LatestLife style

ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..

ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ  ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇರಬಹುದು.. ಕುರೂಪದಲ್ಲಿಯೂ ಸೌಂದರ್ಯ ಹುಡುಕಬೇಕು ಅದು ರೂಪವೇ ಅಲ್ಲದ ಸೌಂದರ್ಯ.. ಹಾಗಾದರೆ ಸೌಂದರ್ಯ ಎಂದರೇನು? ಎಂಬುದರ ಆಳ, ಅಗಲದ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ವಿಶ್ಲೇಷಿಸುತ್ತಾ ಹೋಗಿದ್ದಾರೆ. ಈ ಬಾರಿ ಅವರು ಸೌಂದರ್ಯ ಒಲ್ಲದ ಮೂರ್ಖರ ಬಗ್ಗೆ ಹೇಳಿದ್ದಾರೆ? ಹಾಗಾದರೆ ಏನದು ಎಂಬುದನ್ನು ತಿಳಿಯ ಬೇಕಾದರೆ ಈ ಬರಹವನ್ನು ತಪ್ಪದೆ ಓದಬೇಕಾಗುತ್ತದೆ.

ಸೌಂದರ್ಯವು ಸೃಷ್ಟಿಯ ಮೊಟ್ಟಮೊದಲ ಏಕಮೇವ ಅಧ್ಭುತ! ಹಾಗೂ ಲೋಕೈಕ ಆಕರ್ಷಣೆ! ಈ ಕಾರಣಕ್ಕೆ ಸೌಂದರ್ಯ ಇರುವ ಕಡೆ ಆಕರ್ಷಣೆ ಇರುತ್ತದೆ ಹಾಗೆಯೇ ಆಕರ್ಷಣೆ ಇದ್ದೆಡೆಗೆಲ್ಲ ಸೌಂದರ್ಯವೂ ಸಹ ಇದ್ದೇ ಇರುತ್ತದೆ. ಈ ನಿತ್ಯಸತ್ಯವನ್ನು ಜಗತ್ತಿನ ಪ್ರತಿಯೊಬ್ಬರೂ ಲಿಂಗ ತಾರತಮ್ಯ ಇಲ್ಲದೇ ಒಪ್ಪಿಕೊಂಡಿದ್ದಾರೆ. ಆದರೂ ಈ ಕೆಳಕಂಡ ಮೂವರಿಗೆ ಇದು ಅನ್ವಯಿಸದೇ ಇರಬಹುದು.

(1)ಹಾಲಹಲ್ಲು ಬೀಳದ 7ವಯಸ್ಸಿನ ಎಳೆಬಾಲರಿಗೆ, (2)ಮಾನಸಿಕ ಅಸ್ವಸ್ಥ(ಹುಚ್ಚ)ರಿಗೆ, (3)ಅರಸಿಕ/ಅಶಕ್ತ/ಷಂಡರಿಗೆ.. ಸೌಂದರ್ಯಕ್ಕೆ ತನ್ನದೇ ವಿಶಿಷ್ಟ ಮಹತ್ವ ಇದೆ, ಅದಮ್ಯ ಅನಂತ ಶಕ್ತಿಇದೆ, ಪ್ರೇಮದ ಸಾಕಾರವಿದೆ, ಕಾಮದ ವಿಕಾರವೂಇದೆ. ಪ್ರೇಮಿಗಳು ಸೌಂದರ್ಯವನ್ನು ಆರಾಧಿಸಿದರೆ, ಕಾಮಿಗಳು ಆಚರಿಸುತ್ತಾರೆ. ಸೌಂದರ್ಯವು, ಆತ್ಮ ಮಹಾತ್ಮ ಪರಮಾತ್ಮ ಈ ಮೂವರಿಗೆ ಮಹಾಪೂರ, ಶೋಭಾಯಮಾನ, ಆಪ್ಯಾಯಮಾನ ಅಲಂಕಾರಿಕ ಪೂರಕ ಎನಿಸಿದರೆ ದುರುಳ ದುರಾತ್ಮ ಕಾಮುಕ ಈಮೂವರಿಗೆ ಮಾತ್ರ ಅಪೂರ, ಅನಿಷ್ಟ, ವಿ(ಕು)ರೂಪದ ಮಾರಕ ಎನಿಸುತ್ತದೆ.

