CinemaLatest

ಸಿನಿಮಾರಂಗದಲ್ಲಿ ವೇದವಲ್ಲಿ ನಟಿ ಎನ್.ಆರ್.ಸಂಧ್ಯಾ ಆಗಿ ಮಿಂಚಿದ್ದು ಹೇಗೆ? ಇಷ್ಟಕ್ಕೂ ಇವರ ಮಗಳು ಯಾರು?

ಇವತ್ತಿನ ತಲೆಮಾರಿಗೆ ನಟಿಯಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಚಿತ್ರರಂಗ ಮತ್ತು ರಾಜಕೀಯ ರಂಗದಲ್ಲಿ ತನ್ನದೇ ಆದ ಇತಿಹಾಸ ಬರೆದ ಕುಮಾರಿ ಜಯಲಲಿತಾ ಅವರ ಬಗ್ಗೆ ಗೊತ್ತಿರಬಹುದು. ಆದರೆ ಅವರ ತಾಯಿ ವೇದವಲ್ಲಿ ಅಲಿಯಾಸ್ ಎನ್.ಆರ್.ಸಂಧ್ಯಾ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲವೇನೋ? ಆದರೆ ಅವರೊಬ್ಬ ನಟಿ ಎಂದರೆ ಅಚ್ಚರಿಯಾಗಬಹುದು.. ಆದರೆ ಅದು ನಿಜ.. ಆದರೆ ಅವರು ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಅಂದಿನ ಕಾಲಕ್ಕೆ ಜನಪ್ರಿಯ ನಟಿಯಾಗಿದ್ದರು. ಇವರು ಕೇವಲ 48ವರ್ಷಕ್ಕೆ ಇಹಲೋಕ ತ್ಯಜಿಸುವಂತಾಯಿತು… ಇವರ ಬಗ್ಗೆ ಗೊತ್ತಿಲ್ಲದವರಿಗೆ ತಿಳಿಸುವ ಸಲುವಾಗಿ ಕುಮಾರಕವಿ ನಟರಾಜ್ ಅವರು ಇಲ್ಲಿ ಸಂಧ್ಯಾ ಅವರ ವೈಯಕ್ತಿಕ ಬದಕು ಮತ್ತು ಅದರಾಚೆಗಿನ ಅವರ ಸಿನಿಮಾ  ಬದುಕಿನ  ಬಗ್ಗೆ ತೆರೆದಿಟ್ಟಿದ್ದಾರೆ.

ಶ್ರೀಮತಿ ಕೋಮಲವಲ್ಲಿ ಮತ್ತು ಶ್ರೀ ರಾಮನ್ ದಂಪತಿಯ ಹಿರಿಯ ಮಗಳಾದ ನಟಿ ಸಂಧ್ಯಾರವರ ಮೂಲ ಹೆಸರು ಎನ್.ಆರ್.ವೇದವಲ್ಲಿ. 1924ರ ಆಸುಪಾಸು ಆಗಿನ ಬ್ರಿಟಿಷ್ ಭಾರತದ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಶ್ರೀರಂಗಂನಲ್ಲಿ ಜನಿಸಿದ ವೇದವಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಗಳಿಸಲಾಗಲಿಲ್ಲ. ಇವರ ತಂದೆ ಇಡೀ ಕುಟುಂಬದೊಡನೆ ಕಾರಣಾಂತರದಿಂದ ಅಂದಿನ ಮೈಸೂರು ರಾಜ್ಯದ ಮೇಲುಕೋಟೆಗೆ ಬಂದು ನೆಲೆಸಿ ಕೆಲಕಾಲ ಗುಮಾಸ್ತನಾಗಿಯೂ ಕಾರ್ಯ ನಿರ್ವಹಿಸಿದರು. ಕಾಲಕ್ರಮೇಣ ಇವರ ಮಗಳು ವೇದವಲ್ಲಿ ಮೈಸೂರಿನಲ್ಲಿ ಬೆರಳಚ್ಚುಗಾರ್ತಿ ನೌಕರಿಗೆ ಸೇರಿದರು.

