ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರತಿಭಟನೆ… ಎಂಎಲ್ಸಿ ಹೆಚ್ ವಿಶ್ವನಾಥ್ ಆಕ್ರೋಶ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ದರ ಕುಸಿತ ಹಿನ್ನೆಲೆಯಲ್ಲಿ ಗುರುವಾರ ಮಾರುಕಟ್ಟೆಗೆ ಭೇಟಿ ನೀಡಿದ ರೈತರು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ತಂಬಾಕು ಹರಾಜು ಮಾರುಕಟ್ಟೆ, ಮುಂಭಾಗ ರೈತರು ಧರಣಿ ನಡೆಸಿದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ ಮೈಸೂರು ಭಾಗದಲ್ಲಿ ಹೆಚ್ಚು ವಾಣಿಜ್ಯ ಬೆಳೆಯಾದ ತಂಬಾಕನ್ನು ರೈತರು ತಮ್ಮ ಜೀವನವನ್ನು ಮುಡುಪಿಟ್ಟು ಬೆಳೆದು ಸಾಲಗಾರರಾಗಿದ್ದು ಈ ವರ್ಷದಲ್ಲಿ ಪ್ರಾರಂಭದ ಮಾರುಕಟ್ಟೆ ದಿನದಂದು ನೀಡಿದ್ದ ದರವನ್ನು ಮುಂದುವರಿಸುತ್ತೇವೆ ಎಂದು ಇದೀಗ ರೈತನ ಗಾಯದ ಮೇಲೆ ಬರೆ ಎಳೆದಂತೆ ಪ್ರತಿ ಕೆಜಿಗೆ 50 ರೂ ಕಡಿಮೆ ಮಾಡಿ ತಂಬಾಕನ್ನು ಕಂಪನಿಗಳು ಮೋಸ ಮಾಡಿ ಖರೀದಿ ಮಾಡುತ್ತಿವೆ ಪ್ರಾರಂಭದಲ್ಲಿ ಇದ್ದ ಬೆಲೆ ಮುಂದುವರಿಯ ಬೇಕು 50 ರಿಂದ 70 ಕಡಿಮೆಯಾಗಿದೆ, ಆ ಬೆಲೆ ಸಿಗುವ ತನಕ ನಿರಂತರ ಹೋರಾಟ ಮಾಡಲಾಗುವುದು ಎಂದರು.

ರಾತ್ರಿ ಹಗಲು ಧರಣಿ ಮಾಡಲಾಗುವುದು ಶುಕ್ರವಾರ ಬೆಳಗ್ಗೆ ಯಿಂದ ಜಿಲ್ಲೆಯ ಎಲ್ಲಾ ಹರಾಜು ಮಾರುಕಟ್ಟೆಗಳಲ್ಲಿ ನಿರಂತರ ಧರಣಿ ಜೊತೆಗೆ ನ್ಯಾಯ ಸಿಗುವ ತನಕ ರೈತ ಸಂಘ ಧರಣಿ ಮುಂದುವರಿಸಲಾಗುವುದು ರೈತರಿಗೆ ಸೂಕ್ತ ಬೆಲೆ ನೀಡದಿದ್ದರೆ ತಂಬಾಕು ಮಂಡಳಿ ಹಾಗೂ ಕೇಂದ್ರ ಸರ್ಕಾರ ತಕ್ಷಣ ಬೆಳೆ ರಜೆ ಘೋಷಣೆ ಮಾಡಿ ಪ್ರತಿ ಲೈಸನ್ಸ್ ದಾರರಿಗೆ 25 ಲಕ್ಷ ಪರಿಹಾರ ನೀಡಿ ತಂಬಾಕು ನಿಷೇಧ ಮಾಡಲಿ, ಇಲ್ಲದ್ದರೆ ರೈತನಿಗೆ ನ್ಯಾಯಯುತವಾದ ಬೆಲೆ ಸಿಗುವವರೆಗೂ ನಿರಂತರ ಧರಣಿ ಮಾಡಲಾಗುವುದು ಎಂದರು.
ಧರಣಿಯಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರೈತ ಮುಖಂಡರಾದ ಕಲ್ಕುಣಿಕೆ ಹರೀಶ್, ಚಂದ್ರೇಗೌಡ, ಅಗ್ರಹಾರ ರಾಮೇಗೌಡ, ಸತೀಶ್, ಹರೀಶ್ ಕಾವಲ್, ಕಟ್ಟೆ ಮಳಲವಾಡಿ ಮಹದೇವ್, ಸೇರಿದಂತೆ ಹಲವಾರು ರೈತ ಮುಖಂಡರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ರೈತರ ಸಮಸ್ಯೆ ಆಲಿಸಿದ ಎಂಎಲ್ಸಿ ಹೆಚ್ ವಿಶ್ವನಾಥ್ ಹೇಳಿದ್ದೇನು?
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಡಿ.ದೇವರಾಜ ಅರಸು ಹರಾಜು ಮಾರುಕಟ್ಟೆಯಲ್ಲಿ ರೈತರು ತಂಬಾಕು ಬೆಲೆ ಕುಸಿತ ಹಿನ್ನೆಲೆಯಲ್ಲಿ ಮಾರುಕಟ್ಟೆ ಬಂದ್ ಮಾಡಿ ರಸ್ತೆ ತಡೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಹರಾಜು ಮಾರುಕಟ್ಟೆಯ ರೈತ ಭವನದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಅವರು, ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳು ತಂಬಾಕು ಬೆಳೆಗಾರರ ನೆರವಿಗೆ ಬರಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿದರು.

