LatestMysore

ಕೆ.ಆರ್.ನಗರದಲ್ಲಿ ಸವಿತಾ ಮಹರ್ಷಿಗಳ ಜಯಂತಿ ಆಚರಣೆ… ಸಮಾಜದ ಮುಖ್ಯವಾಹಿನಿಗೆ ಬರಲು ಕರೆ

ಕೆ.ಆರ್.ನಗರ(ಜಿಟೆಕ್ ಶಂಕರ್): ಸೂರ್ಯವಂಶದವರಾದ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಜನಿಸಿದವರೆಂದು ಇತಿಹಾಸದಲ್ಲಿ ದಾಖಲಾಗಿದ್ದು ಅವರ ಸಾಧನೆ ಅಪಾರ ಎಂದು ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ  ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಯತ್ರಿ ಮಂತ್ರವನ್ನು ರಚಿಸಿದ ದೈವಿ ಪುರುಷರಾಗಿರುವ ಅವರು ಅಜರಾಮರ ಎಂದರು.

ಮಹಾ ಪುರುಷನ ವಂಶಸ್ಥರು ಅವರಿಗೆ ಗೌರವ ಬರುವಂತೆ ನಡೆದುಕೊಂಡು ತಮ್ಮ ಮೂಲ‌ ವೃತ್ತಿಯೊಂದಿಗೆ ಮಕ್ಕಳಿಗೆ ಉತ್ತಮ ಮತ್ತು ಉನ್ನತ‌ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು.

‌‌ಸವಿತಾ ಸಮಾಜದ ಪ್ರತಿಯೊಬ್ಬರು ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಂದ ನಡೆದುಕೊಂಡು ಸಂಘಟಿತರಾಗಿ ಎಂದು ಸಲಹೆ ನೀಡಿದ ತಹಶೀಲ್ದಾರರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿತವಚನ ನುಡಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರು ಸರ್ಕಾರ ಎಷ್ಟೇ ಕಾಯಿದೆಗಳನ್ನು ಜಾರಿಗೆ ತಂದು ಕಾನೂನು ಮಾಡಿದರು ನಮ್ಮ ಸಮಾಜವನ್ನು‌ ನಿಂದನೆ ಮಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಜಾತಿ‌ನಿಂದನೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಿದರು.

ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಆ ನಂತರ ತಾಲೂಕು ಕೇಶಾಲಂಕಾರಿಗಳ ಸಂಘದ ವತಿಯಿಂದ ತಹಶೀಲ್ದಾರರಿಗೆ ಸವಿತಾ ಮಹರ್ಷಿಯವರ ಭಾವ ಚಿತ್ರವನ್ನು ಕೊಡುಗೆಯಾಗಿ ನೀಡಿ ತಾಲೂಕು ಕಚೇರಿಯಲ್ಲಿ ಅಳವಡಿಸುವಂತೆ ಕೋರಲಾಯಿತು.

ಕಾರ್ಯಕ್ರಮಕ್ಕೆ ಬಾರದೆ ಅಸಡ್ಡೆ.. ಆಕ್ರೋಶ

ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಬಿಸಿಎಂ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಮೇಘನಾ, ಕಾರ್ಮಿಕ ನಿರೀಕ್ಷಕ ಗೋವಿಂದರಾಜು ಅವರನ್ನು ಹೊರತುಪಡಿಸಿ ಇತರ ಯಾವುದೇ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸದೆ ಅಸಡ್ಡೆ ತೋರಿಸಿದ್ದು ಸಮಾಜದ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.

ಶಾಸಕ ಡಿ.ರವಿಶಂಕರ್ ಅವರು ಅನಾರೋಗ್ಯದ ನಿಮಿತ್ತ ಜಯಂತಿ ಕಾರ್ಯಕ್ರಮಕ್ಕೆ ಬಾರದ ಹಿನ್ನೆಲೆಯಲ್ಲಿ ಇದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು ಚಕ್ಕರ್ ಹಾಕಿದರು.      ಸಿಡಿಪಿಒ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಅಗ್ನಿಶಾಮಕ, ಕೃಷಿ, ಪೊಲೀಸ್  ಮತ್ತು ರೇಷ್ಮೆ ಇಲಾಖೆಯವರು ತಮ್ಮ ಕಚೇರಿಯ ಸಿಬ್ಬಂದಿ ಹಾಗೂ ಸಹಾಯಕರನ್ನು ಕಳುಹಿಸಿ ಕಾರ್ಯಕ್ರಮಕ್ಕೂ ತಮಗೂ ಸಂಬಂದ ಇಲ್ಲ ಎಂಬಂತೆ ದಾಷ್ಠ್ಯ ಮೆರೆದರು.

ಈ ಹಿಂದೆ ಹಲವು ಜಯಂತಿ ಆಚರಣೆಯ ಜತೆಗೆ ಪೂರ್ವಭಾವಿ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದಾಗ ಶಾಸಕ ಡಿ.ರವಿಶಂಕರ್ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದ ಅಧಿಕಾರಿಗಳು ಡೋಂಟ್ ಕೇರ್ ಸಂಸ್ಕ್ರತಿ ತೋರಿದರು.

ಸವಿತಾ ಸಮಾಜದ ಹಲವು ಮುಖಂಡರು ಅಧಿಕಾರಿಗಳ ವರ್ತನೆ ಖಂಡಿಸಿದರಲ್ಲದೆ ಸಣ್ಣ ಪುಟ್ಟ ಸಮಾಜದ ಮಹನೀಯರ ಜಯಂತಿ ಆಚರಣೆಗೆ ಬಾರದೆ ಕರ್ತವ್ಯ ಲೋಪ ಎಸಗಿರುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು.

ಕರ್ಪೂರಿ ಠಾಕೋರ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಭಾಸ್ಕರ್, ಮಂಗಳ ವಾದ್ಯ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ನಾರಾಯಣ, ಸವಿತ ಸಮಾಜದ ಅಧ್ಯಕ್ಷ ಟಿ.ರಾಜೀವ್, ಕಾಯಕ ಸಮಾಜದ ಅಧ್ಯಕ್ಷ ತಿಮ್ಮಶೆಟ್ಟಿ,  ಕೇಶಾಲಂಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್, ಸಮಾಜದ ಮುಖಂಡರಾದ ವ್ಯಾನ್ ಸುರೇಶ್, ವೆಂಕಟಾಚಲ, ಮಂಜುನಾಥ್, ಯೋಗೀಶ್, ಕುಮಾರ್, ಸುಬ್ರಹ್ಮಣ್ಯ, ಪ್ರಶಾಂತ್, ಬಲರಾಮು, ಹನಸೋಗೆರೇವಣ್ಣ, ಶಿಕ್ಷಕ ರಾಜಯ್ಯ, ಭರತ್, ಚನ್ನಪ್ಪ, ಯೋಗೀಶ್, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಮೇಘನ, ಕಾರ್ಮಿಕ ನಿರೀಕ್ಷ ಗೋವಿಂದರಾಜು ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

admin
the authoradmin

Leave a Reply

Translate to any language you want