LatestLife style

ಉಪ್ಪಿಗಿಂತ ರುಚಿ ಬೇರೆ ಇಲ್ಲ… ಒಪ್ಪಿಕೊಂಡೋರು ದಡ್ಡರಲ್ಲ… ತಿಳಿದವರು ಹೀಗೆ ಹೇಳಿದ್ದೇಕೆ?

ಉಪ್ಪುತಿಂದ ಮನೆಗೆ ದ್ರೋಹ ಬಗೆಯಬೇಡ, ಉಪ್ಪುಕೊಟ್ಟವರನ್ನ ಮುಪ್ಪಿನತನಕ ಮರೆಯಬೇಡ.. “ಉಪ್ಪಿಗಿಂತ ರುಚಿ ಬೇರೆಇಲ್ಲ” ಮುಂತಾದ ನಾಣ್ಣುಡಿಗಳನ್ನು ಕೇಳಿದ್ದೇವೆ. ಆದರೆ ಊಟಕ್ಕೆ ಕುಳಿತಾಗ ಎಲೆಯ ತುದಿಗೆ ಬಡಿಸುವ ಉಪ್ಪು ಕಂಪಲ್ಸರಿ ಏಕೆಂದು ತಿಳಿಯೋಣ? ಈ ಬಗ್ಗೆ ತುಸು ಗಂಭೀರವಾಗಿ ಆಲೋಚಿಸಿ  ಕೆಲಕಾಲ ಕೈಗೊಂಡ ಹಲವು ಗ್ರಂಥಗಳ ಅಧ್ಯಯನದ ಪ್ರಕಾರ ಉಪ್ಪಿನ ಉಪಯೋಗವನ್ನು ವೈಜ್ಞಾನಿಕವಾಗಿ ತಿಳಿದುಕೊಂಡು, ಓದುಗರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಮಾಡಿದ್ದಾರೆ.

ಇದನ್ನೂ ಓದಿ: ಜೀವನದಲ್ಲಿ ಈ ಮೂರು ಹಣತೆಗಳು ಸದಾ ಬೆಳಗುತ್ತಿದ್ದರೆ..

ಊಟದ ಯಾವುದೇ ಪದಾರ್ಥಕ್ಕೆ ಉಪ್ಪು ಕಡಿಮೆ ಆಗಿದ್ದರೆ ಸೇರಿಸಿಕೊಳ್ಳಲು ಮಾತ್ರವಲ್ಲ. ಹಲವಾರು ಊಟದ ಕಾರ್ಯಕ್ರಮಗಳಲ್ಲಿ ಅಡುಗೆ ಭಟ್ಟರು ಹೆಚ್ಚು ಐಟಮ್ ಗಳನ್ನು ಮತ್ತು ಹೆಚ್ಚಿನ ಪ್ರಮಾಣದ ಅಡುಗೆಯನ್ನು ತಯಾರಿಸುವಾಗ ಪಾತ್ರೆಗಳನ್ನು ಸಂಪೂರ್ಣ ಸ್ವಚ್ಚವಾಗಿ ತೊಳೆಯುವುದಿಲ್ಲ. ಜಿಡ್ಡು-ಕೊಳೆ ಹಾಗೆಯೇ ಅಂಟಿದ್ದು ಅದರಲ್ಲೇ ಉಳಿದು ಬಿಡುತ್ತದೆ.

