District

ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಾಗಾರ… ಭಾರತದಲ್ಲಿ ಸುಮಾರು 1300 ಪ್ರಭೇದದ ಪಕ್ಷಿಗಳಿವೆಯಂತೆ…

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಾಲ್ಲೂಕಿನ ರತ್ನಾಪುರಿಯಲ್ಲಿನ ಲೈಯಾನ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಪ್ರಕೃತಿ ಸಂರಕ್ಷಣಾ ಸಂಸ್ಥೆ ನೆರವಿನಿಂದ ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಪ್ರಕೃತಿ ಸಂರಕ್ಷಣೆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಅಭಿಷೇಕ ಹಾಗೂ ದೀಪ್ತಿ ಮಾಹಿತಿ ನೀಡಿದರು.

ಭಾರತದಲ್ಲಿ ಸುಮಾರು 1300 ಪ್ರಭೆದದ ಪಕ್ಷಿಗಳಿವೆ. ಪ್ರತಿ ಪ್ರಭೇದ ಧ್ವನಿ, ಕೂಗು, ಜೀವನಶೈಲಿ ಬೇರೆಯೇ ಇರುತ್ತೆ. ಹಣ್ಣುಗಳನ್ನು ತಿನ್ನುವ, ಕೀಟಗಳನ್ನು ತಿನ್ನುವ, ಧಾನ್ಯಗಳನ್ನು ತಿನ್ನುವ, ಮಾಂಸ ತಿನ್ನುವ, ಮೀನು, ಹುಳುಗಳನ್ನು ತಿನ್ನುವ ಪಕ್ಷಿ ಪ್ರಭೇದಗಳಿವೆ. ಇವುಗಳನ್ನು ಸಂರಕ್ಷಿಸುವುದು ಪ್ರಕೃತಿ ಸಮತೋಲನ ದೃಷ್ಟಿಯಿಂದ ಬಹುಮುಖ್ಯ ಎಂದರು.

ವಿವಿಧ ಪಕ್ಷಿಗಳ ಅವಸಸ್ಥಾನ ಬೇರೆಯೇ ಇರುತ್ತದೆ. ಕಾಡು, ಕೆರೆ, ಸರೋವರ, ತೋಟ, ಕುರುಚಲು ಕಾಡು ಗದ್ದೆ ಬಯಲು, ಹುಲ್ಲುಗಾವಲು, ಹಾಗೂ  ಜನವಸತಿ ಗಳಲ್ಲಿಯೂ ವಾಸಿಸುತ್ತವೆ. ಅವುಗಳ ಜೀವನ, ಪ್ರಣಯ, ಸಂತಾನೋತ್ಪತ್ತಿ ಇವೆಲ್ಲವೂ ಬಹು ಆಕರ್ಷಣೀಯ ಎಂದು ತಿಳಿಸಿದರು.  ಅವುಗಳು ಮನುಷ್ಯರೂ ಸೇರಿದಂತೆ ವಿವಿಧಜೀವಿಗಳಿಂದ ಗಂಡಾಂತರ ಎದುರಿಸುತ್ತಿವೆಯಾದ್ದರಿಂದ  ಕಡುವ ಹೊಣೆಗಾರಿಕೆಯೂ ಮನುಷ್ಯರ ಮೇಲಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಶಿಕ್ಷಕರು, ಸಮಾಜ ಕಾರ್ಯಕತರು, ಪಕ್ಷಿ ವೀಕ್ಷಕರು ಪಾಲ್ಗೊಂಡಿದ್ದರು. ಮಕ್ಕಳಿಗೆ ಪಕ್ಷಿಗಳ ವೀಕ್ಷಣೆ ಕುರಿತು ತಿಳುವಳಿಕೆ ನೀಡುವ ಕ್ರಮಗಳನ್ನು ಆಟದ ಮೂಲಕ ಕಾರ್ಯಾಗಾರದಲ್ಲಿ ಹಾಗೂ ಕೆರೆಯೊಂದರಲ್ಲಿ ಪ್ರತ್ಯಕ್ಷ ದರ್ಶನದ ಮೂಲಕ ವಿವರಿಸಿದರು. ಮಕ್ಕಳಲ್ಲಿ ಪರಿಸರ ಪ್ರೇಮ, ಮರಗಳು, ಪ್ರಾಣಿ ಪಕ್ಷಿಗಳ ಪ್ರೇಮ ಬೆಳ ಸಬೇಕುಎಂದರು.ಪಕ್ಷಿಗಳನ್ನು ಪರಿಚಯಿಸುವ ಭಿತ್ತಿ ಪತ್ರ, ಪುಸ್ತಕ, ಕಾರ್ಡ್ಸ್, ಪೋಸ್ಟರ್ಸ್ ಕೂಡ ವಿತರಿಸಿ ಈ ಜ್ಞಾನವನ್ನು ತಮ್ಮ, ತಮ್ಮ ಪರಿಸರದಲ್ಲಿ ಕಾರ್ಯಾಗಾರ ಮಾಡಿ ಹಂಚಿಕೊಳ್ಳಬೇಕು ಎಂದರು.

admin
the authoradmin

Leave a Reply