Latest

ವಚನ ಸಾಹಿತ್ಯ ಸರ್ವಜನಾಂಗದಲ್ಲಿ ಸಾಮರಸ್ಯ ಮೂಡಿಸುತ್ತದೆ… ಎನ್.ಟಿ.ಸಿದ್ಧರಾಮಣ್ಣನವರ್ ಹೇಳಿಕೆ

ಬೆಂಗಳೂರು: ವಚನ ಸಾಹಿತ್ಯ ಸರ್ವಜನಾಂಗದಲ್ಲಿ ಸಾಮರಸ್ಯ ಮೂಡಿಸುತ್ತದೆ ಎಂದು ಬೆಂಗಳೂರಿನ ಎನ್. ಜಿ. ಇ. ಎಫ್ ನ ನಿವೃತ್ತ ಜನರಲ್ ಮ್ಯಾನೇಜರ್ ಎನ್ ಟಿ ಸಿದ್ಧರಾಮಣ್ಣನವರ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಬೆಂಗಳೂರಿನ ಶಾರದ ಸಿದ್ಧರಾಮಣ್ಣನವರ್,  ವನಜಾಕ್ಷಮ್ಮ ಮತ್ತು ಸವಿತ ಸಿ ಜಂಬಗಿ ರವರ ದತ್ತಿ ಅಂಗವಾಗಿ ಬೆಂಗಳೂರಿನ ಆನೇಕಲ್ ತಾಲ್ಲೂಕು ಬೊಮ್ಮಸಂದ್ರದಲ್ಲಿರುವ  ಎಸ್ ಕೆ ಪಬ್ಲಿಕ್ ಶಾಲೆಯಲ್ಲಿ ನಡೆದ 122ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು ಶರಣರು ಜಾತಿಗಿಂತ ನೀತಿ ಮುಖ್ಯವೆಂಬ ತತ್ವವನ್ನು ವಚನಗಳ ಮೂಲಕ ಪ್ರತಿಪಾದಿಸಿದರು. ಕಳಬೇಡ ಕೊಲಬೇಡ ಎಂಬ ಸಪ್ತ ಸೂತ್ರಗಳ ವಚನ ಸಾರ್ವಕಾಲಿಕವಾಗಿದ್ದು ಎಲ್ಲಾ ಧರ್ಮಗಳ ಆಶಯವಾಗಿದ್ದು ಧರ್ಮಕ್ಜೆ ಹೊಸ ವ್ಯಾಖ್ಯಾನ ಬರೆದಿದೆ ಎಂದರು.

ವಚನ ಸಾಹಿತ್ಯ ಆರಾಧಕರಾದ ಸವಿತ ಸಿ ಜಂಬಗಿ ಮಾತನಾಡಿ ಮನದ ಮಲಿನವನ್ನು ತೊಡೆಯಲು ದಿನನಿತ್ಯ ವಚನ ಸಾಹಿತ್ಯವನ್ನು ಸ್ತುತಿಸಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ ವಚನ ಸಾಹಿತ್ಯ ಜ್ಞಾನ ಮತ್ತು ಸಂಸ್ಕಾರ ಎರಡನ್ನು ಏಕಕಾಲದಲ್ಲಿ ನೀಡುತ್ತದೆ. ವಿದ್ಯೆಗಿಂತ ವಿನಯ ಮುಖ್ಯವಾಗಿದ್ದು ಅಂತಹ ವಿನಯವಂತಿಕೆಯನ್ನ ವಚನ ಸಾಹಿತ್ಯ ಮೂಡಿಸುತ್ತದೆ ಎಂದರು.

ಎಸ್ ಕೆ ಪಬ್ಲಿಕ್ ಶಾಲೆಯ ಸಂಸ್ಥಾಪಕ ಡಾ. ಸಿ ಬಿ ಶಶಿಧರ್ ಮಾತನಾಡಿ ಜೀವ ಕೊಟ್ಟ ತಂದೆ ತಾಯಿ ಮತ್ತು ಜೀವನ ಕೊಟ್ಟ ಗುರಗಳನ್ನು ಎಂದಿಗೂ ಮರೆಯಬಾರದು.ಅಂಕಗಳಿಸುವುದಕ್ಕಿಂತ ಒಳ್ಳೆಯ ಗುಣ ಬೆಳೆಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದರು.  ನಂತರ ವಚನ ವಾಚನ ಮಾಡಿದ ಐವತ್ತು ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಸಾಹಿತ್ಯ ಪುಸ್ತಕ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ದತ್ತಿ ದಾಸೋಹಿ ಶಾರದ ಸಿದ್ಧರಾಮಣ್ಣನವರ್, ಜ್ಯೋತಿ ವಿಜಯಕುಮಾರ್, ಲತಿಕ, ಮುಖ್ಯ ಶಿಕ್ಷಕಿ ಉಷಾ ಇತರರು ಉಪಸ್ಥಿತರಿದ್ದರು.

admin
the authoradmin

Leave a Reply