Mysore

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಹೇಳಿದ್ದೇನು?

ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ, ವಿಶ್ವಸಂಸ್ಥೆಯ ಆಶಯದಂತೆ ವಿಶ್ವಧ್ಯಾನ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ ಧ್ಯಾನ ಎಂದರೆ ಮನಸ್ಸನ್ನ ಜೋಡಿಸು,ಕೂಡಿಸು, ಮನಸ್ಸನ್ನ ಪ್ರಕಾಶಗೊಳಿಸಿ ಜಗತ್ತಿಗೆ ಪ್ರಕಾಶವನ್ನು ನೀಡು, ಸರ್ವಶಕ್ತಿವಂತನನ್ನ ನೆನಪು ಮಾಡುವುದೇ ನಿಜವಾದ ಧ್ಯಾನವಾಗಿದೆ ಎಂದರು. ಧ್ಯಾನವೆನ್ನುವುದು ಮನೋವೈಜ್ಞಾನಿಕವಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಎಲ್ಲಾ ಕಾಯಿಲೆಗಳಿಗೂ ಮೂಲ ಮನಸ್ಸಾಗಿದೆ. ಮನಸ್ಸು ಚೆನ್ನಾಗಿದ್ದರೆ, ಮನೆ ಚೆನ್ನಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಸಂಬಂಧ ಚೆನ್ನಾಗಿರುತ್ತದೆ. ಮನಸ್ಸು ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಮನಸ್ಸು ಕೆಟ್ಟಿದರೆ ಎಲ್ಲವೂ ಕೆಟ್ಟಿದ  ಹಾಗೆ ಆಗುತ್ತದೆ. ಹಿಂದೆ ಎಲ್ಲಾ ಮಧುಮೇಹ ಎನ್ನುವುದು ಊರಲ್ಲಿ ಯಾರೋ ಒಬ್ಬರಿಗೆ ಬರುತ್ತಾ ಇತ್ತು ಅದನ್ನ ಶ್ರೀಮಂತರ ರೋಗ ಎಂದು ಕರೆಯುತ್ತಿದ್ದರು. ಆದರೆ ಇಂದು ಭಾರತ ಮಧುಮೇಹದ ರಾಜಧಾನಿ ಆಗುತ್ತಿದೆ. ಏಕೆಂದರೆ ಮೊದಲ ಕಾಲದಲ್ಲಿ ರೈತರು ಮಾತೆಯರು ಭಗವಂತನನ್ನ ಧ್ಯಾನ ಮಾಡಿ ಕಾರ್ಯವನ್ನ ಆರಂಭಿಸುತ್ತಿದ್ದರು ಆದರೆ ಇಂದು ಎಲ್ಲರೂ ಯಂತ್ರದಂತೆ ಜೀವನ ನಡೆಸುತ್ತಿದ್ದಾರೆ.

ಧ್ಯಾನದ ಹಿಂದೆ ಬಹಳ ದೊಡ್ಡ ವಿಜ್ಞಾನವಿದೆ. ಮನೆಯಲ್ಲಿ ಮಕ್ಕಳಿಗೆ ಧ್ಯಾನದ  ಅಭ್ಯಾಸ ಮಾಡಿಸುವುದು ಬಹಳ ಒಳಿತು ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಓಂಕಾರ ದ್ವನಿ ಮಾಡುವುದು ಬಹಳ ಒಳ್ಳೆಯದು. ಓಂಕಾರ ಧ್ವನಿ ಮನಸ್ಸನ್ನು ಹಗುರ ಮಾಡುತ್ತದೆ ವಾತಾವರಣದ ಕಲುಷಿತೆಯನ್ನು ಹೋಗಲಾಡಿಸುತ್ತದೆ. ಅದಕ್ಕಾಗಿ ನಿನ್ನ ಏಳಿಗೆಗೆ ನೀನೇ ಶಿಲ್ಪಿ. ನಿನ್ನ ಉನ್ನತಿಗೆ ನೀನೇ ಕಾರಣ. ನಿನ್ನ ಅವನತಿಗೆ ನೀನೇ ಕಾರಣ. ಏಕೆಂದರೆ ಅದೆಲ್ಲ ನಮ್ಮ ಕೈಯಲ್ಲಿದೆ ಎಂದರು.

ಹರದನಹಳ್ಳಿ ವೇಣುಗೋಪಾಲಸ್ವಾಮಿ ದೇವಸ್ಥಾನದ ಅರ್ಚಕರಾದ ಶ್ರೀ ರವಿಶಂಕರ್ ತಿವಾರಿ ಮಾತನಾಡಿ ಮನುಷ್ಯನ ತನ್ನಲ್ಲಿರುವ ಕೋಪ ತಾಪವನ್ನು ನೀಗಿಸಲು ಧ್ಯಾನ ಮಾಡುವುದು ಬಹಳ ಅವಶ್ಯಕತೆ ಎಂದರು

ಪತ್ರಿಕಾ ವಿತರಕರ ಜಿಲ್ಲಾ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಮಾತನಾಡಿ, ಈಶ್ವರೀಯ  ವಿಶ್ವ ವಿದ್ಯಾಲಯವು ಕಲಿಸುತ್ತಿರುವ ಧ್ಯಾನ ಯೋಗ ಇಂದಿನ ಜನತೆಗೆ ಬಹಳ ಅವಶ್ಯಕತೆ ಇದೆ ಎಂದರು. ನಾಟಿ ವೈದ್ಯ ರಾಮಶೆಟ್ಟಿ ಮಾತನಾಡಿ ಇಡೀ ಜಗತ್ತೇ ನಿರ್ಮಾಣವಾಗಿರುವುದು ಧ್ಯಾನದಿಂದ. ಧ್ಯಾನ ಅಂದರೆ ಗಮನಹರಿಸುವುದು. ಆದರೆ ವರ್ತಮಾನದಲ್ಲಿ ಬಹಳ ಬಹಳ ಅನಿವಾರ್ಯವಾಗಿರುವುದು ಧ್ಯಾನ ಎಂದರು

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸಸ್ ನ ಬಿಕೆ ಆರಾಧ್ಯ, ನಗರಸಭಾ ಆರೋಗ್ಯ ಅಧಿಕಾರಿ ಪುಷ್ಪ, ಗೀತಾ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಶಿಕ್ಷಣ ಇಲಾಖೆಯ ನಾಗರಾಜ್, ಪ್ರಮೀಳಾ ಊದುಗಡ್ಡಿ, ಸುಂದರ್, ಶ್ರೀನಿವಾಸ್, ಹಸಿರುಪಡೆಯ ಸತೀಶ್ ಮುಂತಾದವರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want