LatestMysore

ಹಳೆಯ ವಿದ್ಯಾರ್ಥಿಗಳು ಸರಕಾರಿ ಶಾಲೆಯ ಉನ್ನತಿಗೆ ಸಹಕರಿಸಿ: ಬಿಆರ್‌ ಸಿ ವೆಂಕಟೇಶ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಸರಕಾರಿಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತಮಟ್ಟಕ್ಕೆ ಹೋಗಿರುವ ಹಳೆಯ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಹೆಚ್ಚು ಮಕ್ಕಳನ್ನು ದಾಖಲು ಮಾಡಿ ಸರಕಾರಿ ಶಾಲೆಗಳ ಉನ್ನತಿಗೆ ಸಹಕರಿಸುವಂತೆ ಬಿಆರ್‌ಸಿ ವೆಂಕಟೇಶ್ ಹೇಳಿದರು.

ತಾಲೂಕಿನ ತಿಪ್ಪೂರು ಗ್ರಾಮದ ಸರಕಾರಿ ಹಿರಿಯಪ್ರಾಥಮಿಕಶಾಲೆಯಲ್ಲಿ ಏರ್ಪಡಿಸಲಾಗಿದ್ದ 2025-26ನೇ ಸಾಲಿನ ಶಾಲಾವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಖಾಸಗಿಶಾಲೆಯಲ್ಲಿ ದೊರೆಯದ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ದೊರೆಯುತ್ತಿದ್ದು ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೆ ಹೆಚ್ಚು ಸರಕಾರಿ ಸೇವೆ ಮತ್ತು ದೊಡ್ಡ ದೊಡ್ಡ ಉದ್ದಿಮೆ ನಡೆಸುತ್ತಿರುವವರು ಎಂಬುದನ್ನು ಎಲ್ಲರೂ ಅರಿಯಬೇಕೆಂದರು.

ಸರಕಾರದ ಹಲವಾರು ಯೋಜನೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಸರಕಾರಿ ಶಾಲೆಗಳು ಉತ್ತಮ ಪರಿಸರದೊಂದಿಗೆ ಉತ್ತಮ ವಾತಾವರಣದಲ್ಲಿ ನುರಿತ ತರಬೇತಿ ಹೊಂದಿದ ಶಿಕ್ಷಕರಿಂದ ಕಾರ್ಯನಿರ್ವಹಿಸುತ್ತಿದ್ದು ಪೋಷಕರು ಇದನ್ನು ಸದುಪಯೋಗಪಡಿಸಿಕೊಂಡು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲು ಮಾಡುವಂತೆ ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಬಲರಾಮನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಸ್ನೇಹಸಂಗಮ ಹಿರಿಯವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಟಿ.ಜೆ.ನಾರಾಯಣಶೆಟ್ಟಿ, ಸದಸ್ಯ ಪುರುಷೋತ್ತಮ್, ಟಿ.ಪಿ.ಮೋಹನ್‌ಕುಮಾರ್ ಮತ್ತಿತರರು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕುರಿತು ಮಾತನಾಡಿದರು.

ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತಾ, ಸದಸ್ಯೆ ಆಶಾ, ಟಿ.ಜೆ.ಮಂಜುನಾಥ್, ಮಂಜುಳಾ, ರೇಖಾ, ಕಾವ್ಯ, ಶೃತಿ, ಲಕ್ಷö್ಮಣ್, ಮಧು, ವಿಶ್ವನಾಥ, ಗೋಪಾಲಕೃಷ್ಣ, ಪ್ರದೀಪ್, ಟಿ.ಜೆ.ರಮೇಶ್, ದೊರೆಸ್ವಾಮಿ, ಮೋಹನ್‌ಕುಮಾರ್, ಸತ್ಯನಾರಾಯಣ, ಪ್ರಸನ್ನಕುಮಾರ್, ಸಿಆರ್‌ಪಿ ಲೋಕೇಶ್, ಶಾಲಾ ಮುಖ್ಯಶಿಕ್ಷಕ ಎನ್.ನಾಗರಾಜು, ಸಹಶಿಕ್ಷಕಿ ಆರ್.ನಾಗರತ್ನ, ಎಂ.ಹೆಚ್.ರೇಣುಕಾ, ಎಸ್.ಪುಷ್ಪ, ಅಮೃತಾಹರೀಶ್, ಕಾವ್ಯ ಮತ್ತು ಪೋಷಕರು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want