ArticlesLatest

ಶಿಕ್ಷಕರ ಕುರಿತಂತೆ  ಸರ್ವಪಲ್ಲಿ ಡಾ.ರಾಧಾಕೃಷ್ಣನ್  ಅವರು ಹೇಳಿದ್ದೇನು?  ವಿದ್ಯಾರ್ಥಿಗಳಿಗೆ ಹೇಳಬಹುದಾದ ಕಿವಿಮಾತು!

“ಮಿಯರ್ ಇನ್‌ಫ಼ರ್ಮೇಶನ್ ಈಸ್ ನಾಟ್ ನಾಲೆಡ್ಜ್  & ಮಿಯರ್ ನಾಲೆಡ್ಜ್ ಈಸ್ ನಾಟ್ ವಿಸ್‌ಡಮ್” ಎಂದು ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಘೋಷಿಸಿದ್ದಾರೆ. ಪ್ರತಿಯೊಬ್ಬ ಶಿಷ್ಯನ ಜೀವನವೆಂಬ ಕಟ್ಟಡಕ್ಕೆ ಅರಿವೆಂಬ ಅಡಿಪಾಯವನ್ನು ಸರಿಯಾಗಿ ಹಾಕುವ ದಕ್ಷ ಅಭಿಯಂತರನಾಗಿ ಸಕಲ ಸದ್ ವಿದ್ಯೆಯನ್ನು ನಿರ್ವಿವಾದಿತವಾಗಿಯೂ ನಿರ್ಭಯವಾಗಿಯೂ ಸಕಾಲದಲ್ಲಿ ಕಲಿಸುವ ಪಾರಂಗತನಾಗಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು..

ಪಠ್ಯ ವಿಷಯದ ಜತೆಗೇ ಪಶು ಪ್ರಾಣಿ ಪಕ್ಷಿ ಸಂಕುಲದ ಮತ್ತು ರಾಷ್ಟ್ರ [ಸಂ]ಪತ್ತುಗಳ ಉ(ದುರು)ಪಯೋಗ ಅದರಿಂದಾಗುವ ಆ[ವಿ]ಪತ್ತುಗಳ ಪರಿಚಯ ಮಾಡಿಸಬೇಕು. ಸಮಾಜ ಕಂಟಕ ಕಾನೂನು ಬಾಹಿರ ಚಟುವಟಿಕೆಗಳಿಂದ ಉಂಟಾಗುವ ನ[ಕ]ಷ್ಟದ ಬಗ್ಗೆ ಶಿಷ್ಯರಿಗಷ್ಟೆ ಅಲ್ಲ ಇಡೀ ಸಮಾಜಕ್ಕೆ ತಿಳಿಯ ಹೇಳಬೇಕು. ಗುರು-ಶಿಷ್ಯರಿಂದ ಪ್ರಪಂಚದ ಅಭಿವೃದ್ಧಿಯೂ ಆಗಬಹುದು, ಸರ್ವನಾಶವೂ ಆಗಬಹುದು. ಗುರು-ಶಿಷ್ಯ ಸರಿ ಇದ್ದರೆ ಮಾತ್ರ ದೇಶ-ಕೋಶ ಸರಿ ಇರುತ್ತದೆ. ಪಾಳು ಬಿದ್ದ ದೇಶವನ್ನೂ ಪುನರ್ ‌ನಿರ್ಮಿಸಬಹುದು. ಇಲ್ಲವಾದರೆ ಅದೆಂಥ ದೇಶವೇ ಆಗಿರಲಿ ಕಾಗೆ-ಗೂಬೆಗಳ ನಾ(ಬೀ)ಡಾಗುತ್ತದೆ!  ಯಥಾಗುರು ತಥಾಶಿಷ್ಯ, ಯಥಾರಾಜ ತಥಾಪ್ರಜ ನಾಣ್ಣುಡಿಯನ್ನು ಇವತ್ತಿಗೂ ಒಪ್ಪುವುದು ಅನಿವಾರ್ಯ. ಎಲ್ಲ ಕಾಲದಲ್ಲು ಪರಮ ಗುರು, ಪವಿತ್ರ ಶಿಷ್ಯ ವರ್ಗವು ಇದ್ದೇ ಇರುತ್ತದೆ.ಅಲ್ಪಸ್ವಲ್ಪ ಚೋರ್‌ ಗುರು, ಚಂಡಾಲ ಶಿಷ್ಯ ವರ್ಗವೂ ಅಲ್ಲಲ್ಲೆ ಇರಬಹುದೇನೋ?!

