LatestMysore

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪ್ರದಾನ

ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದನ್ನು ಗುರುತಿಸಿ ಮಹಿಳಾ ಸಾಧಕಿಯರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ 2026 ನ್ನು ಪ್ರದಾನ ಮಾಡಲಾಯಿತು.

ಪಿ ಆರ್ ಕೆ ಫೌಂಡೇಶನ್ ವತಿಯಿಂದ ನಗರದ ಚಾಮುಂಡಿಪುರಂನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕರು, ಖ್ಯಾತ ಜೋತಿಷ್ಯರಾದ ಚಂದ ಪಾಂಡೆ ಅಮ್ಮಾಜಿ ಅವರು, ಇತಿಹಾಸದ ಉದ್ದಕ್ಕೂ ಮಹಿಳೆಯರು ತಮ್ಮ ಅಪ್ರತಿಮ ದೃಢಸಂಕಲ್ಪ ತ್ಯಾಗ ಮತ್ತು ಶಕ್ತಿಯ ಮೂಲಕ ಸಮಾಜವನ್ನು ರೂಪಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಮಾತನಾಡಿ, ಶಿಕ್ಷಣ ವ್ಯಾಪಾರ ವಿಜ್ಞಾನ ಕಲೆ ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಮನೆಗೆ ಬೆಳಕಾಗುವ ಹೆಣ್ಣು ದೇಶದ ಅಭಿವೃದ್ಧಿಗೂ ಅಷ್ಟೇ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸಮಾಜ ಸೇವಕರಾದ ಡಾ. ಹೇಮಾ ನಂದೀಶ್ ಮಾತನಾಡಿ ಲಿಂಗ ಸಮಾನತೆಗಾಗಿ ಪ್ರತಿಪಾದಿಸಿದರ ಜೊತೆಗೆ ಮಹಿಳೆಯರು ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಸದೃಢಬೇಕಾಗಿದೆ. ಪ್ರಸ್ತುತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು

ಇದೇ ವೇಳೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿಯನ್ನು  ಚಂದ ಪಾಂಡೆ ಅಮ್ಮಜಿ (ಜ್ಯೋತಿಷ್ಯ ಕ್ಷೇತ್ರ), ಜ್ಯೋತಿ ಪ್ರಭ (ಜ್ಯೋತಿಷ್ಯ ಕ್ಷೇತ್ರ ), ವಿಜಯಲಕ್ಷ್ಮಿ ಆರ್ ಎನ್ ಅಯ್ಯಂಗಾರ್ (ಸಮಾಜ ಸೇವ ಕ್ಷೇತ್ರ), ಸಿ ಎಸ್ ನಾಗರತ್ನಮ್ಮ (ಪಿಟೀಲು ವಾದಕಿ), ಬಿ ಕೆ ವಿಜಯಲಕ್ಷ್ಮಿ (ವೀಣಾ ವಾದನ )ರೇವತಿ ಕೃಷ್ಣಪ್ಪ (ಶಿಕ್ಷಣ ಹಾಗೂ ಸಮಾಜ ಸೇವಕಿ), ಪೂರ್ಣಿಮಾ ಎಂ (ಸಮಾಜ ಸೇವಕಿ )ದಿವ್ಯ ಎಂ (ಕ್ರೀಡಾಕ್ಷೇತ್ರ) ವಿದುಷಿ ಸಹನಾ ಚೇತನ್ (ನೃತ್ಯ ಕ್ಷೇತ್ರ) ಜಯಲಕ್ಷ್ಮಿ ಎನ್ (ಕರಕುಶಲ ಕ್ಷೇತ್ರ) ಪೂಜಶ್ರೀ (ಸಾಮಾಜಿಕ ಕ್ಷೇತ್ರ )ಕೋಮಲಮನಿ (ವೈದ್ಯಕೀಯ ಕ್ಷೇತ್ರ) ಶೃತಿ (ಸಂಘಟನಾ ಕ್ಷೇತ್ರ), ಸಿಂಚನ(ಸಾಮಾಜಿಕ), ಸೋನಾ (ಮಾಧ್ಯಮ ಕ್ಷೇತ್ರ), ಅವರಿಗೆ ಪ್ರದಾನ ಮಾಡಲಾಯಿತು.

ಇದೇ ಸಂದರ್ಭ ಪಿಆರ್ ಕೆ ಫೌಂಡೇಶನ್ ಲೋಗೋವನ್ನು ಸಂಸ್ಥೆಯ ಅಧ್ಯಕ್ಷರಾದ ಅಯ್ಯಪ್ಪ ಉದ್ಘಾಟಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ  ಪಿ ಆರ್ ಕೆ ಫೌಂಡೇಶನ್ ಅಧ್ಯಕ್ಷರಾದ ಅಯ್ಯಪ್ಪ, ಮಂಜುಳಾ ಸೋಮಣ್ಣ, ಶ್ರುತಿ, ಶ್ರೀ ದುರ್ಗಾಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಇನ್ನಿತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want