ಈ ಬಗ್ಗೆ ಯಾವುದೇ ವಿವಾದ ಪ್ರತಿವಾದ ವಿತಂಡವಾದ ಏನೇಇರಲಿ, “ಸೌಂದರ್ಯವು ಮಾನವನ ಅವಿಭಾಜ್ಯಅಂಗ, ಪಂಚೇದ್ರಿಯ ಪಂಚಭೂತಗಳಷ್ಟೇ ಅತ್ಯಾವಶ್ಯಕ” ಎಂಬ ಪ್ರಕೃತಿ ಸಹಜ ಸತ್ಯವನ್ನು ಒಂದಿಲ್ಲೊಂದು ಕಾರಣಕ್ಕೆ ಒಂದುಘಳಿಗೆಯಾದ್ರೂ ಪ್ರತಿಯೊಬ್ಬರು  ಅಪ್ಪಿಕೊಳ್ಳಬೇಕು, ಸಾಮಾಜಿಕ ಅನಿವಾರ್ಯತೆಗೆ ಶರಣಾಗಿ ಒಪ್ಪಿಕೊಳ್ಳಲೇಬೇಕು? ನಿಸ್ಸಾರ ಯೌವನ, ಷಡ್ರಸ ರಹಿತ ಔತಣ, ಸಿಹಿಇಲ್ಲದ ಹಣ್ಣು ಸ್ವಾದಿಷ್ಟವಿಲ್ಲದ ಹಾಲು ಸತ್ವವಿಲ್ಲದ ಬೀಜ, ಸತ್ಯವಲ್ಲದ ಯೋಜನೆ, ಪಂಚಾಮೃತಕ್ಕೆ ಬೇವುರಸ ಬೆರೆಸಿದಂತಾಗಿ ಯಾರಿಗೂ ಬೇಡವಾಗುತ್ತದೆ.

ಸೌಂದರ್ಯ ಸಹಿತ ಅಲಂಕಾರ ಪೂಜೆಯಿಂದ ವ್ಯಕ್ತಿಯ, ಕುಟುಂಬದ, ಊರಿನ ರಾಜ್ಯದ ದೇಶದ ಪ್ರಪಂಚದ, ಅಭಿವೃದ್ಧಿ ಸಮೃದ್ಧಿಗಳು ವೃದ್ಧಿಸಿ, ಸಂತೋಷ ಸ್ನೇಹ ಪ್ರೀತಿ ವಿಶ್ವಾಸ ಸಂಬಂಧ ಇಮ್ಮಡಿಗೊಂಡು ವಿಶ್ವಶಾಂತಿಯು ಫಲಿಸುತ್ತದೆ. ಇಂದಿನ ಆಧುನಿಕ ಶೈಕ್ಷಣಿಕ ಆರ್ಥಿಕ ಕೃಷಿ ವಿಜ್ಞಾನ ತಂತ್ರಜ್ಞಾನದ ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಜಾಗತೀಕರಣವು ಯಶಸ್ವಿಯಾಗಲು ಸೌಂದರ್ಯದ ಆರಾಧನೆಯೂ ಸಹ ಒಂದು ರೀತಿಯ ಮೂಲಾಧಾರ ಎಂಬುದು ನಿರ್ವಿವಾದ ಸತ್ಯ.

ಹಬ್ಬ ಹರಿದಿನ ಹುಟ್ಟುಹಬ್ಬ ಮದುವೆ ಮುಂಜಿ ಸೋಬನ ಸೀಮಂತ ನಾಮಕರಣ ಪೂಜೆ ಪುನಸ್ಕಾರ ಜಾತ್ರೆ ಉತ್ಸವ ಜಯಂತಿ ಮುಂತಾದ ವಿಶೇಷ ಸಡಗರ ಸಂಭ್ರಮ ದಿನಗಳಂದು ಸೌಂದರ್ಯಾಲಂಕಾರ ಮಾಡದೇ, ಮಾಡಿ ಕೊಳ್ಳದೇ ಇರುವವರಿಲ್ಲ. ಇದನ್ನು ಒಲ್ಲದ ಜೀವ- ಜೀವನ ಇಲ್ಲವೇಇಲ್ಲ. ಇದಿಲ್ಲದ ಬದುಕು ಬೇಡವೇಬೇಡ ಎನಿಸುವ ಅಲಂಕಾರಸಂತಾನವೇ ಸೌಂದರ್ಯ! ಅಲಂಕಾರ ಮತ್ತು ಸೌಂದರ್ಯ ಎರಡನ್ನೂ ಕಣ್ತುಂಬಿಕೊಳ್ಳುವ ಮೂಲಕ ಎಂಥ ಮನುಷ್ಯ-ಪ್ರಾಣಿಗೂ ಶಾಂತಿ ಸಹನೆ ತೃಪ್ತಿ ನೆಮ್ಮದಿ ಸಿಗುತ್ತದೆ. ತನು-ಮನ ಹಗುರಾಗಿ ಇನ್ನಷ್ಟುಬೇಕು ಎನಿಸುತ್ತದೆ ಮಾತ್ರವಲ್ಲ ಮತ್ತಷ್ಟುಕಾಲ ಬದುಕಿರ ಬೇಕು ಎನಿಸಿ ಆಶಾಜೀವಿಯನ್ನಾಗಿಸುತ್ತದೆ.