ಇತ್ತೀಚೆಗೆ ಬೋರ್‌ ಗುರು ಮತ್ತು ಭಂಡ ಶಿಷ್ಯರ ವರ್ಗವು ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ! ‘ಕೇಡುಗಾಲಕ್ಕೆ ನಾಯಿಯು ಮೊಟ್ಟೆಇಟ್ಟಂತೆ’  ಇವತ್ತಿನ ದಿನ  ‌ಗುರುಯಾರು? ಶಿಷ್ಯಯಾರು? ಎಂದು ನಿಖರವಾಗಿ ಗುರುತಿಸಲು ಅಸಾಧ್ಯವಾದ ಹೀನಾಯ ಸ್ಥಿತಿ ತಲುಪಿದೆ! ಗುರು-ಶಿಷ್ಯರು ಭೇಟಿ ಆದಾಗ ಹಾಯ್-ಬಾಯ್ ಹೇಳಿ ತಮ್ಮದೇ ಆದ ಚಿತ್ರ-ವಿಚಿತ್ರ ಲೋಕದಲ್ಲಿ ಕಾರ್-ಬಾರ್ ಪಿಜ಼ಾ-ಬರ್ಗರ್ ಜೆರಾಕ್ಸ್-ಈನೋಟ್ಸ್ ಲ್ಯಾಪ್‌ಟಾಪ್-ಪೆನ್‌ಡ್ರೈವ್ ಆಡಿಯೊ-ವೀಡಿಯೊ ಇಯರ್ಫ಼ೋನ್-ಮೊಬೈಲ್ ಟ್ಯಾಬ್ಲೆಟ್-ಇಂಟರ್‌ನೆಟ್ ಇತ್ಯಾದಿ AI ಅಗತ್ಯಕ್ಕಿಂತ ಹೆಚ್ಚು ಬಳಸುವಲ್ಲಿ ವ್ಯಸನಿ [ಅಡಿಕ್ಟ್] ಆಗುತ್ತಿದ್ದಾರೆ.

ವಿದ್ಯಾರ್ಜನೆಗೆ ಅವಶ್ಯಕವಾದ ಧೀರ್ಘ ಬಾಳಿಕೆಯ ಆರೋಗ್ಯಕರ ವಾದ ಎಲ್ಲರಿಗೂ ಎಟುಕುವ ಪೆನ್ನು ಹಾಳೆ ನೋಟ್ ‌ಬುಕ್ ಟೆಕ್ಸ್ಟ್‌ ಬುಕ್ ಡಿಕ್ಷನರಿ ಗೈಡ್ ಜಾಮಿಟ್ರಿ ಕಾಪಿ ಪುಸ್ತಕ ಮಾಯವಾದವು?! ಮುಂಜಾನೆ ಮತ್ತು ಸಂಜೆ ಓದು ಅಭ್ಯಾಸ ಕಾಗುಣಿತ ಮಗ್ಗಿ ಪದ್ಯ ಕಂಠ [ಮನೆ]ಪಾಠ ಸಮೂಹ ಅಧ್ಯಯನ ಜತೆಗೆ ಸಕಾಲದಲ್ಲಿ ವಿದ್ಯೆಬುದ್ಧಿ ನಡೆನುಡಿ ಕಲಿತು ತಾಯಿ ತಂದೆ ಗುರುಹಿರಿಯರ ಸೋದ[ರ]ರಿ ಬಂಧುಬಳಗ ನೆರೆಹೊರೆಯ ಶುಭಾಶುಭ ಕಾರ್ಯಗಳಲ್ಲಿ ಭಾಗವಹಿಸುವುದು, ಎಲ್ಲರ ಒಡನಾಟ ಸಲಹೆ ಬುದ್ಧಿವಾದ ಸಹಜೀವನ ಸಹಭೋಜನ ದೇಶ ಸುತ್ತಿ ಕೋಶ ಓದಿ ಸು[ವಿ]ಜ್ಞಾನ ಬೆಳೆಸಿಕೊಳ್ಳುವುದು.

