LatestNational

ಇರಾನ್ ಮೇಲಿನ ಯುದ್ಧಕ್ಕೆ ಅಲ್ಪ ವಿರಾಮ ಘೋಷಿಸಿದ ಟ್ರಂಪ್…  ನಿಟ್ಟುಸಿರು ಬಿಟ್ಟ ಜಗತ್ತು!

ಅಮೇರಿಕಾ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದಕ್ಕೆ ಎರಡು ವಾರಗಳ ಕಾಲ ವಿರಾಮ ಬೀಳುವ ಸಾಧ್ಯತೆಯಿದೆ. ಅಮೇರಿಕಾ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಲಾಗಿದೆ. ಇದರಿಂದ  ಟೆಹ್ರಾನ್ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರೀಕ್ಷೆಯಿದ್ದು, ಇದು ಈಗಾಗಲೇ ಇಂಧನ ಸಮಸ್ಯೆಯಿಂದ ಬಳಲುತ್ತಿರುವ ರಾಷ್ಟ್ರಗಳಿಗೆ ಸ್ವಲ್ಪ ಮಟ್ಟಿಗಿನ ನೆಮ್ಮದಿ ತಂದಂತಾಗಿದೆ.

ಈ ನಡುವೆ ಮಾತನಾಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಣಾಯಕ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಒಪ್ಪಿಕೊಳ್ಳಬೇಕೆಂಬ ಷರತ್ತಿನ ಮೇಲೆ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮಾತುಕತೆ ನಡೆಸಿ    ಇರಾನ್ ಗೆ ಅಮೇರಿಕಾ ಮಂಗಳವಾರ ರಾತ್ರಿ ಕಳುಹಿಸಲಾಗುತ್ತಿದ್ದ ಮಿಲಿಟರಿ ಪಡೆಗಳನ್ನು ನಿಲ್ಲಿಸುವಂತೆ ವಿನಂತಿ ಮಾಡಿಕೊಂಡರು ಅಲ್ಲದೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸಂಪೂರ್ಣ, ತಕ್ಷಣ ಮತ್ತು ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡರೆ, ನಾನು ಇರಾನ್ನ ಬಾಂಬ್ ದಾಳಿ ಮತ್ತು ದಾಳಿಯನ್ನು ಎರಡು ವಾರಗಳ ಅವಧಿಗೆ ಸ್ಥಗಿತಗೊಳಿಸಲು ಒಪ್ಪುತ್ತೇನೆ. ಇದು ಡಬಲ್ ಸೈಡೆಡ್ ಸೀಸೆಫೈರ್ ಆಗಿರುತ್ತದೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನು ಗಮನಿಸಿದರೆ ಸದ್ಯಕ್ಕೆ ಯುದ್ಧಕ್ಕೆ ಅಲ್ಪ ವಿರಾಮ ಬಿದ್ದಂತೆ ಕಾಣಿಸುತ್ತದೆ. ಆದರೆ ಇದೇ ಅಂತಿಮ ಎನ್ನುವುದು ಕಷ್ಟವಾಗಿದ್ದು, ಯಾವಾಗ ಬೇಕಾದರೂ ಏನು ಬೇಕಾದರೂ ಸಂಭವಿಸಬಹುದು ಎನ್ನುವುದನ್ನು ತಳ್ಳಿಹಾಕಲಾಗದು. ಆದರೆ ಇಡೀ ಜಗತ್ತು ಯುದ್ಧ ಯಾವಾಗ ನಿಲ್ಲುತ್ತದೆ ಎಂಬುದನ್ನು ಕಾಯುತ್ತಿದೆ. ಈಗಾಗಲೇ ಜನ ಸಂಕಷ್ಟಕ್ಕೀಡಾಗಿದ್ಧಾರೆ.

ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯ ನಂತರ, ಜಗತ್ತು ಭಯಗೊಂಡಿದ್ದು, ಭೀಕರ ಯುದ್ಧಗಳು ಆರಂಭವಾದರೆ ಜಗತ್ತು ತಲ್ಲಣಗೊಳ್ಳುವ ಭಯವೂ ಇಲ್ಲದಿರಲಿಲ್ಲ. ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದ ಟ್ರಂಪ್,  ಇಡೀ ನಾಗರಿಕತೆಯು ಇಂದು ರಾತ್ರಿ ಸಾಯುತ್ತದೆ, ಅದನ್ನು ಮತ್ತೆ ಎಂದಿಗೂ ಮರಳಿ ತರಲಾಗುವುದಿಲ್ಲ. ಅದು ಸಂಭವಿಸಬೇಕೆಂದು ನಾನು ಬಯಸುವುದಿಲ್ಲ, ಆದರೆ ಬಹುಶಃ ಅದು ಸಂಭವಿಸುತ್ತದೆ.

ಆದಾಗ್ಯೂ, ಈಗ ನಾವು ಸಂಪೂರ್ಣ ಮತ್ತು ಸಂಪೂರ್ಣ ಆಡಳಿತ ಬದಲಾವಣೆಯನ್ನು ಹೊಂದಿದ್ದೇವೆ, ಅಲ್ಲಿ ವಿಭಿನ್ನ, ಚುರುಕಾದ ಮತ್ತು ಕಡಿಮೆ ಆಮೂಲಾಗ್ರ ಮನಸ್ಸುಗಳು ಮೇಲುಗೈ ಸಾಧಿಸುತ್ತವೆ, ಬಹುಶಃ ಕ್ರಾಂತಿಕಾರಿ ಅದ್ಭುತವಾದದ್ದು ಸಂಭವಿಸಬಹುದು  ಎಂದು ಫೋಸ್ಟ್ ಮಾಡಿದ್ದನ್ನು ನಾವು ಸ್ಮರಿಸಬಹುದಾಗಿದೆ.

admin
the authoradmin

Leave a Reply

Translate to any language you want