LatestMysore

ಯುಗಾದಿ ಹಬ್ಬದ ಅಂಗವಾಗಿ ಒಂಟಿಕೊಪ್ಪಲ್ ಪಂಚಾಂಗ ವಿತರಣೆ… ಶೆಲ್ವಪಿಳೈ ಅಯ್ಯಂಗಾರ್ ಹೇಳಿದ್ದೇನು?

ಮೈಸೂರು: ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಚಾಂದ್ರಮಾನ ಯುಗಾದಿ ಹಬ್ಬದ ಅಂಗವಾಗಿ ಒಂಟಿಕೊಪ್ಪಲ್ ಪಂಚಾಂಗಕ್ಕೆ ಪೂಜೆ ಸಲ್ಲಿಸಿ ನಂತರ ಪಂಚಾಂಗ ವಿತರಣಾ ಕಾರ್ಯಕ್ರಮಕ್ಕೆ ಇತಿಹಾಸ ತಜ್ಞರಾದ ಡಾ. ಶೆಲ್ವಪಿಳೈ ಅಯ್ಯಂಗಾರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಈ ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಆಚರಣೆಗಳು ಬೆಳವಣಿಗೆಗಳ ಬಗ್ಗೆ ಮೊದಲೇ ಕಾಲನಿರ್ಣಯ ಪ್ರಕಾರವಾಗಿ ಪಂಚಾಂಗದಲ್ಲಿ ಉಲ್ಲೇಖಿತವಾಗಿರುತ್ತದೆ, ಪಂಚಾಂಗದಲ್ಲಿ ಮಾಸ ಪಕ್ಷ ತಿಥಿ ನಕ್ಷತ್ರ ಗಳಿಗೆ ಕಾಲನಿರ್ಣಯದಂತೆ ಹಿಂದೂಗಳು ಪಾಲಿಸುವಂತಾಗಬೇಕಿದೆ, ನಮ್ಮ ಹಿಂದೂ ಸನಾತನ ಸಂಪ್ರದಾಯದಲ್ಲಿ ಪಂಚಾಂಗ ಶ್ರವಣ ಮತ್ತು ಪಂಚಾಂಗದಂತೆ ಮೂಹೂರ್ತ ಪಾಲಿಸುವುದಕ್ಕೆ ರಾಮಾಯಣ ಮಹಾಭಾರತ ಕಾಲದಿಂದಲೂ ಸಹ ಸಾವಿರಾರು ವರ್ಷಗಳ ಇತಿಹಾಸವಿದೆ, ಇಂದಿನ ಯುವ ಪೀಳಿಗೆ ಹೆಚ್ಚಾಗಿ ಪಂಚಾಂಗ ಓದಿ ಸನಾತನ ಧರ್ಮದ ಮಹತ್ವ ತಿಳಿದುಕೊಳ್ಳಬೇಕು ಎಂದರು.

ಹಿರಿಯ ಸಮಾಜ ಸೇವಕ ರಘುರಾಮ್ ವಾಜಪಾಯಿ ರವರು  ಮಾತನಾಡಿ ಸೂರ್ಯಮಂಡಲದಲ್ಲಿ ನಡೆಯುವ ಗ್ರಹಣ ಮತ್ತು ಪ್ರವಾಹಗಳು ಯುದ್ಧದ ಬಗ್ಗೆಯು ಸಹ ಪಂಚಾಂಗದಲ್ಲಿ ಮೊದಲೇ ಬರೆದಿರುತ್ತಾರೆ ಎಂದರೆ ಇದರಲ್ಲಿರುವ ಜ್ಯೋತಿಷ್ಯ ವಿಜ್ಞಾನದ ಶಕ್ತಿ, ಒಂಟಿಕೊಪ್ಪಲ್ ಪಂಚಾಂಗಕ್ಕೆ ವಿದೇಶದಲ್ಲೂ ಸಹ ಭಾರಿ ಬೇಡಿಕೆಯಿದ್ದು ಗ್ರಾಮದೇವರ ಜಾತ್ರೆಯಿಂದ ಶಾಂತಿ ಮಂತ್ರದವರೆಗೂ ಮಾಹಿತಿಗಳಿವೆ ಸಮಸ್ಥ ಜೀವಸಂಕುಲಕ್ಕೂ ಪಂಚಗ ಉಪಯುಕ್ತವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷರಾದ ಕಡಕೋಳ ಜಗದೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜತ್ತಿ ಪ್ರಸಾದ್, ಪುರೋಹಿತರುಗಳಾದ ಸೋಮಶೇಖರ್, ರಾಧಕೃಷ್ಣ, ಗುರುಪ್ರಸಾದ್, ಉದಯ್, ಇನ್ನಿತರರು ಇದ್ದರು

admin
the authoradmin

Leave a Reply

Translate to any language you want