ಇದೇ ಪಾತ್ರೆಗಳಲ್ಲಿ ಬೇರೆ ಬೇರೆ ಅಡುಗೆ ಮಾಡಿದಾಗ ಇದರಲ್ಲಿದ್ದ ಜಿಡ್ಡು ವಿಷ (ಕಿಲುಬು) ಆಗಿ ಪರಿವರ್ತನೆಗೊಂಡು ಎಲ್ಲಾ ಅಡುಗೆಯಲ್ಲಿ ಬೆರೆತು ಪುಡ್ ಪಾಯಿಸನ್ ಆಗುತ್ತದೆ?! ಬಹಳಷ್ಟು ಕಡೆ ವಿವಿಧ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ನಂತರ ತಲೆಸುತ್ತು ಬರುವುದು, ವಾಂತಿ-ಭೇದಿ ಆಗುವುದು ಸಾಮಾನ್ಯ. ಇಂತಹ ಸುದ್ದಿಯನ್ನು ಪತ್ರಿಕೆಯಲ್ದಿ ಓದಿದ್ದೇವೆ, ಟಿ.ವಿ. ಮೂಲಕ ಕಂಡು ಕೇಳಿದ್ದೇವೆ. ಈ ಕಾರಣಕ್ಕೆ ಪಂಕ್ತಿ ಊಟದ ಎಲೆಯ ಮೇಲೆ ಮೊದಲು ಉಪ್ಪನ್ನು ಬಡಿಸುತ್ತಾರೆ. ಇದರ ನಿಜವಾದ ಕಾರಣ ಅಥವ ಮಹತ್ವ ತಿಳಿಯದವರು ಸಪ್ಪೆ ಆದಾಗ ಮಾತ್ರ ಉಪ್ಪನ್ನ ಉಪಯೋಗಿಸುತ್ತಾರೆ, ಇಲ್ಲವಾದರಿಲ್ಲ.

ಇದನ್ನೂ ಓದಿ: ಸುಖ ನಿದ್ದೆ ಎಂದರೆ ಏನು? ಅದಕ್ಕಾಗಿ ಏನು ಮಾಡಬೇಕು?

ಉಪ್ಪಿನ ಮಹತ್ವ ಏನೆಂದು ನೋಡುತ್ತಾ ಹೋದರೆ.. ಯಾರೇ ಇರಲಿ ಎಲ್ಲಿಯೇ ಆಗಲಿ ಪ್ರತಿಸಾರಿಯೂ ಊಟ ತಿನ್ನುವ ಮುನ್ನ ಉಪ್ಪನ್ನು ಬೆರಳ ಮೂಲಕ ಬಾಯಲ್ಲಿ ಚಪ್ಪರಿಸಿ(ನೆಕ್ಕಿ)ದರೆ ಸಾಕು ಸದರಿ ಅಡುಗೆಯಲ್ಲಿ ಬೆರೆತ ಕಿಲುಬು ವಿಷವನ್ನು ಅಥವಾ ಹಲ್ಲಿಯ ಮದ್ದುಹಾಕಿದ ವಿಷವನ್ನು ತಡೆಗಟ್ಟಬಹುದು. ಇಂಥ ಪ್ರಯೋಜನಕಾರಿ ಮಾಹಿತಿಯನ್ನು ತಿಳಿಸುವ ಸತ್ಯಾಂಶ ಹಂಚಿಕೊಂಡಿದ್ದೇನೆ.

ಶೇ 90ರಷ್ಟು ಜನರು ಈ ಲವಣದ ಆರೋಗ್ಯಕರ ಸತ್ವ ಮಹತ್ವ ಸತ್ಯ ಅರಿತಿಲ್ಲ. ಸಪ್ಪೆ ಇದ್ದರೆ ಮಾತ್ರ ಉಪ್ಪನ್ನು ಉಪಯೋಗಿಸುತ್ತಾರೆ. ಅಡುಗೆಯವರಾಗಲೀ ಊಟ ಬಡಿಸುವವರಾಗಲೀ “ರುಚಿಗೆ ತಕ್ಕಂತೆ ಸೇರಿಸಿಕೊಳ್ಳಲಷ್ಟೇ ಉಪ್ಪು” ಎಂಬ ಉದ್ದೇಶದ ಸಾಮಾನ್ಯ ಜ್ಞಾನವಿದ್ದು ಇದನ್ನೇ ಎಲ್ಲರು ನಂಬಿದ್ದಾರೆ. ಇನ್ನಾದರೂ ಈ ಮೇಲಿನ ಒಂದು ಉತ್ತಮ ಟಿಪ್ಸ್ ಅನುಸರಿಸಿ “ಉಪ್ಪಿನ ಮಹತ್ವ” ತಿಳಿಯಿರಿ ಮತ್ತು ಬೇರೆಯವರಿಗೂ ತಿಳಿಸುತ್ತಿರಿ?!

admin
the authoradmin

7 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want