FoodLatest

ರುಚಿ, ಶುಚಿಯಾದ ಬಿಸಿಬಿಸಿ ಸೋಯಾ ಮಸಾಲೆ ದೋಸೆ ಮಾಡುವುದು ಹೇಗೆ?

ಏನೇ ಹೇಳಿ ಹೆಚ್ಚಿನವರು ಬೆಳಗ್ಗಿನ ತಿಂಡಿಗೆ ದೋಸೆಯನ್ನು ಇಷ್ಟಪಡುತ್ತಾರೆ. ಅಲ್ಲದೆ ಹಲವು ಬಗೆಯ ದೋಸೆಗಳನ್ನು ತಯಾರಿಸಲು ಸಾಧ್ಯವಿರುವ ಕಾರಣ ಜನರಿಗೆ ಇಷ್ಟವಾಗುತ್ತದೆ. ಇಂತಹ ದೋಸೆಗಳ ಪೈಕಿ ಸೋಯಾ ಮಸಾಲೆ ದೋಸೆಯೂ ಒಂದಾಗಿದೆ. ಸೋಯಾ ಮಸಾಲೆ ದೋಸೆಯನ್ನು ತಯಾರಿಸುವುದು ಕೂಡ ಸುಲಭವೇ.

ಇದನ್ನೂ ಓದಿ: ಸಾಗು, ಉದ್ದಿನ ಇಡ್ಲಿ ಸಾಂಬಾರ್, ಅಡೆದೋಸೆ…

ಬೇಕಾಗುವ ಪದಾರ್ಥಗಳು: ಅಕ್ಕಿಹಿಟ್ಟು- ಅರ್ಧ ಕಪ್, ಸೋಯಾಹಿಟ್ಟು- ಒಂದು ಕಪ್, ಟೊಮ್ಯಾಟೋ ಪೇಸ್ಟ್- ಒಂದು ಚಮಚ, ಹಸಿಮೆಣಸಿನಕಾಯಿ ಪೇಸ್ಟ್- ಒಂದು ಚಮಚ, ದನಿಯಾಪುಡಿ- ಒಂದು ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಂತೆ, ಸಾಸಿವೆ- ಸ್ವಲ್ಪ,ತುಪ್ಪ- ಸ್ವಲ್ಪ

ಮಾಡುವ ವಿಧಾನ: ಮೊದಲಿಗೆ ಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಪೇಸ್ಟ್ ಮಾಡಿಕೊಳ್ಳಿ.  ನಂತರ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಅಕ್ಕಿಹಿಟ್ಟು, ಸೋಯಾ ಹಿಟ್ಟು, ಮೆಣಸಿನಕಾಯಿ ಮತ್ತು ಟೊಮ್ಯಾಟೋವನ್ನು ಪೇಸ್ಟ್, ಉಪ್ಪು ಸೇರಿದಂತೆ ಎಲ್ಲ ಪದಾರ್ಥಗಳನ್ನು ಹಾಕಬೇಕು. ಬಳಿಕ ಅಗತ್ಯವಿರುವಷ್ಟು ನೀರು ಹಾಕಿ ಚೆನ್ನಾಗಿ ಗಂಟುಗಳಾಗದAತೆ ಕಲೆಸಬೇಕು. ಈ ಹಿಟ್ಟಿಗೆ ಇನ್ನೊಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಹಾಕಿ ಕಾದನಂತರ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ ಸೇರಿಸಿ ತಿರುಗಿಸಬೇಕು.

ಇದನ್ನೂ ಓದಿ: ಆಲೂ ಕಟ್ಲೆಟ್, ಆಲೂಚಾಟ್, ಆಲೂಪಲಾವ್ ಮಾಡುವುದು ಹೇಗೆ?

ಇದಾದ ಬಳಿಕ ತಾವಾದಲ್ಲಿ ಒಂದು ಸೌಟು ಹಿಟ್ಟನ್ನು ದೋಸೆಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಎಣ್ಣೆ ಸವರಿ. ಸ್ವಲ್ಪ ಸಮಯ ಬಿಟ್ಟು ಇನ್ನೊಂದು ಬದಿಗೆ ತಿರುವಿ ಹಾಕಿ ಚೆನ್ನಾಗಿ ಬೇಯಿಸಿ ನಂತರ ತೆಗೆದು ಬಿಸಿಯಾಗಿದ್ದಾಗಲೇ ಸೇವಿಸಬೇಕು..

ಹೀರೆಕಾಯಿ ಹಾಗೂ ಮಿಕ್ಸ್ ಮಸಾಲೆಗಳ ವಿಶೇಷ ದೋಸೆಯ ಸ್ಪೆಷಲ್… ಇದರ ತಯಾರಿ ಹೇಗೆ?

admin
the authoradmin

Leave a Reply

Translate to any language you want