LatestMysore

ತೊಂಡಾಳು ಗ್ರಾಮದ ಪ್ರಸಿದ್ಧ ಶ್ರೀ ಬಾಣಂತಮ್ಮ ಶ್ರೀ ಸೋಮೇಶ್ವರ ಉತ್ಸವ ಆರಂಭ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ತೊಂಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಾಣಂತಮ್ಮ ಹಾಗೂ ಶ್ರೀ ಸೋಮೇಶ್ವರ ಹಬ್ಬದ ಉತ್ಸವವು ಪ್ರತಿ ವರ್ಷದಂತೆ ಯುಗಾದಿ ಹಬ್ಬಕ್ಕೂ ಮುನ್ನ ಪ್ರಾರಂಭಗೊಳ್ಳುವ ಹಬ್ಬವು ಈ ವರ್ಷವೂ ಮಾ.7ರಿಂದ ಮಾ.11 ವರೆಗೆ ಬಹಳ ವಿಜೃಂಭಣೆ ನಡೆಯಲಿದೆ.

ಮಾರ್ಚ್ 7ರಂದು ಶನಿವಾರ ಗ್ರಾಮದಲ್ಲಿ ತಮಟೆಯೊಂದಿಗೆ ಮಕ್ಕಳು ಹಾಗೂ ಗ್ರಾಮಸ್ಥರು ಸಗಣಿ ಓಕಳಿ ನಡೆಯುತ್ತದೆ. ಮಾರ್ಚ್ 8ರಂದು ಗ್ರಾಮದ ಹೊರವಲಯದಲ್ಲಿರುವ ಶ್ರೀ ಬಾಣಂತಮ್ಮ ನಾ ಗುಹಾಂತರ ದೇವಾಲಯಕ್ಕೆ ರಾತ್ರಿ ಹನ್ನೆರಡು ಗಂಟೆಗೆ ಹರಕೆ ಹೊತ್ತವರು ಬಾಳೆಗೊನೆಯೊಂದಿಗೆ ಗ್ರಾಮಸ್ಥರು ಬಾಣಂತಮ್ಮನನ್ನು ನೆನಪಿಸುವ ಪ್ರಭಾವಳಿ ಎಳನೀರು ಅಡಕೆ ಹೊಂಬಾಳೆ ಒಡವೆಗಳನ್ನು ಹೊರಟು ನಂತರ ಗರ್ಭಗುಡಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ  ದೇವಿಗೆ ಹಣ್ಣು ಮುರಿಯಂಗಿಲ್ಲ ಕಾಯಿ ಹೊಡೆಯಂಗಿಲ್ಲ ಕೇವಲ ಕರ್ಪೂರದಾರತಿ ಮತ್ತು ತುಪ್ಪದ ಅನ್ನದ ನೈವೇದ್ಯ ಇಲ್ಲಿ ಪರಮಪೂಜೆಯಾಗಿದೆ.

ಮಾ.9 ರಂದು ಸೋಮವಾರ ಲಕ್ಷ್ಮಣ್ ತೀರ್ಥ ನದಿಯ ಪಕ್ಕದಲ್ಲಿರುವ ನಾಲೆಯ ಏರಿಯ ಮೇಲೆ ಇರುವ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ಸ್ವಾಮಿಗೆ ಹೋಮ ಹವನ  ಅಭಿಷೇಕ ವಿಶೇಷ ಪೂಜೆ ಮಹಾಮಂಗಳಾರತಿ ಮತ್ತು ಅನ್ನದಾನ ನಡೆಯುತ್ತದೆ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಪ್ರಸಾದವನ್ನು ಸ್ವೀಕರಿಸುತ್ತಾರೆ.

ಮಾ.10 ಮಂಗಳವಾರ ಶ್ರೀ ಬಾಣಂತಮ್ಮ ಹಾಗೂ ಶ್ರೀ ಸೋಮೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ರಾತ್ರಿ 8:30ಕ್ಕೆ ತ್ರಿಜನ್ಮ ಮೋಕ್ಷ ಅಥವಾ ಜಯ ವಿಜಯರ ಶಾಪವಿಮೋಚನೆ ಎಂಬ ಪೌರಾಣಿಕ ನಾಟಕವನ್ನು  ಅಭಿನಯಿಸಲಿದ್ದಾರೆ. ಅಧ್ಯಕ್ಷತೆ ಯನ್ನು ತಾಲೂಕಿನ ಶಾಸಕರಾದ ಜಿ.ಡಿ ಹರೀಶ್ ಗೌಡರು. ಉದ್ಘಾಟನೆ . ಮಾಜಿ ಶಾಸಕ  ಮಂಜುನಾಥ್ ಮಂಜುನಾಥ್. ಜ್ಯೋತಿ ಬೆಳಗಿಸುವರು.

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್. ಶಾಸಕರಾದ ರವಿಶಂಕರ್ ಭಾಗವಹಿಸಲಿದ್ದಾರೆ.  ಮಾ. 11 ರಂದು ಶ್ರೀ ಸೋಮೇಶ್ವರ ಸ್ವಾಮಿಯ ಮೆರವಣಿಗೆ ಉತ್ಸವ ಗ್ರಾಮದಲ್ಲಿ ನಡೆಯುತ್ತದೆ ಮಾರ್ಚ್ 12ರಂದು ಗುರುವಾರ ಶ್ರೀ ಬಾಣಂತಮ್ಮ ಹಾಗೂ ಶ್ರೀ ಸೋಮೇಶ್ವರ ಸ್ವಾಮಿಯ ಉತ್ಸವ ಸಂಪನ್ನಗೊಳ್ಳುತ್ತದೆ.

admin
the authoradmin

Leave a Reply

Translate to any language you want