ರಾಜಕೀಯ ರಂಗಕ್ಕೆ ಮಾರ್ಗದರ್ಶನ ಮಾಡುವಂತಿದೆ ಸರ್ದಾರ ಪಟೇಲರ ಲೇಖನ. ಎಲ್ಲವಯಸ್ಸಿನವರೂ ತಿಳಿಯಬೇಕಾದ ಮಾಹಿತಿ ಇರುವಂಥ ಅತ್ಯಂತ ಸಮಂಜಸ ಲೇಖನ, ನಮಸ್ಕಾರ
Superb article 👏 👌 sir thanks for publishing a very much needed article for today’s dirty politics
Extraordinary person Sardar valuable bhai Patel, About him good information given in this article,, with regards and many more thanks
ಉತ್ತಮ ಅಂಕಿ-ಅಂಶ ಇರುವ ಸಂಗ್ರಹಯೋಗ್ಯ ಲೇಖನ, ಭಾರತದ ಉಕ್ಕಿನ ಮನುಷ್ಯನ ಕುರಿತಾದ ಈ ಲೇಖನ. ಹೀಗಾಗಿ ತಮಗೆ ಧನ್ಯವಾದ ಸರ್
ಯಶೋಧ ಮೇಡಂ (ನಿವೃತ್ತ ಶಿಕ್ಷಕಿ, ಬಿಡದಿ)
ಅಪರೂಪದ ವ್ಯಕ್ತಿತ್ವದ ಪಟೇಲರ ಬಗ್ಗೆ ಅಮೋಘ ಲೇಖನ. ಓದಿದ ನಂತರ ನನಗೆ ಬಹಳ ಸಂತೋಷವಾಯಿತು, ನಮಸ್ಕಾರ ಸರ್
First class article about SARDAR PATEL the great legend, thanks a llot… sir
ಸರದಾರ ಪಟೇಲರ ಲೇಖನ ಓದಿದೆ, ತುಂಬ ದೊಡ್ಡ ದೇಶಭಕ್ತರ ಬಗ್ಗೆ ಬಹಳ ಚೆನ್ನಾಗಿಯೇ ಬರೆದಿದ್ದಾರೆ, ಅಭಿನಂದನೆ ಸರ್/ಮೇಡಂ
ತುಂಬ ಸೊಗಸಾಗಿದೆ ಉಕ್ಕಿನ ಮನುಷ್ಯ ಪಟೇಲರ ಲೇಖನ, ನಮಸ್ಕಾರ
ಸರ್ದಾರ್ವ ವಲ್ಲಭ ಬಾಯಿ ಪಟೇಲರ ಲೇಖನ ಬೊಂಬಾಟ್ ಆಗಿದೆ ಎಷ್ಟೋ ವಿಷಯ ನಮಗೆ ಗೊತ್ತೆ ಇರಲಿಲ್ಲ ಸರ್, ಧನ್ಯವಾದ