ಮೈಸೂರು: ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಬೆಳಚಲವಾಡಿ ಬಿ ಆರ್ ಶಿವಕುಮಾರ್ ಆಯ್ಕೆಯಾಗಿದ್ದು, ಮುಂದಿನ ಸಂಘದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಚಟುವಟಿಕೆಗಳ ಬಗ್ಗೆ ಚಿಂತನೆ ನಡೆಸಿರುವ ಅವರು ಈ ಸಂಬಂಧ ಮೈಸೂರಿನ ಸುತ್ತೂರು ಶ್ರೀ ಮಠದಲ್ಲಿ ಪರಮ ಪೂಜ್ಯರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಶ್ರೀಗಳ ಭೇಟಿಯಸಂದರ್ಭದಲ್ಲಿ ಸಂಘದ ಗೌರವ ಸಂಸ್ಥಾಪಕ ಗೌರವ ಸಲಹೆಗಾರ ಮತ್ತು ಜೆಎಸ್ಎಸ್ ಮಹಾ ವಿದ್ಯಾ ಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರೂ ಆದ ಶ್ರೀ ಕಲ್ಮಳ್ಳಿ ನಟರಾಜು ಉಪಸ್ಥಿತರಿದ್ದರು.

ಇವರೊಂದಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಕಾನ್ಯಾ ಶಿವ ಮೂರ್ತಿ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕೆ ವಿ ಮಲ್ಲೇಶ್, ಕರ್ನಾಟಕ ರಾಜ್ಯ ಪ್ರತಿಧ್ವನಿ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀ ಪ್ರತಿಧ್ವನಿ ಪ್ರಸಾದ್, ಸಂಘದ ಕಾರ್ಯದರ್ಶಿ ಎಚ್ ಎಂ ಮಹದೇವಪ್ರಸಾದ್, ಖಜಾಂಚಿ ಬಾಗಳಿ ಮಹೇಶ್, ನಿಕಟ ಪೂರ್ವ ಅಧ್ಯಕ್ಷ ಆಲೂರು ಬಸವರಾಜು, ಮೈಸೂರು ಜಿಲ್ಲಾ ಜಗನ್ಮಾತೆ ಅಕ್ಕಾ ಮಹಾದೇವಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಮೋಹನ್, ನಿರ್ದೇಶಕಿ ಶ್ರೀಮತಿ ದೇವನೂರು ಶಿಲ್ಪಾ ನಂದೀಶ್ ಬಾನಳ್ಳಿ ಸಂತೋಷ ಮಹೇಶ್ ಮಹದೇವಪ್ಪ ಮೊದಲಾದವರಿದ್ದರು.
ಪ್ರಭು ಲಿಂಗ ಲೀಲೆ ನಾಟಕದ ಕಲಾವಿದರನ್ನು ಅಭಿನಂದಿಸಿ ಆಶೀರ್ವದಿಸಿದ ಸುತ್ತೂರು ಶ್ರೀಗಳು








