LatestLife style

ಪ್ರತಿ ಕಣ್ಣಿಗೂ ಸೌಂದರ್ಯವೇ ಕಾಣುವಂತಾಗಲಿ.. ನಿಜವಾದ ಸೌಂದರ್ಯ ಇರುವುದು ಕಣ್ಣಲ್ಲಿ ಅಲ್ಲ.. ಹೃದಯದಲ್ಲಿ…!

ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ  ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ ಇರಬಹುದು.. ಕುರೂಪದಲ್ಲಿಯೂ ಸೌಂದರ್ಯ ಹುಡುಕಬೇಕು ಅದು ರೂಪವೇ ಅಲ್ಲದ ಸೌಂದರ್ಯ.. ಹಾಗಾದರೆ ಸೌಂದರ್ಯ ಎಂದರೇನು? ಎಂಬುದರ ಆಳ, ಅಗಲದ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಈ ಬಾರಿ ಸೌಂದರ್ಯವನ್ನು ನೋಡುವ ರೀತಿ, ನೀತಿಯನ್ನು  ತೆರೆದಿಟ್ಟಿದ್ದಾರೆ…

ಇದನ್ನೂ ಓದಿ: ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..

ತ್ರಿಲೋಕ ತ್ರಿಮೂರ್ತಿ ಆದಿಯಾಗಿ ಜಗದ ಆದ್ಯಂತ ಪ್ರಥಮ ಪೂಜಿತನಾದ ತನ್ನ ಮಗ ವಿನಾಯಕನು ಸಹ ಲಗ್ನ ಮಾಡಿಕೊಳ್ಳಬೇಕೆಂದು ಜಗನ್ಮಾತೆ ಪಾರ್ವತಿಯು ಸದಾ ಒತ್ತಾಯಿಸುತ್ತಿರುವಾಗ ವಿಧಿ ಇಲ್ಲದೆ  ಅನಿವಾರ್ಯದಿಂದ   ಶ್ರೀ ಗಣೇಶ ದೇವರು ತಾಯಿ ಬಳಿ ಹೀಗೆ ಹೇಳುತ್ತಾರೆ…  ಅಮ್ಮ ನಿಮ್ಮ ಹಾಗೆ ಸಕಲಗುಣವುಳ್ಳ ಸೌಂದರ್ಯವತಿ ದೊರಕುವುದಾದರೆ ಬ್ರಹ್ಮಚರ್ಯೆ ಆಶ್ರಮದಿಂದ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡುವೆನಮ್ಮ” ಎಂದು..

ಇದರಿಂದ ನಮಗೆ ತಿಳಿಯುವುದೇನೆಂದರೆ ಸಾಕ್ಷಾತ್ ವಿಘ್ನೇಶ್ವರನೂ ಸೌಂದರ್ಯದ ಬಗ್ಗೆ ಕಾಳಜಿ ಹೊಂದಿದ್ದರು ಎಂಬುದು?! ಇದಲ್ಲದೇ ರಾಧಾ+ ಕೃಷ್ಣ, ಸೀತಾ+ ರಾಮ, ರತಿ+ ಮನ್ಮಥ, ಮುಂತಾದವರಿಂದ ಮೊದಲ್ಗೊಂಡು ಸೌಂದರ್ಯವು ವಾನರ-ನರ-ಸುರ- ಅಸುರ ಎಲ್ಲರಿಗು ಆಪ್ಯಾಯಮಾನದ ಆಕರ್ಷಣೆ ಆಗಿದೆ. ಇದರಲ್ಲಿ 2 ಪ್ರಮುಖ ವಿಧ: ಬಾಹ್ಯಸೌಂದರ್ಯ ಮತ್ತು ಆಂತರಿಕ ಸೌಂದರ್ಯ. ಇವೆರಡನ್ನು ಹೆಚ್ಚು ವಿಶ್ಲೇಷಣೆ ಮಾಡಿದರೆ ನೂರಾರು ಪುಟ ಸಾಲುವುದಿಲ್ಲ. ಆದರೆ, ಇವೆರಡರಲ್ಲೂ ಅಡಗಿರುವ ಸಾಮಾನ್ಯ(ಕಾಮನ್) ಅಂಶವೇ ಸೌಂದರ್ಯ! ದೃಷ್ಟಿಯಂತೆ ಸೃಷ್ಟಿ ಮತ್ತು ಸೌಂದರ್ಯ. ಇದಕ್ಕೆ ಉತ್ತಮ ಉದಾಹರಣೆ ಶ್ರವಣ ಬೆಳಗೊಳದ ಗೊಮ್ಮಟೇಶನನ್ನು ಕೆಳಕಂಡ 3 ರೀತಿ ನೋಡಿದವರು…

ಇದನ್ನೂ ಓದಿ: ಸೌಂದರ್ಯಕ್ಕೆ ಇರುವುದೆಷ್ಟು ಮುಖಗಳು.. ಸೌಂದರ್ಯದ ಸುತ್ತ ಘಟಿಸಿ ಹೋದ ಘಟನಾವಳಿಗಳೆಷ್ಟು?