ತಮಿಳು ಮಾತೃಭಾಷೆಯ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಸಂಧ್ಯಾ ಟೈಪಿಸ್ಟ್ ನೌಕರಿಯಲ್ಲಿದ್ದಾಗ 1946ರಲ್ಲಿ ಜಯರಾಮನ್ ಎಂಬುವರ ಕೈಹಿಡಿದು ಎರಡು ಮಕ್ಕಳ ತಾಯಿ ಆದರು. ಮಗ ಜೆ.ಜಯಕುಮಾರ್ ಮತ್ತು ಮಗಳು ಜೆ.ಮಾಧವಿಲತಾ ಉರುಫ್ ಕೋಮಲವಲ್ಲಿ ಆ ನಂತರ ಸಿನಿಮಾರಂಗದ ಮರುನಾಮಕರಣ ಕುಮಾರಿ ಜಯಲಲಿತ. ಕ್ರೂರ ವಿಧಿಲೀಲೆಯೋ ಎಂಬಂತೆ ಜವರಾಯನ ಆಣತಿಯಂತೆ ಅನಾರೋಗ್ಯದಿಂದ ನಿಧನರಾದ ತಮ್ಮ ಪತಿಯನ್ನು ಕಳೆದುಕೊಂಡು ಪುಟ್ಟಮಕ್ಕಳ ತಾಯಿ ಸಂಧ್ಯಾ 26ನೇ ವಯಸ್ಸಿಗೆ ವಿಧವೆಪಟ್ಟ ಅಲಂಕರಿಸಬೇಕಾಯಿತು. ಇಂತಹ ದುರಂತ ಪರಿಸ್ಥಿತಿಯಲ್ಲಿ ಜೀವನೋಪಾಯಕ್ಕೆ ಎಳೆಯ ಮಕ್ಕಳೊಡನೆ ಬೆಂಗಳೂರು ಸೇರಿ ಮತ್ತೊಮ್ಮೆ ಬೆರಳಚ್ಚುಗಾರ್ತಿಯಾಗಿ ದುಡಿಯೆ ಪ್ರಾರಂಭ ಮಾಡಿದರು.

ಈಕೆಯ ಸೋದರಿ ಅಂಬುಜವಲ್ಲಿ ಉರುಫ್ ವಿದ್ಯಾವತಿ ನಾಟಕ ಸಿನಿಮಾ ಕಲಾವಿದೆಯಾಗಿ ಮತ್ತು ಗಗನಸಖಿಯಾಗಿ ಸಂಪಾದಿಸುತ್ತಿದ್ದರು. ಕಾಲ ಕಳೆದಂತೆ ತಮ್ಮ ಸ್ವಂತ ಅಕ್ಕ ಚಿತ್ರನಟಿ   ವಿದ್ಯಾವತಿಯ ನೆರವಿನಿಂದ ವೇದವಲ್ಲಿಯೂ ಸಹ ಮದ್ರಾಸಿಗೆ ತೆರಳಿ ನಾಟಕ, ಸಿನಿಮಾ ರಂಗಕ್ಕೆ ಕಾಲಿಟ್ಟು ಎನ್.ಆರ್.ಸಂಧ್ಯಾ ಎಂದು ಪುನರ್ ನಾಮಕರಣಗೊಂಡರು. 1954 ರಲ್ಲಿ ತೆರೆಕಂಡ ಕನ್ನಡ ಫಿಲಂ “ದೇವಕನ್ನಿಕಾ” ಮೂಲಕ ಚಂದನವನಕ್ಕೆ ಪಾದಾರ್ಪಣೆಗೈದು ತಮಿಳು ಕನ್ನಡ ತೆಲುಗು ಮಲಯಾಳಂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾದರು. ಇವರು ನಟಿಸಿದ ಕೊನೆಯ ಕನ್ನಡ ಸಿನಿಮಾ 1965ರಲ್ಲಿ ತೆರೆಕಂಡ ಜಯಲಲಿತ ಮತ್ತು ಕಲ್ಯಾಣಕುಮಾರ್ ನಟಿಸಿದ ಬ್ಲಾಕ್ ಬಸ್ಟರ್ ಫಿಲಮ್ “ಮಾವನಮಗಳು”.

25ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ಅಭಿನಯಿಸಿ 100ಕ್ಕೂ ಮಿಕ್ಕು ತಮಿಳು ತೆಲುಗು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸಿ, ಖ್ಯಾತರಾದರು. 1971ರಲ್ಲಿ ದೈವ ಸಂಕಲ್ಪದಂತೆ ತಮ್ಮ 48ನೇ ವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಅಕಾಲ ಮರಣಕ್ಕೆ ತುತ್ತಾದರು. ಖ್ಯಾತ ನಟಿಯ ಸಾವು ನಿಗೂಢವಾಗೇ ಉಳಿಯಿತು?  ಸಂಧ್ಯಾರವರ ಏಕೈಕ ಪುತ್ರಿ ಜಯಲಲಿತಾ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಹೀರೋಯಿನ್.

ಇದನ್ನೂ ಓದಿ:  ಕನ್ನಡ ಚಿತ್ರರಂಗದಲ್ಲಿ ನೆನಪಾಗಿ  ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ…

ದಕ್ಷಿಣ ಭಾರತದ ಐದು ಭಾಷೆಗಳ100ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತರಾಗಿದ್ದರು. ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಅತ್ಯಂತ ಜನಪ್ರಿಯ ರಾಜಕಾರಣಿ ಎನಿಸಿದರು. ಇವರ ಹಾಗೂ ಇವರ ತಾಯಿಯ ಸಾವು ಇವತ್ತಿಗೂ ಬಿಡಿಸಲಾರದ ಕಗ್ಗಂಟಿನ ದುರಂತ ಇತಿಹಾಸ?!ಸಂಧ್ಯಾ ಮತ್ತು ಜಯಲಲಿತಾ ತಾಯಿ-ಮಗಳು ಈರ್ವರೂ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಅರಮನೆ ನಗರಿ ಮೈಸೂರಿನ ಲಕ್ಷ್ಮೀಪುರಂ ಬಳಿ ಬಹಳ ವರ್ಷಕಾಲ ವಾಸ ಇದ್ದರು ಎಂಬುದು ನಿತ್ಯಸತ್ಯ!  ಸಂಧ್ಯಾರವರ ಜ್ಞಾಪಕಾರ್ಥ ಇವರ ಮಗಳು ಜಯಲಲಿತಾ ಮದ್ರಾಸ್(ಚೆನ್ನೈ)ನಲ್ಲಿ ಕಟ್ಟಿಸಿರುವ “ನಾಟ್ಯಕಲಾ ನಿಕೇತನ” ಸಂಸ್ಥೆ ಬಹಳ ವರ್ಷಕಾಲ ಚಟುವಟಿಕೆಗಳಿಂದ ಕೂಡಿ ಖ್ಯಾತಿ ಗಳಿಸಿತ್ತು.

ಇದಲ್ಲದೇ ಹೈದ್ರಾಬಾದ್ನಲ್ಲಿ ಇರುವ ಬಂಗಲೆಯು ತಾಯಿ-ಮಗಳ ಸ್ಮಾರಕ ವಾಗಿ ಇವತ್ತಿಗೂ ಉಳಿದಿವೆ? ಅಮೋಘ ಅಭಿನಯದ ಹಿರಿಯನಟಿ ಸಂಧ್ಯಾರವರಿಗೆ ಅನೇಕ ಪ್ರಶಸ್ತಿ ಬಿರುದು ಬಹುಮಾನ ಲಭಿಸಿದ್ದವು. ಬಹುಶಃ ಇನ್ನಷ್ಟು ಧೀರ್ಘಕಾಲ ಬದುಕಿದ್ದರೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿ ಲಭಿಸುತ್ತಿತ್ತು? ದ.ಭಾರತದ ದಿಗ್ಗಜ ಹೀರೋಗಳ ಜತೆ ಹೀರೊಯಿನ್ ಆಗಿದ್ದು ಅದೇ ನಾಯಕನಟರಿಗೆ ತಾಯಿ ಅಕ್ಕ ಅತ್ತೆ ಮುಂತಾದ ಪೋಷಕ ಪಾತ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಟಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ:  ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್  ತ್ರಿಪುರಾಂಭ…