ಸೂರ್ಯೋದಯಕ್ಕೆ ಮುನ್ನ ಎದ್ದು ಯೋಗಾಭ್ಯಾಸ ವ್ಯಾಯಾಮ ಗಾಯನ/ವಾದ್ಯ ಸಂಗೀತ ಅಭ್ಯಾಸ ಮನೆಗೆಲಸದಲ್ಲಿ ನೆರವಾಗುವುದು. ಮುಂತಾದ ಸುಬುದ್ಧಿ-ಸನ್ನಡತೆಗಳು ಸ್ಮಶಾನ ಸೇರುತ್ತಿವೆಯೇನೊ?! ವಯೋಧರ್ಮಕ್ಕೆ ಅನುಗುಣವಾಗಿ ಕಲಿಕೆ-ಗಳಿಕೆ ಮಾಡಲು ಆಗುತ್ತಿಲ್ಲ, ಸಕಾಲಕ್ಕೆ ವಿವಾಹ/ಮಕ್ಕಳ ಸೌಭಾಗ್ಯ ದೊರಕುತ್ತಿಲ್ಲ. ಎಲ್ಲದರಲ್ಲು ಯಾವಾಗಲೂ ‘ವೇಗ[ಸ್ಪೀಡ್]’ ಎಲ್ಲ[ರೂ]ವೂ ಅಪ[ಆ]ಘಾತಕ್ಕೆ ಈಡಾಗಿ ಅಂಗಾಂಗ ವೈಫ಼ಲ್ಯ ‘ಕೋಮಾ’ ಇತ್ಯಾದಿ ದುರಂತಕ್ಕೆ ತುತ್ತಾಗುತ್ತಾರೆ!  ಗುರು-ಶಿಷ್ಯರು ಸಮಾಜಕ್ಕೆ ಮತ್ತು ಜಗತ್ತಿಗೆ ‘ವರ’ವಾಗಬೇಕೆ ಹೊರತು ‘ಶಾಪ’ವಾಗಬಾರದು.

ಇಷ್ಟಕ್ಕೂ ಶಿಷ್ಯರು ಹೇಗಿರಬೇಕು ಎಂಬುದನ್ನು ನೋಡಿದ್ದೇ ಆದರೆ ದಿನಚರಿಗೆ ಅನುಗುಣವಾಗಿ ಸ-ಸಮಯಕ್ಕೆ ಎದ್ದು ದೇವರನ್ನು ಸ್ಮರಿಸಿ ತಾಯಿತಂದೆ ಗುರುಹಿರಿಯರಿಗೆ ನಮಸ್ಕರಿಸಿ ಅಭ್ಯಾಸ ಪ್ರಾರಂಭಿಸಬೇಕು. ನಿಷ್ಠೆಯಿಂದ ಪ್ರತಿ ತರಗತಿಗೂ ಹಾಜರಾಗಿ ನಿಶ್ಯಬ್ಧ ಶ್ರದ್ಧೆಯಿಂದ ಉಪನ್ಯಾಸ ಆಲಿಸಬೇಕು. ಪ್ರತಿಯೊಬ್ಬ ಗುರುವಿಗೂ ಸಮಾನ ಗೌರವ ತೋರಿಸಿ ಪಾಠ ಅರ್ಥವಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು. ಶೀಲ, ವಿನಯ, ನಂಬಿಕೆ, ಚಾರಿತ್ರ್ಯ, ಸ್ವಚ್ಚ ಇರಬೇಕು. ‘ವಿದ್ಯಾತುರಾಣಾಂ ನ ನಿದ್ರಾಹಾರಂ’ ‘ಹಿಂದೆಗುರು ಮುಂದೆಗುರಿ’ “ಸ್ಟೂಡೆಂಟ್ ‌ಲೈಫ಼್ ಈಸ್ ಎ ಗೋಲ್ಡನ್ ‌ಲೈಫ಼್” ಅನ್ವರ್ಥವಾಗುವಂತೆ ನಡೆನುಡಿ ಕಾಪಾಡಿಕೊಳ್ಳಬೇಕು.

