ಯಳಂದೂರು: ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾಗಿದ್ದು ಸಾವಿರಾರು ಕೋಳಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಎಂ. ರಾಜೇಶ್ ಎಂಬುವರಿಗೆ ಸೇರಿದ ಕೋಳಿ ಫಾರಂ ಇದಾಗಿದೆ. ಸರ್ವೇ ನಂ. 532/02 ರಲ್ಲಿ 3.31 ಎಕರೆ ಜಮೀನು ಇವರ ತಂದೆ ಬಿ. ಮುದ್ದುಬಸಪ್ಪರವರ ಹೆಸರಿನಲ್ಲಿದೆ. ಇದರಲ್ಲಿ 1 ಎಕರೆ ಪ್ರದೇಶದಲ್ಲಿ ಇವರು ಕಳೆದ 15 ವರ್ಷಗಳಿಂದಲೂ ಇವರು ಕೋಳಿ ಫಾರಂ ನಡೆಸುತ್ತಿದ್ದರು. ಇದರಲ್ಲಿ ಮಾಂಸದ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಇದಕ್ಕಾಗಿ ದೊಡ್ಡದಾದ 2 ಶೆಡ್‌ಗಳನ್ನು ನಿರ್ಮಾಣ ಮಾಡಿದ್ದರು.
ಒಟ್ಟು 7 ಸಾವಿರ ಕೋಳಿಗಳನ್ನು ಇವರು ಸಾಕುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಒಂದು ಶೆಡ್‌ಗೆ ಬೆಂಕಿ ಬಿದ್ದಿದ್ದು ಇದರಲ್ಲಿದ್ದ 4 ಸಾವಿರ ಕೋಳಿಗಳು, ಕೋಳಿಗೆ ಹಾಕುವ 10 ಕ್ವಿಂಟಾಲ್ ಫೀಡ್ಸ್, ಅನೇಕ ಪರಿಕರಗಳು, ವಿದ್ಯುತ್ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. 15 ವರ್ಷಗಳಲ್ಲಿ ಇಂತಹ ಯಾವುದೇ ಅವಘಡಗಳು ಆಗಿಲ್ಲ. ನನಗೆ ಮುಖ್ಯ ಕಸುಬು ಇದಾಗಿತ್ತು. ಇದರೊಂದಿಗೆ ಉಳಿಕೆ ಜಮೀನಿನಲ್ಲಿ ವ್ಯವಸಾಯವನ್ನು ಮಾಡುತ್ತಿದ್ದೆ. ಯಾವ ಕಾರಣಕ್ಕೆ ಬೆಂಕಿ ಬಿದ್ದಿದೆ ಎಂಬುದು ಗೊತ್ತಾಗುತ್ತಿಲ್ಲ.

ಇಲ್ಲಿಗೆ ಹಾಕಲಾಗಿದ್ದ ಶೀಟ್‌ಗಳು ಸಹ ಬೆಂಕಿಯ ಕೆನ್ನಾಲಿಗೆ ಸುಟ್ಟು ಮುದುಡಿವೆ. ಅಲ್ಲದೆ ಪಕ್ಕದಲ್ಲಿದ್ದ ತೆಂಗಿನ ಮರಗಳಿಗೂ ಕೂಡ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದು 14 ಫಲ ಕೊಡುವ ತೆಂಗಿನಮರಗಳು ಸಹ ಸುಟ್ಟು ಕರಕಲಾಗಿದೆ. ಕೋಳಿ ಮರಿಗಳಿಗೆ ನೀರುಣಿಸುವ ಪರಿಕರಗಳು ಸಹ ಸುಟ್ಟಿವೆ. ಇದನ್ನೇ ನಂಬಿ ಇವರು ಬದುಕು ಕಟ್ಟಿಕೊಂಡಿದ್ದು ಈಗ ಇದಕ್ಕೆ ದೊಡ್ಡ ಹೊಡೆತ ಬಿದ್ದಿದೆ. 12 ರಿಂದ 14 ಲಕ್ಷ ರೂ. ನಷ್ಟವಾಗಿದೆ. ಸಂಬಂಧಪಟ್ಟವರು ನನಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಎಂ. ರಾಜೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಗೆ ಇವರು ದೂರು ನೀಡಿದ್ದಾರೆ. ಸ್ಥಳಕ್ಕೆ ಠಾಣೆಯ ಪೊಲೀಸ್ ಸಿಬ್ಬಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.
ಫಲ ಕೊಡುವ ತೆಂಗಿನಮರಗಳು ಸಹ ಸುಟ್ಟು ಕರಕಲಾಗಿದೆ. ಕೋಳಿ ಮರಿಗಳಿಗೆ ನೀರುಣಿಸುವ ಪರಿಕರಗಳು ಸಹ ಸುಟ್ಟಿವೆ. ಇದನ್ನೇ ನಂಬಿ ಇವರು ಬದುಕು ಕಟ್ಟಿಕೊಂಡಿದ್ದು ಈಗ ಇದಕ್ಕೆ ದೊಡ್ಡ ಹೊಡೆತ ಬಿದ್ದಿದೆ. 12 ರಿಂದ 14 ಲಕ್ಷ ರೂ. ನಷ್ಟವಾಗಿದೆ. ಸಂಬAಧಪಟ್ಟವರು ನನಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಎಂ. ರಾಜೇಶ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಗೆ ಇವರು ದೂರು ನೀಡಿದ್ದಾರೆ. ಸ್ಥಳಕ್ಕೆ ಠಾಣೆಯ ಪೊಲೀಸ್ ಸಿಬ್ಬಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಿದ್ದಾರೆ.