ಸಂಧ್ಯಾ ನಟಿಸಿದ ಕನ್ನಡ ಫಿಲಮ್ಸ್ ಯಾವುದು ಎಂದು ನೋಡುವುದಾದರೆ, ದೇವಕನ್ನಿಕಾ, ಬೇಡರಕಣ್ಣಪ್ಪ, ಜಲದುರ್ಗ, ನಟಶೇಖರ, ಸ್ತ್ರೀರತ್ನ, ಶ್ರೀರಾಮಪೂಜಾ, ಪ್ರೇಮದಪುತ್ರಿ, ಜಗಜ್ಯೋತಿ ಬಸವೇಶ್ವರ, ಗೌರಿ, ನಾಗಾರ್ಜುನ, ಸ್ವರ್ಣಗೌರಿ, ರಣಧೀರ ಕಂಠೀರವ, ಮಹಿಷಾಸುರ ಮರ್ಧಿನಿ, ಭಕ್ತಕನಕದಾಸ, ಶ್ರೀಶೈಲಮಹಾತ್ಮೆ, ಭೂಕೈಲಾಸ, ನನ್ನ ಕರ್ತವ್ಯ, ಬೇವು ಬೆಲ್ಲ, ದಶಾವತಾರ, ವಿಜಯನಗರದ ವೀರಪುತ್ರ, ಅನ್ನಪೂರ್ಣ, ಚಿನ್ನದಗೊಂಬೆ, ಮನೆಅಳಿಯ, ಮಾವನಮಗಳು.

ಇಲ್ಲಿರುವ ಚಿತ್ರಗಳನ್ನು ಊಹಿಸಿ ಡಾ.ರಾಜ್ ನಟನೆಯ 5 ಚಿತ್ರಗಳನ್ನು ಹೆಸರಿಸಿ… ಇದು ಬುದ್ದಿಗೆ ಕಸರತ್ತು!

admin
the authoradmin

12 Comments

  • ಹಿರಿಯ ನಟಿ ಮತ್ತು ಜಯಲಲಿತ ರವರ ತಾಯಿ ಸಂಧ್ಯಾರವರ ಬಗ್ಗೆ ಕುಮಾರಕವಿಯವರ ಲೇಖನ ಸೂಪರ್…. ಹಳೆಯ ಕಾಲದ ನಟ ನಟಿಯರ ಬಗ್ಗೆ ನಟರಾಜ ರವರು ಬರೆದ ಪ್ರತಿಯೊಂದು ಲೇಖನವೂ ಸಹ ಅತ್ಯಂತ ಮಾಹಿತಿ ಪೂರ್ಣ ಮತ್ತು ಮಹತ್ವ ಪೂರ್ಣ. ಇಂತಹ ಉಪಯುಕ್ತ ಲೇಖನ ನೀಡುತ್ತಿರುವ ಎಲ್ಲರಿಗೂ ನಮ್ಮ ಧನ್ಯವಾದಗಳು