1)ಪ್ರವಾಸಿಗರ ದೃಷ್ಟಿಯಲ್ಲಿ ಪ್ರಪಂಚದ ಅತಿಎತ್ತರದ ಪ್ರಥಮ ಏಕಶಿಲಾ ಸುಂದರ ಮೂರ್ತಿ!  2)ಜೈನಮತ ಸಮುದಾಯ ದೃಷ್ಟಿಯಲ್ಲಿ ಭಾರತದ ಪ್ರಥಮಭಗವಾನ್  ದಿಗಂಬರ ಜಿನದೇವಮೂರ್ತಿ!  3)ಮುಗ್ಧ ಮುದುಕಿಯ ದೃಷ್ಟಿಯಲ್ಲಿ ಜನನಾಂಗ ತೋರಿಸುತ್ತಿರುವ ಅಶ್ಲೀಲ ಶಿಲಾಮೂರ್ತಿ?! ಹಾಗಾಗಿ, ಯಾರೇ ಆಗಲಿ ಎಲ್ಲವನ್ನು ಕಾಮಾಲೆ ಕಣ್ಣಿನ ಒಂದೇ ದೃಷ್ಟಿಯಲ್ಲಿ ಕಾಣಬಾರದು! ಪ್ರತಿ ವರ್ಷದ ವಿಖ್ಯಾತ ಮೈಸೂರು ದಸರಾ ನವರಾತ್ರಿ ಉತ್ಸವದ ಅಂತಿಮದಿನ  ವಿಜಯದಶಮಿ ಯಂದು 750 ಕೇಜಿ ತೂಕದ ಚಿನ್ನದ ಅಂಬಾರಿ ಹೊತ್ತ ಜಂಬು ಸವಾರಿ ಗಂಡು ಆನೆಯು ತನ್ನ ಎಡಬಲಕ್ಕೆ ಎರಡು ಕುಮ್ಕಿ ಹೆಣ್ಣು ಆನೆಗಳ  ಜತೆ ಸಾಗುತ್ತದೆ. ಇಲ್ಲಿಯು ಸಹ ಮೂರೂ ಆನೆಗಳನ್ನು ವಿಶೇಷ ಅಲಂಕಾರದಿಂದ ಸಜ್ಜುಗೊಳಿಸಿ ಅವುಗಳ ತನುಮನ ಮುದಗೊಳ್ಳುವ ಸೌಂದರ್ಯ ವಿಜೃಂಭಿಸಿರುತ್ತದೆ.

ಇದನ್ನೂ ಓದಿ:ಸೌಂದರ್ಯವನ್ನು ಆಸ್ವಾದಿಸುವುದು, ಆರಾಧಿಸುವುದು ಮಾನವ ಸಹಜಗುಣ… ಪ್ರಕೃತಿಯೇ ಸೌಂದರ್ಯದ ಗುರು!