ಪೋಷಕರು, ಶಾಲಾಕಾಲೇಜು, ಸರ್ಕಾರ, ಸಮಾಜ, ಗೆಳೆಯರು, ಸಹಪಾಠಿ, ಗ್ರಂಥಾಲಯ, ಮಾಧ್ಯಮ, ಆದಿಯಾಗಿ ಎಲ್ಲರಿಂದಲೂ ದೊರಕುವ ಸೌಲಭ್ಯ ಮತ್ತು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಒಂದುವೇಳೆ ಈ ಹಂತದಲ್ಲಿ ಉಡಾಫೆ, ಬೇಜವಾಬ್ದಾರಿಯ ಕೆಟ್ಟ ಛಾಳಿಯಿಂದ ಏನಾದರು ವಿದ್ಯೆಯು ನೈವೇದ್ಯ ಆದಾಗ ಕೆಳದರ್ಜೆ ನೌಕರನಾಗಿ ಹೀನಾಯ ಜೀವನ ನಡೆಸಬೇಕಾಗುತ್ತದೆ ಎಚ್ಚರಿಕೆ?! ಅಡ್ಡದಾರಿ ಹಿಡಿದು ಕಾನೂನುಬಾಹಿರ ಚಟುವಟಿಕೆಗಳ ದಾಸನಾಗಿ, ಅಪರಾಧಿಯಾಗಿ, ಸೆರೆಮನೆ(ಜೈಲು) ಸೇರಿ ಜೀವಂತ ಶವವಾಗಿ ಬದುಕಬೇಕಾಗುತ್ತದೆ ಜೋಕೆ..?!

ವಿದ್ಯಾರ್ಥಿ ಸಮೂಹಕ್ಕೆ ಕಾಮನ್ ಗೈಡ್‌ಲೈನ್ಸ್ ಏನೆಂದರೆ? ಯಾವುದೇ ಕಾರಣಕ್ಕೂ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಲು ಕಲಿಯಿರಿ.  ಕಷ್ಟಪಟ್ಟು ಓದುವಬದಲು ಇಷ್ಟಪಟ್ಟು ಅಭ್ಯಾಸಮಾಡಿರಿ. ರಾಂಕ್‌ ಗೋಸ್ಕರ ಅಂಕಗಳಿಕೆ ಬದಲು ಅರ್ಥೈಸಿಕೊಂಡು ಅಂಕಗಳಿಸಿರಿ. ತಡರಾತ್ರಿ ಹಾಸ್ಟೆಲ್, ಮನೆ ತಲುಪಿ ನಿಮ್ಮ ವಾರ್ಡನ್, ಪೋಷಕರನ್ನು ಬಲಿಕೊಡದಿರಿ. ಸ್ವಯಂಕೃತ ಅಪರಾಧಕ್ಕೆ ‘ಶಾಪ’ ‘ಹಣೆಬರಹ’ ಮುಂತಾದ ಮೂಢ, ಅಪನಂಬಿಕೆ ಹೆಸರಿಟ್ಟು ಸು[ಪೊ]ಳ್ಳು ನೆಪವೊಡ್ಡಿ ಜಾರಿಕೊಳ್ಳದಿರಿ. ‘ರ್‍ಯಾಗಿಂಗ್’ ಶಿಕ್ಷಾರ್ಹ ಅಪರಾಧ, ಇದನ್ನು ಬುಡಸಹಿತ ಕಿತ್ತೊಗೆಯಿರಿ.

ಲವ್- ಲವಿಕೆಯಿಂದ ಇರಲು ಪಠ್ಯೇತರ ಚಟುವಟಿಕೆ/ಸ್ಫರ್ಧೆಗಳಲ್ಲಿ ಭಾಗವಹಿಸಿರಿ. ಶ್ರವಣ-ದೃಶ್ಯ ಮಾಧ್ಯಮದ ಮೂಲಕ ಶೈಕ್ಷಣಿಕ ಜ್ಞಾನ ಪಡೆವ ಪ್ರವೃತ್ತಿ ಜತೆಗೆ ಮನರಂಜನಾತ್ಮಕ ಹಾಸ್ಯಪ್ರಜ್ಞೆ ಬೆಳೆಸಿಕೊಳ್ಳಿರಿ. ಅಂದಾಭಿಮಾನ ದ್ವೇಷಾಸೂಯೆ ಪ್ರೇ[ಕಾ]ಮ ಚಾ[ಡೇ]ಟಿಂಗ್ ಮುಂತಾದ ಅ[ತೀ]ನಾಗರಿಕತೆ ವರ್ಜಿಸಿ. ದ್ವೇಷವನ್ನು ಪ್ರೀತಿಯಿಂದಲೂ ಕ್ರಾಂತಿಯನ್ನು ಶಾಂತಿಯಿಂದಲೂ ಗೆಲ್ಲುವ ಸಹನಾಶೀಲತೆ ಬೆಳಿಸಿಕೊಳ್ಳಿರಿ. ಕಳೆದುಹೋದರೆ ಮತ್ತೆಂದೂ ದೊರಕದ ಸಮಯ-ಹಣ-ಜ್ಞಾನ-ಪ್ರವಚನ-ಸ್ನೇಹ-ವಿಶ್ವಾಸ-ಸೌಲಭ್ಯ, ಅವಕಾಶವನ್ನು ವ್ಯರ್ಥ ಮಾಡದಿರಿ. ತಪ್ಪುಯಾರೆ ಮಾಡಲಿ ಧೈರ್ಯವಾಗಿ ಪ್ರಶ್ನಿಸಿರಿ, ತಿದ್ದುಕೊಳ್ಳಲು ಅವಕಾಶ ನೀಡಿರಿ. ಪುನರಾವರ್ತನೆ ಆಗದಂತೆ ಸರಿಪಡಿಸಿಕೊಳ್ಳಲು ಪರಿಶ್ರಮ ಮತ್ತು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಯಾವ ಕಾರಣಕ್ಕಾದರೂ ಯಾರನ್ನೂ ನೋಯಿಸಬಾರದು.

