District

ಪೂರ್ಣ ಚೇತನ ಶಾಲೆಯಿಂದ ‘ಮೈಸೂರು ಹೆರಿಟೇಜ್ ಟ್ರೆಷರ್ ಹಂಟ್’… ಭಾಗವಹಿಸಿ ಬಹುಮಾನ ಗೆಲ್ಲಿ…!

ಮೈಸೂರು: ಮೈಸೂರು ಎಂದರೆ ನಮ್ಮ ಸ್ಮೃತಿಪಟಲದಲ್ಲಿ ಮೂಡುವುದು ಇಲ್ಲಿನ   ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳು. ಆದರೆ ಇಂದು ನಗರದ ಹೊಸ ಪೀಳಿಗೆಯ ಮಕ್ಕಳಿಗೆ ಇಲ್ಲಿನ ಪಾರಂಪರಿಕ ಶ್ರೀಮತಿಕೆಯ ಬಗ್ಗೆ ಅರಿವು ಕಡಿಮೆಯಾಗುತ್ತಿದೆ ಅನ್ನುವ ಸನ್ನಿವೇಶದ ನಡುವೆ, ವಿದ್ಯಾರ್ಥಿಗಳು ಹಾಗು ಅವರ ಹೆತ್ತವರಿಗಾಗಿ,   ಪೂರ್ಣ ಚೇತನ ಶಾಲೆ ಇದೆ ಮೊದಲ ಬಾರಿಗೆ ‘ಮೈಸೂರು ಹೆರಿಟೇಜ್ ಟ್ರೆಷರ್ ಹಂಟ್’ ಅನ್ನುವ ವೈಶಿಷ್ಟ್ಯಪೂರ್ಣ  ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಜೊತೆಗೆ ಇದೆ  ಮೊದಲ ಬಾರಿಗೆ ಮೈಸೂರಿನಲ್ಲಿ ಶಾಲೆಯ ಮಕ್ಕಳು ಹೆರಿಟೇಜ್ ಫ್ಲ್ಯಾಶ್ ಮೊಬ್ ಪ್ರದರ್ಶನ ನೀಡಲಿದ್ದಾರೆ.

ಮಕ್ಕಳಲ್ಲಿ ಸಂಸ್ಕೃತಿಯ ಅರಿವು ಮೂಡಿಸುವ ಹಾಗೂ ಪೋಷಕ–ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 16 ವರ್ಷದೊಳಗಿನ ಮಕ್ಕಳಿಗಾಗಿ ರೂಪಿಸಲಾದ ಈ ವಿಶೇಷ ಟ್ರೆಷರ್ ಹಂಟ್ ಕಾರ್ಯಕ್ರಮ ಡಿಸೆಂಬರ್ 21 ನಡೆಯಲಿದೆ. ಅಂದು  ಮಕ್ಕಳು ತಮ್ಮ ಪೋಷಕರ ಜೊತೆಗೆ   ಬೆಳಿಗ್ಗೆ 7 ಗಂಟೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರಂಭವಾಗುವ ಈ ಸ್ಪರ್ಧೆಯಲ್ಲಿ  ಪಾಲ್ಗೊಳ್ಳಬಹುದು.  ಇದೇ ಸ್ಥಳದಿಂದ ಸ್ಪರ್ಧೆ   ಆರಂಭವಾಗಿ ಅಂತ್ಯಗೊಳ್ಳಲಿದೆ.

ಭಾಗವಹಿಸುವ ಪ್ರತೀ ತಂಡಕ್ಕೂ ಕಾರ್ಯಕ್ರಮದ ಆರಂಭದಲ್ಲೇ  10 ಸುಳಿವುಗಳನ್ನು ಒಳಗೊಂಡ ವಿಶೇಷ ಟ್ರೆಷರ್ ಕಿಟ್ ನೀಡಲಾಗುತ್ತದೆ. ತಂಡಗಳು ಮೈಸೂರು ನಗರದ ಪ್ರಮುಖ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳಿಗೆ ತೆರಳಿ ಸುಳಿವುಗಳನ್ನು ಬಗೆಹರಿಸಬೇಕು. ಕಾರ್ಯಕ್ರಮದ  ಇನ್ನೊಂದು  ವಿಶೇಷ ಆಕರ್ಷಣೆ  ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳಿಂದ  ಮೈಸೂರು ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಹೆರಿಟೇಜ್ ಫ್ಲ್ಯಾಶ್ ಮೊಬ್ ಪ್ರದರ್ಶನ.

ಈ ಕುರಿತು ಮಾತನಾಡಿದ ಶಾಲೆಯ ಸಿಇಒದರ್ಶನ್ ರಾಜ್, ಮಕ್ಕಳು ಮೈಸೂರಿನ ಪರಂಪರೆಯನ್ನು ಅನುಭವದ ಮೂಲಕ ತಿಳಿದುಕೊಳ್ಳಬೇಕು. ಜೊತೆಗೆ ಪೋಷಕರೊಂದಿಗೆ ಗುಣಮಟ್ಟದ ಸಮಯ ಕಳೆಯುವ ಅವಕಾಶ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.  ಈ ಸ್ಪರ್ಧೆಯ   ವಿಜೇತರಿಗೆ ₹10,000, ₹7,500 ಮತ್ತು ₹5,000 ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು.  ಭಾಗವಹಿಸುವ ಎಲ್ಲಾ  ತಂಡಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ ₹200 ನಿಗದಿಪಡಿಸಲಾಗಿದೆ. ಮಾಹಿತಿಗೆ  ಸಂಪರ್ಕಿಸಿ 7204836513

admin
the authoradmin

Leave a Reply