ಆಕಾಶದ, ಕಾಮನಬಿಲ್ಲಿನ, ರವಿಕಿರಣದ, ಚಂದ್ರ-ತಾರೆಯರ, ಧರಣಿ ಅಂಗಾಂಗ: ಬೆಟ್ಟ- ಗುಡ್ಡ- ಕಣಿವೆ- ಹಿಮ- ಪರ್ವತ- ಕಾಡು- ನದಿ- ಝರಿ- ಜಲಪಾತ- ಸಮುದ್ರ- ಸಾಗರ- ಮಿಂಚು- ಗುಡುಗು- ಸಿಡಿಲು- ಮಳೆ- ಅತಿವೃಷ್ಟಿ- ಅನಾವೃಷ್ಟಿ, ಅಗ್ನಿಪರ್ವತ-ಜ್ವಾಲಾಮುಖಿ- ಭೂಕಂಪನ, ಮುಂತಾದವುಗಳ ಮಿನುಗುವ, ಪ್ರಭಾವಳಿಯ, ಬಣ್ಣಬಣ್ಣದ, ತರಾವರಿ ನೋಟದ ಸೌಂದರ್ಯವನ್ನು ಸಂಪೂರ್ಣ ಬಣ್ಣಿಸಲು ಅದಾವ ಮಹಾಕವಿ ಪುಂಗವರಿಂದಲು ಇದುವರೆಗೆ ಸಾಧ್ಯ ವಾಗಿಲ್ಲ.  ಒಂದುವೇಳೆ ಯಾರಾದರೂ ಪ್ರಕೃತಿ-ಪುರುಷರ ಸೌಂದರ್ಯದ ಬಗ್ಗೆ ವರ್ಣಿಸಿದ್ದರೆ  ಮತ್ತು ಸೌಂದರ್ಯ ಪಾಠವನ್ನು ಓದಿ(ದ್ದರೆ) ತಿಳಿ(ಸಿ)ದಿದ್ದರೆ ಅದು ಕೇವಲ ಶೇಕಡ 2ರಷ್ಟುಮಾತ್ರ, ಇನ್ನು 98ರಷ್ಟು ಬಾಕಿ ಉಳಿಯುತ್ತದೆ ಆಚಂದ್ರಾರ್ಕ! ಇದ್ಕೊಂದು ಪದ್ಯ ಬರೆದಿದ್ದಾರೆ ಡಿ.ವಿ.ಗುಂಡಪ್ಪ…

ತಾಯೋ ತಂಗಿಯೋ ಎನಿಪ

ಶುಚಿಯ ಸೌಮ್ಯದ  ಸೊಬಗು

ಪ್ರೇಯಸಿಯ ಕರೆಯೊಲು

ಆತುರ ಪಡಿಪ ಬೆಡಗು

ಈ ಎರಡೂ ಸಮಯದ ರುಚಿ

ನಿನ್ನನ್ನು ಇಬ್ಬಗೆ ಗೊಳಿಸೆ

ಧ್ಯೇಯ ನಿನಗಾವುದೋ, ಮಂಕುತಿಮ್ಮ

ತಾಯಿ ಅಥವಾ ತಂಗಿ ಎಂದೆನಿಸುವ ಪವಿತ್ರವಾದ ಮತ್ತು  ಶಾಂತವಾದ ಎರಡು ಬಗೆಯ ಸೌಂದರ್ಯಗಳು ಪ್ರಿಯತಮೆ ಯನ್ನು ಕರೆಯುವ ಆತುರ ಉಂಟು ಮಾಡುವ ವಯ್ಯಾರದ ಸೌಂದರ್ಯ ದ ಸೊಗಡು; ಇವೆರಡೂ  ಸಹ ನಿನಗೆ ವಿಭಿನ್ನವಾದ ಆದರೆ ಸರಿಸಮನಾದ ರುಚಿಗಳಾಗಿ ನಿನ್ನನ್ನು ಎರಡು ರೀತಿ ಯೋಚಿಸುವಂತೆ ಮಾಡಿ ಎರಡು ಬಗೆಯಲ್ಲಿ ಸಾಗುವಂತೆ ಮಾಡಿ ಡೋಲಾಯಮಾನ ಆಗಿಸುತ್ತದೆ. ನಿನ್ನ ಹೆಚ್ಚು ಗಮನವು ರಸಿಕ ಶೃಂಗಾರ ಸೌಂದರ್ಯದೆಡೆಗೋ ಅಥವಾ ಪವಿತ್ರ ಸಂಬಂಧದ ಸೌಂದರ್ಯದೆಡೆಗೋ ಜಿಜ್ಞಾಸೆಗೆ ಒಳಪಡುತ್ತದೆ. ಸೌಂದರ್ಯದ ಬಗ್ಗೆ ಹೇಳುತ್ತಾ.. ಬರೆಯುತ್ತಾ..  ಹೋದರೆ ಮನುಷ್ಯನ ಇಡೀ  ಜೀವಿತಾವಧಿ ಸಾಲುವುದಿಲ್ಲ ಎನಿಸುತ್ತದೆ.

ಇದನ್ನೂ ಓದಿ:ನಿಸರ್ಗದ ಸೌಂದರ್ಯಕ್ಕೆ ಮನಸೋಲದವರುಂಟೆ..? ನಿಸರ್ಗ ಸುಂದರಿಯ ಸೌಂದರ್ಯ ಅನಂತಾನಂತ…!

