ಸ್ವರ್ಣ ನೃಹಿಂಹ ಸೇವಾ ಟ್ರಸ್ಟಿನಿಂದ ಶ್ರೀ ಚಕ್ರ ನವರಾತ್ರಿ… ಏನೆಲ್ಲ ಕಾರ್ಯಕ್ರಮಗಳು ನಡೆಯಲಿವೆ ಗೊತ್ತಾ?

ಮೈಸೂರು: ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ನಗರದ ಸೋನಾರ್ ಸ್ಟ್ರೀಟ್‌ನಲ್ಲಿರುವ ಗುರು ನಿವಾಸದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀ ಚಕ್ರ ನವರಾತ್ರಿ ಆರಂಭವಾಗಿದೆ.
ಶ್ರೀ ವೆಂಕಟಾಚಲ ಅವಧೂತ ಗುರುಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಅರ್ಜುನ ಅವಧೂತರ ಉಪಸ್ಥಿತಿಯಲ್ಲಿ ಆರಂಭವಾದ ನವರಾತ್ರಿ ಆಚರಣೆಯಲ್ಲಿ ಮೊದಲ ದಿನ ಶ್ರೀ ಮಾಹಾ ಗಣಪತಿ ಹೋಮ ನಡೆಯಿತು. ಸಂಜೆ ನೂರಾರು ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆ ನಡೆಯಿತು.
ಅರ್ಜುನ ಅವಧೂತರು ಲಲಿತಾ ಸಹಸ್ರನಾಮ ಪಾರಾಯಣ ಮಾಡಿದ ಸುಮಂಗಲೆಯರಿಗೆ ಪುಷ್ಪವೃಷ್ಠಿಗೆರೆದರು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಆಶೀರ್ವಾದ ಮಾಡಿದರು. ಗುರು ನಿವಾಸ ತಳಿರು-ತೋರಣ ಪುಷ್ಪಗಳಿಂದ ಮತ್ತು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ಮಂಗಳವಾರ ಶ್ರೀ ಆದಿತ್ಯಾದಿ ನವಗ್ರಹ ಹೋಮ ನಡೆಯಿತು. ಸೆ.24ರಂದು ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹೋಮ, ಸೆ.25ರಂದು ಶ್ರೀ ದಕ್ಷಣಾ ಮೂರ್ತಿ ಹೋಮ, ಸೆ.26ರಂದು ಶ್ರೀ ಸೂಕ್ತ ಹೋಮ, ಸೆ.27ರಂದು ಶ್ರೀ ಲಲಿತಾ ಹೋಮ, ಸೆ.28ರಂದು ಶ್ರೀ ಸರಸ್ವತಿ ಹೋಮ, ಸೆ.29 ರಂದು ಶ್ರೀ ಸುಬ್ರಹ್ಮಣ್ಯ ಹೋಮಗಳು ಪ್ರತಿನಿತ್ಯ ಬೆಳಗ್ಗೆ 6.30ರಿಂದ 8ಗಂಟೆವರೆಗೆ ಗುರು ನಿವಾಸದಲ್ಲಿ ನಡೆಯಲಿದೆ.
ಸೆ.30ರಂದು ಸಂಜೆ 6 ಗಂಟೆಗೆ ಹಾರೋಹಳ್ಳಿ ಗ್ರಾಮ(ಮಲ್ಲಹಳ್ಳಿ ಹತ್ತಿರ)ದಲ್ಲಿರುವ ಶ್ರೀ ವೆಂಕಟಾರ್ಜುನ ಧ್ಯಾನಮಂದಿರದಲ್ಲಿ ದುರ್ಗಾದೀಪ ನಮಸ್ಕಾರ ಮತ್ತು ಅ.1ರಂದು ಶ್ರೀ ಚಂಡಿಕಾ ಹೋಮಗಳು ನಡೆಯಲಿದೆ. ಪ್ರತಿ ನಿತ್ಯ ಬೆಳಗ್ಗೆ ಹೋಮ ಮತ್ತು ಸಂಜೆ ಲಲಿತಾ ಸಹಸ್ರನಾಮ ಪಾರಾಯಣದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.