ರಾಜ್ಯ ಸರ್ಕಾರವು ನನಗೆ ಜವಾಬ್ದಾರಿ ಇಲ್ಲವೆಂದು ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯ ಸರ್ಕಾರವು ರೈತರ ನೆರವಿಗೆ ಬರಬೇಕು ಏಕೆಂದರೆ ತಂಬಾಕುರಿನಿಂದ ಬರುವ ತೆರಿಗೆಯನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು 500 ಕೋಟಿ ನೀಡುತ್ತಿದೆ ಜೊತೆಗೆ ಕೇಂದ್ರ ಸರ್ಕಾರಕ್ಕೆ 3 ಸಾವಿರ ಕೋಟಿ ತೆರಿಗೆ ಹಣ ಬರುತ್ತಿದ್ದು ಎರಡು ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಜವಾಬ್ದಾರಿ ಇಲ್ಲದಂತೆ ಮಂತ್ರಿಗಳು ಕೂಡ ಯಾವೊಬ್ಬ ರಾಜ್ಯ ಸರ್ಕಾರದ ಜುನಾಯಿತ ಪ್ರತಿನಿಧಿಗಳು ಕೂಡ ರೈತರಿಗೆ ಸ್ಪಂದಿಸುತ್ತಿಲ್ಲವೇ ನಿಮಗೆ ಕೇಂದ್ರ ಸರ್ಕಾರ ತಂಬಾಕಿನ ತೆರಿಗೆ ಹಣ ನೀಡುತ್ತಿಲ್ಲವೇ ಯಾಕೆ ಮುಖ್ಯಮಂತ್ರಿಗಳು ರೈತರಿಗೆ ಅನ್ಯಾಯವಾದಾಗ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಲ್ಲದೆ ನೀವು ರೈತರ ಪರ ಯಾಕೆ ನಿಲ್ಲುತ್ತಿಲ್ಲ ಎಂದು ಪ್ರಶ್ನಿಸಿದರು.

ಎರಡು ಸರ್ಕಾರಗಳು ಜವಾಬ್ದಾರಿ ಇಲ್ಲದಂತೆ ರೈತರನ್ನು ನಡೆಸಿಕೊಂಡು ರೈತರ ಜೊತೆ ಚೆಲ್ಲಾಟವಾಡುತ್ತಿವೆ . ಐ ಟಿ ಸಿ ಕಂಪನಿಗಳು ಹೇಗೆ ಸಂಸದರನ್ನು ಸಾಕಿ ಕೊಳ್ಳುತ್ತಾರೆ ಎಂಬುದು ಗೊತ್ತಿದೆ ನಮ್ಮ ತಂಬಾಕು ಇಲ್ಲದೆ ಐಟಿಸಿ ಕಂಪನಿ ವಹಿವಾಟು ಮಾಡಲು ಸಾಧ್ಯವಿಲ್ಲ ಕಂಪನಿ ಉಳಿಯಲು ಸಾಧ್ಯವಿಲ್ಲ ಎಂದರು.
ರೈತನ ಶ್ರಮ ದುಡಿಮೆ ಬೆವರಿನಿಂದ ಸರ್ಕಾರಕ್ಕೆ ಕೋಟ್ಯಾಂತರ ತೆರಿಗೆ ಹಣ ಬರುತ್ತಿಲ್ಲವೇ ರೈತರಿಗೆ ಸ್ಪಂದಿಸುವಂತಹ ಕೆಲಸವಾಗಬೇಕು. ಪ್ರಾರಂಭದಲ್ಲಿ ಮಾರುಕಟ್ಟೆ ಇದ್ದಂತ ಬೆಲೆ ಏಕಾಏಕಿ ಖುಷಿಯಲ್ಲೂ ಕಾರಣವೇನು ಕೇಂದ್ರ ಸರ್ಕಾರ ಖರೀದಿಧಾರಿಗೆ ಹೇರಿದ್ದ ತೆರಿಗೆಯನ್ನು ಹಿಂಪಡೆದಿದೆ ಆದರೂ ಕಂಪನಿಯ ಖರೀದಿದ್ದಾರರು ರೈತರಿಂದ ಕಡಿಮೆ ಬೆಲೆಗೆ ಕೊಂಡುಕೊಳ್ಳುವ ಹುನ್ನಾರ ಮಾಡುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ನಿಂಗರಾಜ ಮಲ್ಲಾಡಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಕಾಪ್ ಕಮಿಟಿ ಅಧ್ಯಕ್ಷ ನಿಲವಾಗಲು ಪ್ರಭಾಕರ್, ರೈತ ಮುಖಂಡರಾದ ಅಗ್ರಹಾರ ರಾಮೇಗೌಡ, ಸತೀಶ, ಚಂದ್ರೇಗೌಡ,ಹರೀಶ್ ಕಾವಲ್, ಹಿರೀಕ್ಯಾತನಹಳ್ಳಿ ಸುರೇಶ್, ಹರೀಶ್, ಮಹೇಶ್, ಗಿರೀಶ್, ಪ್ರಸನ್ನ , ಸಂಪತ್, ಗೋಪಾಲ್, ಕಟ್ಟೆಮಳಲವಾಡಿ ಅಶೋಕ, ಶ್ರೀಧರ್, ಮಹದೇವ್, ನಂಜುಂಡೇಗೌಡ, ಸೇರಿದಂತೆ ಸಾವಿರಕ್ಕೂ ಹೆಚ್ಚು ರೈತರು ಇದ್ದರು.