ಜಗತ್ತಿನ ಜೀವಿಗಳಲ್ಲಿ ಅತ್ಯಂತ ಶ್ರೇಷ್ಠ ಜೀವಿ ಎನಿಸಿದ ಮಾನವನಲ್ಲಿ ಸೌಂದರ್ಯವು ಅಡಗಿದೆ. ವಿಶೇಷವಾಗಿ ಭಾರತೀಯರ ಕಣಕಣದಲ್ಲಿ, ಜೀವ(ನ)ದಲ್ಲಿ ರಕ್ತಗತವಾಗಿ ಬೆರೆತುಹೋಗಿದೆ. ಸೌಂದರ್ಯದ 3 ಪ್ರಮುಖ ಹಂತ:-  1]ಬಾಲ್ಯದಲ್ಲಿ – ಮಮತೆ ವಾತ್ಸಲ್ಯದ ಸೌಂದರ್ಯ, 2]ಯೌವನದಲ್ಲಿ- ಪ್ರೇಮ ಕಾಮ ಮೋಹ ಮದ ಮಾತ್ಸರ್ಯ ಕ್ರೋಧದ ಸೌಂದರ್ಯ, 3]ಮುಪ್ಪಿನಲ್ಲಿ – ವಿರಹ ವೈರಾಗ್ಯ ಚಪಲದ ಸೌಂದರ್ಯ. ಆದರೆ….ಇವೆಲ್ಲಕ್ಕೂ ಮಿಗಿಲಾದ ಮೀರಿದ ಸೌಂದರ್ಯವಿದ್ದು, ಅದು ನಿತ್ಯನೂತನ  ಅಜರಾಮರ ನಿರಂತರ ಪ್ರಕೃತಿ ಸೌಂದರ್ಯ. ಪ್ರತಿಯೊಬ್ಬ ಮನುಷ್ಯರು ಈ ನಿತ್ಯಸತ್ಯದ ಅನಂತ ಸೌಂದರ್ಯವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳೋಣ. ಸಿದ್ಧಾಂತ- ವೇದಾಂತಗಳ ನೈಜ ಸೌಂದರ್ಯವನ್ನು ಅನುಷ್ಠಾನಗೊಳಿಸಿ ನಾವೂ ಬದುಕುತ್ತಾ ಬೇರೆಯವರನ್ನೂ ಸಹ ಬದುಕಲು ಬಿಡೋಣ…

ಪ್ರತಿ ಕಣ್ಣಿಗೂ ಸೌಂದರ್ಯವೇ ಕಾಣುವಂತಾಗಲಿ.. ನಿಜವಾದ ಸೌಂದರ್ಯ ಇರುವುದು ಕಣ್ಣಲ್ಲಿ ಅಲ್ಲ.. ಹೃದಯದಲ್ಲಿ…!

admin
the authoradmin

5 Comments

  • Awesome fantastic fabulous and evergreen true story explained in detail regarding (SOUNDARYA) THE REAL BEAUTINESS OF LIFE, RELATIONSHIP & NATURE. Hats off to you the author and publisher and lot of thanks to the crew of JANAMANA KANNADA media 👏 👍 😀 🙄

  • Awesome fantastic fabulous and evergreen true story explained in detail regarding (SOUNDARYA) THE REAL BEAUTINESS OF LIFE, RELATIONSHIP & NATURE. Hats off to you the author and publisher and lot of thanks to the crew of JANAMANA KANNADA media 👏👏👏👏👏👏 👍 😀 🙄

  • Wonderful and sensational article about the real beauties of the world 🌎 ❤ ♥ 💙 😍 my sincere thanks 🙏 sir

  • ಆತ್ಮೀಯ ಲವ ಸರ್,
    ಅದ್ಭುತ ಪ್ರಕಾಶನದ ರೂವಾರಿ ನೀವು ಎಂಬುದರಲ್ಲಿ ಅನುಮಾನವೇ ಇಲ್ಲ…..

  • ಬಹಳ ವರ್ಷದ ನಂತರ ಸೌಂದರ್ಯದ ಬಗ್ಗೆ ನಿಜವಾದ ಮತ್ತು ಅರ್ಥಪೂರ್ಣ ವಾದ ಒಂದು ಆದರ್ಶಪ್ರಾಯವಾದ ಉತ್ತಮ ಲೇಖನ ಓದಿದ್ದೇವೆ, ನಮಗೆಲ್ಲ ತೃಪ್ತಿಕರವಾಗಿದೆ ಈ ಕಾರಣಕ್ಕೆ ನಿಮಗೆಲ್ಲ ನಮ್ಮ ಹೆಮ್ಮೆಯ ಧನ್ಯವಾದ ಸರ್

Leave a Reply