ಯಳಂದೂರು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈ.ಕೆ.ಮೋಳೆ ವಿ.ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಗುಂಬಳ್ಳಿ ಲೋಕೇಶ್ ಹಾಗೂ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಮುಖ್ಯ ಚುನಾವಣಾಧಿಕಾರಿ ಎಂ.ಇ.ಮಂಜುನಾಥ್ ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಸಿ.ಮಹೇಂದ್ರ, ವಿಜಯಕುಮಾರ್ ಕರ್ತವ್ಯ ನಿರ್ವಹಿಸಿದರು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿಗಳು ಪ್ರಮಾಣಪತ್ರ ವಿತರಣೆ ಮಾಡಿದರು.

ನೂತನ ಪದಾಧಿಕಾರಿಗಳು : ಸಂಘದ ಉಪಾಧ್ಯಕ್ಷರಾಗಿ ಗುಂಬಳ್ಳಿ ಸಿ.ನಾಗೇಂದ್ರ, ಖಜಾಂಚಿಯಾಗಿ ಇರ್ಫಾನ್ ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಮಾಜಿ ಸಚಿವ ಎನ್.ಮಹೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಚಿಕ್ಕಮಾಳಿಗೆ ಹಾಗೂ ಪದಾಧಿಕಾರಿಗಳು, ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಯಳಂದೂರು ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದಲಿಂಗಸ್ವಾಮಿ ಮಾತನಾಡಿ, ನೂತನ ಪದಾಧಿಕಾರಿಗಳು ತಾಲೂಕು ಸಂಘದ ಅಭಿವೃದ್ಧಿಗೆ ಮುಂದಾಗಬೇಕು. ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಅಲ್ಲದೇ ಎಲ್ಲ ಸದಸ್ಯರ ಸಹಕಾರದಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕು. ಜೊತೆಗೆ ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ನೂತನ ಅಧ್ಯಕ್ಷ ವೈ.ಕೆ.ಮೋಳೆ ವಿ.ನಾಗರಾಜು ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಎಲ್ಲ ಸದಸ್ಯರ ಸಹಕಾರ ಪಡೆದು ಸಂಘವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಯರಿಯೂರು ನಾಗೇಂದ್ರ, ನಿರ್ದೇಶಕರಾದ ವೈ.ಎಂ.ಭಾನುಪ್ರಕಾಶ್, ವೈ.ಕೆ.ಮೋಳೆ ಬಸವರಾಜು, ಬಿಳಿಗಿರಿ ಶ್ರೀನಿವಾಸ್, ಕೊಳ್ಳೇಗಾಲ ತಾಲೂಕು ಪ್ರಧಾನ ಕಾರ್ಯದರ್ಶಿ ನಟರಾಜು, ಪತ್ರಕರ್ತರಾದ ವೈ.ಕೆ.ಮೋಳೆ ನಾಗರಾಜು, ಕೆಸ್ತೂರು ಪ್ರಸನ್ನ, ಬೂದಂಬಳ್ಳಿ ಗಿರೀಶ್, ಮುಷರಫ್, ರಂಗಸ್ವಾಮಿ, ಗೂಳಿಪುರ ನಂದೀಶ್, ಕೊಮಾರನಪುರ ರಾಜಶೇಖರ್, ಮಂಜುಕುಮಾರ್, ಚರಣ್ ಬಿಳಿಗಿರಿ, ಜಗದೀಶ್, ಯಳಂದೂರು ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಅಂಬಳೆ ಗ್ರಾಪಂ ಸದಸ್ಯ ಸ್ವಾಮಿ.
ಹೊನ್ನೂರು ಗ್ರಾಪಂ ಸದಸ್ಯ ಚಿನ್ನಪ್ಪ, ಗುಂಬಳ್ಳಿ ಗ್ರಾಪಂ ಸದಸ್ಯ ಕೊಮಾರನಪುರ ಚಂದ್ರು, ವೈ.ಕೆ.ಮೋಳೆ ಗ್ರಾಮದ ಯಜಮಾನರಾದ ವೆಂಕಟೇಶ್, ಮುಖಂಡರಾದ ಕೆ.ವೆಂಕಟೇಶ್, ಶಿವನಂಜಶೆಟ್ಟಿ, ಎಂ.ಶಿವಣ್ಣ, ಸಿ.ಶಾಂತರಾಜು, ರಂಗಸ್ವಾಮಿ, ಕಂದಹಳ್ಳಿ ಮಹೇಶ್, ಮಾಂಬಳ್ಳಿ ರಾಮಣ್ಣ, ಮಾದನಾಯಕ ಸೇರಿದಂತೆ ಇತರರಿದ್ದರು.