  • ಹಿರಿಯ ನಟಿ ಮತ್ತು ಜಯಲಲಿತ ರವರ ತಾಯಿ ಸಂಧ್ಯಾರವರ ಬಗ್ಗೆ ಕುಮಾರಕವಿಯವರ ಲೇಖನ ಸೂಪರ್…. ಹಳೆಯ ಕಾಲದ ನಟ ನಟಿಯರ ಬಗ್ಗೆ ನಟರಾಜ ರವರು ಬರೆದ ಪ್ರತಿಯೊಂದು ಲೇಖನವೂ ಸಹ ಅತ್ಯಂತ ಮಾಹಿತಿ ಪೂರ್ಣ ಮತ್ತು ಮಹತ್ವ ಪೂರ್ಣ. ಇಂತಹ ಉಪಯುಕ್ತ ಲೇಖನ ನೀಡುತ್ತಿರುವ ಎಲ್ಲರಿಗೂ ನಮ್ಮ ಧನ್ಯವಾದಗಳು…..
    ಮಂಡಕಳ್ಳಿ ಶಾಂತಕುಮಾರ್

  • ರಣಧೀರ ಕಂಠೀರವ ಮತ್ತು ಶ್ರೀಶೈಲ ಮಹಾತ್ಮೆ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಹಿರಿಯ ಶ್ರೇಷ್ಟ ಕಲಾವಿದೆ ಸಂಧ್ಯಾರವರ ಬಗೆಗಿನ ಲೇಖನ ಪ್ರಕಟವಾದ ಬಗ್ಗೆ ನನಗಂತೂ ಬಹಳ ಸಂತೋಷ ಆಗಿದೆ. ಅನಂತಾನಂತ ಧನ್ಯವಾದ, ನಮಸ್ಕಾರ ಸರ್

  • ರಣಧೀರ ಕಂಠೀರವ ಮತ್ತು ಶ್ರೀಶೈಲ ಮಹಾತ್ಮೆ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಹಿರಿಯ ಶ್ರೇಷ್ಟ ಕಲಾವಿದೆ ಸಂಧ್ಯಾರವರ ಬಗೆಗಿನ ಲೇಖನ ಪ್ರಕಟವಾದ ಬಗ್ಗೆ ನನಗಂತೂ ಬಹಳ ಸಂತೋಷ ಆಗಿದೆ. ಅನಂತಾನಂತ ಧನ್ಯವಾದ, ನಮಸ್ಕಾರ ಸರ್. ನಮ್ಮ ತಾಯಿ ತಂದೆಯವರಿಗೂ ಸಹ ತುಂಬ ಖುಷಿಯಾಯ್ತು, ಸರ್

  • ಸಂಧ್ಯಾರವರ ಬಗ್ಗೆ ಸಂಕ್ಷಿಪ್ತ ಲೇಖನ ಬರೆದ ಕುಮಾರಕವಿಯವರಿಗೆ ಮತ್ತು ಪ್ರಕಟಿಸಿರುವ ಜನಮನ ಕನ್ನಡ ಪತ್ರಿಕೆಯವರಿಗೂ ಧನ್ಯವಾದ. ಒಟ್ಟಾರೆ ಇದು ಬೊಂಬಾಟ್ ಆಗಿದೆ…..

  • Old actress SANDHYA madam article is really worthy 👏 🙏 👌. Thanks to the writer NATARAJA sir and publisher JANAMANA KANNADA

  • First class article about veteran actress (and mother of) Sandhya vedavalli, thank you so much sir 🙏 😊 😀 🙌

  • First class article about veteran actress (and mother of Kumari JAYALALITHA) SANDHYA vedavalli, thank you so much sir 🙏 😊 😀 🙌

  • ಸಂಧ್ಯಾ ರವರ ಲೇಖನ ಪ್ರಕಟಿತ ಬರಹ ನಿಜವಾಗಿಯೂ ತುಂಬ ಚೆನ್ನಾಗಿ ಮೂಡಿ ಬಂದಿದೆ.

  • ಸಂಧ್ಯಾರವರ ಪ್ರಕಟಿತ ಬರಹ ನಿಜವಾಗಿಯೂ ತುಂಬ ಚೆನ್ನಾಗಿ ಮೂಡಿಬಂದಿದೆ.

Leave a Reply