ಬೆಂಗಳೂರು: ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಅಹಿನಾ ಮನೋ, ಮಂಜುನಾಥ್ ಗೌರಜ್ಜಿ ನಿರ್ಮಾಣದ ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಚಲನಚಿತ್ರ “ಶಿಲ್ಪಾ ಶ್ರೀನಿವಾಸ್” ಚಿತ್ರದ ಈ ಸಿನಿಮಾ ಅಂತೀವಲ್ಲಾ ಅದು ದೊಡ್ಡ.. ಸ್ಪೇಷಲ್ ಹಾಡಿಗೆ ಹಿರಿಯ ನಟ ಅಭಿಜಿತ್ ರವರು ಹೆಜ್ಜೆ ಹಾಕಲಿದ್ದಾರೆ.

ಪ್ರತಾಪ ಭಟ್ ಸಾಹಿತ್ಯಕ್ಕೆ ಅನಿರುದ್ಧ ಶಾಸ್ತ್ರೀ ಸಂಗೀತದ ಜೊತೆಗೆ ಗಾಯಕರೂ ಆಗಿರುವ ಶಿಲ್ಪಾ ಶ್ರೀನಿವಾಸ್ ಚಿತ್ರವು ಸಿನಿಮಾ ಇಂಡಸ್ಟ್ರಿ ಯಲ್ಲಿನ ಅಳುಕು, ತೊಡಕುಗಳನ್ನು ಎತ್ತಿ ತೋರಿಸುವ ಕಥಾವಸ್ತು ಹೊಂದಿದೆ. ಈ ಚಿತ್ರ ಹೊಸಕೋಟೆ, ವೈಟ್ ಫೀಲ್ಡ್, ಬೆಳ್ಳಿಕೆರೆ. ವಾಲೇಪುರ. ಭಕ್ತರಹಳ್ಳಿ, ಕೂಗೂರು, ಗಟ್ಟಿಗನಬ್ಬೆ ಮೊದಲಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಖ್ಯಾತ ನಿರ್ಮಾಪಕರು , ವಿತರಕರೂ ಆದ ಶಿಲ್ಪಾ ಶ್ರೀನಿವಾಸ್ ಅವರೊಂದಿಗೆ ಶೋಭರಾಜ್, ನಾಗೇಂದ್ರ ಅರಸ್, ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ನಂದಿನಿ ಕಮ್ಮಯ್ಯ, ಪಂಚಾಕ್ಷರಯ್ಯ, ಮರಿಸ್ವಾಮಿ, ವೀರ ಧನುಷ್ಯ, ಕಿಶೋರ ಕಾಸರಗೋಡು, ಸ್ವಾತಿ ಲಿಂಗರಾಜ್, ಬೆಂಗಳೂರು ಮನು, ಪ್ರಿಯ ಮೊದಲಾದವರು ನಟಿಸಿದ್ದಾರೆ.

ಪ್ರಮೋದ್ ಭಾರತೀಯ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರಿ ಸಂಗೀತ, ಪ್ರತಾಪ್ ಭಟ್ ಸಾಹಿತ್ಯ, ಅಲ್ಟಿಮೇಟ್ ಶಿವು ಸಾಹಸ, ಮಲ್ಲಿಕಾರ್ಜುನ ಕಲೆ, ಮೋಹನ್ ಕುಮಾರ್ ಪ್ರಸಾಧನ, ಇಂದ್ರಕುಮಾರ್ ಸ್ಥಿರ ಚಿತ್ರಣ, ಡಿ.ಮಲ್ಲಿ ಸಂಕಲನ, ಸಾನ್ವಿ ನೃತ್ಯ ನಿರ್ದೇಶನ, ಎಂ ಜಿ ಕಲ್ಲೇಶ್, ಡಾ ಪ್ರಭು ಗಂಜಿಹಾಳ, ಡಾ ವೀರೇಶ ಹಂಡಿಗಿ ಪಿ.ಆರ್.ಓ ಅಗಿದ್ದಾರೆ. ಕೆ.ಮಲ್ಲಿ ವಡ್ಡರಹಟ್ಟಿ ಸಹ ನಿರ್ದೇಶನ, ಈಗಾಗಲೇ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಬಹುಭಾಷಾ ಯುವ ನಿರ್ದೇಶಕ ರಾಜೀವ್ ಕೃಷ್ಣ ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.