ತಾಯಿತಂದೆ ಗುರುಹಿರಿಯರ ಬಗ್ಗೆ ಭಯ-ಭಕ್ತಿ ಬದಲು ಗೌರವ-ವಿಧೇಯತೆ ಇರಿಸಿಕೊಳ್ಳಿ. ಅಮಾನವೀಯತೆ ಅಶ್ಲೀಲತೆ ಜಾತೀಯತೆ ಕೊಳಕುರಾಜಕೀಯ ಅನಿಷ್ಟಗಳಿಂದ ದೂರವಿರಿ.  ಧೂಮಪಾನ ಮದ್ಯಪಾನ ಡ್ರಗ್ಸ್ (addict) ವ್ಯಸನಿಯಾಗಿ ಕುಟುಂಬಕ್ಕೆ-ಸಮಾಜಕ್ಕೆ-ರಾಷ್ಟ್ರಕ್ಕೆ ಕಂಟಕರಾಗಬೇಡಿ.

ಬ್ಲೂಫಿಲಂ ಡಿಸ್ಕೊತೆಕ್-ಕ್ಲಬ್ ಮುಂತಾದ ಅಶ್ಲೀಲ-ಅಸಭ್ಯ ದುಶ್ಚಟಗಳ ದಾಸರಾಗದಿರಿ. ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್-ಗೈಡ್, ರೆಡ್‌ಕ್ರಾಸ್, ಸಂಚಾರಿಪೊಲೀಸ್, ಸಹಾಯವಾಣಿ ಮೂಲಕ ಅಂಗವಿಕಲರಿಗೆ ಅಬಲರಿಗೆ ವಯೋವೃದ್ಧರಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿರಿ. ದೇಶದ್ರೋಹ, ನಕ್ಸಲೈಟ್, ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಸಂಸ್ಕೃತಿ ಪರಂಪರೆ ರಾಷ್ಟ್ರಾಭಿಮಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ನೀವೂ ಬದುಕಿರಿ, ಇತರರನ್ನೂ ಬದುಕಲು ಬಿಡಿ! ವಿದ್ಯಾರ್ಥಿ ಜೀವನ ಸರಿಯಾಗಿದ್ದರೆ ಮಾತ್ರ ‘ಗುರಿ’ತಲುಪಿ ಪದವಿ ಹುದ್ದೆ ಕೀರ್ತಿ ಹಣ ಉನ್ನತ ಸ್ಥಾನಮಾನ ಬಾಳಸಂಗಾತಿ ಎಲ್ಲವೂ ಹುಡುಕಿಕೊಂಡು ಬರುತ್ತವೆ! ಅದು ಸರಿಯಿಲ್ಲವಾದರೆ ವೈಸ್-ವರ್ಸ! ಆಯ್ಕೆ ನಿಮ್ಮದು?

ಇದನ್ನೂ ಓದಿ: ಗುರುವಿಗೆ ನೀಡಿರುವ ಆ ಸ್ಥಾನ ಎಂತಹದ್ದು ಗೊತ್ತಾ? ಇಷ್ಟಕ್ಕೂ ಗುರು ಎಂದರೆ ಯಾರು? ಆತ ಹೇಗಿರಬೇಕು?

 

admin
the authoradmin

5 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want