ಯುದ್ಧ ಕ್ರಾಂತಿ ಬರ ಕ್ಷಾಮ ಕ್ಷೇಮ ಸಾವು ನೋವು ಕಷ್ಟನಷ್ಟ ರಾಜಕಾರಣ ಮುಂತಾದ ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲಿ ಎಲ್ಲರೂ ಅಲಂಕಾರ ಅಥವಾ ಸೌಂದರ್ಯವನ್ನು ಒಂದಿಲ್ಲೊಂದು ರೀತಿ ಒಪ್ಪಿಅಪ್ಪಿ ಹಾಡಿ ಕೊಂಡಾಡುತ್ತಾರೆ. ಜಗತ್ತಿನ ಪ್ರತಿಯೊಂದು ದೇಶದ ಪ್ರತಿಯೊಂದು ಧರ್ಮದ ಪ್ರತಿಯೊಬ್ಬ ನಾಗರಿಕ ಪ್ರತಿಕ್ಷಣವು ತಿರಸ್ಕರಿಸದೆ ಪುರಸ್ಕರಿಸಿ ಅಳವಡಿಸಿಕೊಂಡ ನಿದರ್ಶನಗಳು ಅಸಂಖ್ಯಾತ. ಹೀಗಾಗಿ ಇವತ್ತಿನ ಆರೋಗ್ಯಕರ ವಾತಾವರಣಕ್ಕೆ ಜಗತ್ತಿನಲ್ಲೆ ಸೌಂದರ್ಯದ ಪಾತ್ರ ಅಮೋಘ ಅಪೂರ್ವ ಅದ್ಭುತ ಆಪ್ಯಾಯಮಾನ ಹಾಗೂ ಅತ್ಯಗತ್ಯ?! ಇದನ್ನು ಪುಷ್ಟೀಕರಿಸುವಂಥ  ಉತ್ತಮ ಉದಾಹರಣೆಯಾಗಿ ಕನ್ನಡದ ಭಗವದ್ಗೀತೆ ಎನಿಸಿದ “ಮಂಕುತಿಮ್ಮನ ಕಗ್ಗ” ದಲ್ಲಿ ಡಿ.ವಿ.ಜಿ. ಸೌಂದರ್ಯವನ್ನು ಸೊಗಸಾಗಿ ಬಣ್ಣಿಸಿದ್ದಾರೆ ಹೀಗೆ..

ಸೊಗಸು ಬೇಡವಾದ ನರಪ್ರಾಣಿ ಎಲ್ಲಿಹುದಯ್ಯ

ಮಗುವೇ, ಮುದುಕನೇ, ಪುರಾಣಿಕನೇ, ಪುರೋಹೀತನೇ? ಜಗದ ಕಣ್ ಇಣುಕಿದೆಡೆ ಮುಕುರದೆದುರೊಳು ನಿಂತು ಮೊಗವ ತಿದ್ದುವರೆಲ್ಲಾ, ಮಂಕುತಿಮ್ಮ ನನ್ನ ಅಭಿಪ್ರಾಯ ಪ್ರಕಾರ “ಸೊಗಸು” ಪದದ ಗೂಢಾರ್ಥ ಮತ್ತೇನೂ ಅಲ್ಲದೆ ಸೌಂದರ್ಯವೇ ಆಗಿರಬೇಕು?!

admin
the authoradmin

1 Comment

Leave a Reply