ಯುವಜನತೆ ಸಾಮಾಜಿಕ ಮೌಲ್ಯಗಳ ಸುಧಾರಣೆಗೆ ಮುಂದಾಗಬೇಕು: ಹಳೆಯೂರು ಮಧುಚಂದ್ರ
ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ

ಹೊಸೂರು(ಸಂಘಟನೆ ಮಂಜುನಾಥ್): ಇತ್ತೀಚಿನ ದಿನಗಳಲ್ಲಿ ಮಾಲ್ಯಾಧಾರಿತ ರಾಜಕಾರಣ ಪ್ರಜಾಭುತ್ವದಲ್ಲಿ ಇಲ್ಲವಾಗಿದ್ದು. ಈಗಿನ ದಿನಮಾನಗಳಲ್ಲಿ ಮೌಲ್ಯಗಳು ಕುಸಿಯುತ್ತಿದೆ. ಯುವಕರು ಈಗಿನಿಂದಲೇ ಎಚ್ಚೆತ್ತುಕೊಂಡು ಸಾಮಾಜಿಕ ಮೌಲ್ಯಗಳನ್ನು ಸುಧಾರಣೆ ತರಲು ಮುಂದಾಗಬೇಕು ಎಂದು ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಹಳೆಯೂರು ಮಧುಚಂದ್ರ ಸಲಹೆ ನೀಡಿದರು.

ಚುಂಚನಕಟ್ಟೆ ಸಮೀಪದ ಹಳೆಯೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧೈರ್ಯದಿಂದ ಮುನ್ನುಗ್ಗಬೇಕು, ಪರಮಾಣು ಶಕ್ತಿಗಿಂತ ದೊಡ್ಡ ಶಕ್ತಿ ಯುವ ಶಕ್ತಿ ಇದೆ.

ಯುವಕರು ಚುನಾವಣೆ ಸಂದರ್ಭದಲ್ಲಿ ಆಸೆ, ಆಮಿಷಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಸಾಮಾಜಿಕ ಅಧಿಕಾರ ಕೊಟ್ಟವರು ನೀವಾದರೆ, ಅದನ್ನು ಚಲಾವಣೆ ಮಾಡುವುದು ಜನಪ್ರತಿನಿಧಿಗಳು, ಅವರ ಪಾರದರ್ಶಕತೆ, ಪ್ರಾಮಾಣಿಕತೆ,ದಕ್ಷತೆಯಿಂದ ಇರಬೇಕು. ವೈಷಮ್ಯದ ರಾಜಕೀಯ ಹೊರತು ಪಡಿಸಿ ಸಾಮಾಜಿಕ ಸೇವಾ ಮನೋಭಾವದಲ್ಲಿ ರಾಜಕೀಯ ಮಾಡಬೇಕು ಎಂದು ಹೇಳಿದರು.

ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಕೆಲ ಯುವಕರು ಮಾದಕ, ಮದ್ಯಪಾನ, ಧೂಮಪಾನ ಚಟಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ ಯಾಗಿದೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸು ಇಟ್ಟುಕೊಂಡಿದ್ದಾರೆ, ಹಾಗಾಗಿ ಯುವಕರು ಯುವಕರು ದುಶ್ಚಟಗಳಿಂದ ದೂರವಿದ್ದು ಪೋಷಕರ ಆಸೆ ಕನಸುಗಳ ಈಡೇರಿಸುವ ಸರಿ ದಾರಿಯಲ್ಲಿ ಸಾಗಬೇಕು, ಎಂದರಲ್ಲದೇ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಹಲವು ಪ್ರತಿಭೆ ಇರುತ್ತದೆ.

ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿ ಪ್ರದರ್ಶನ ಮಾಡಬೇಕು ಇದರಿಂದ ದೈಹಿಕವಾಗಿ ಮಾನಸಿಕವಾಗಿ ಸಹಾಯವಾಗುವುದು. ಉತ್ತಮ ವಿದ್ಯಾಭ್ಯಾಸದೊಂದಿಗೆ ಉಜ್ವಲ ಶೈಕ್ಷಣಿಕ ಭವಿಷ್ಯದೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದು ಕರೆ ನೀಡಿದರು. ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಹೆಚ್ ಆರ್ ಮಹೇಶ್, ತಾ.ಪಂ ಮಾಜಿ ಸದಸ್ಯ ಹಳೆಯೂರು ಪ್ರಭಾಕರ್, ಜೆಡಿಎಸ್ ಯುವ ಮುಖಂಡ ಶ್ರೀಧರ್ ಗೌಡ , ಪ್ರವೀಣ್, ಈರಣ್ಣ ಸೇರಿದಂತೆ ಮತ್ತಿತರರು ಇದ್ದರು.







