LatestState

ಧೀರ್ಘಕಾಲದಿಂದ ಬ್ಯಾಂಕ್ ನಲ್ಲಿಟ್ಟಿರುವ ಠೇವಣಿ ವಾಪಸ್ ಪಡೆಯಲು ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ

ಬೆಂಗಳೂರು: ನೀವು ಬ್ಯಾಂಕಿನಲ್ಲಿ ಹಣವಿಟ್ಟು ಅದನ್ನು ವಾಪಾಸ್ ಪಡೆಯಲು ಪರದಾಡುತ್ತಿದ್ದೀರಾ? ಹಾಗಿದ್ದರೆ ಇದೀಗ ಸೂಕ್ತ ದಾಖಲೆ ನೀಡಿ ಹಣವನ್ನು ವಾಪಾಸ್ ಪಡೆಯಲು ಅವಕಾಶ ಮಾಡಿಕೊಡಲಾಗಿದ್ದು ಇದಕ್ಕಾಗಿ ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ ಆರಂಭಿಸಲಾಗಿದ್ದು, 2025ರ ಡಿಸೆಂಬರ್ 31 ರವರೆಗೆ ನಡೆಯಲಿದ್ದು ಸಾರ್ವಜನಿಕರು ಅದರಲ್ಲೂ ಫಲಾನುಭವಿಗಳು  ಇದರ ಲಾಭಪಡೆಯಬಹುದಾಗಿದೆ.

ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕ್, ವಿಮಾ ಮತ್ತು ಇತರ ಇಲಾಖಾ ಶಾಖೆಗಳಲ್ಲಿ 2025 ರ ಡಿಸೆಂಬರ್ 31 ರವರೆಗೆ ನಿಮ್ಮ ಹಣ ನಿಮ್ಮ ಹಕ್ಕು ಅಭಿಯಾನ ನಡೆಯಲಿದೆ. ಅದರಂತೆ, ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನುಬದ್ಧ ವಾರಸುದಾರರಿಗೆ ಮರುಪಡೆಯಲು ಸಹಾಯ ಮಾಡಲು ಈ ಅಭಿಯಾನ ನಡೆಸಲಾಗುತ್ತಿದ್ದು ಅರ್ಹ ವಾರಸುದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂಬುದು ಪ್ರಕಟಣೆಯಾಗಿದೆ.

ಠೇವಣಿ ಹಣದ ವಾರಸುದಾರರ ಪೈಕಿ ಸಾಕಷ್ಟು ಜನ ಕಷ್ಟ ಪಟ್ಟು ದುಡಿದು, ಹಣ ಕೂಡಿಟ್ಟವರು ಇರುತ್ತಾರೆ. ಅದರ ಬಗ್ಗೆ ಅರಿವು ಇರುವುದಿಲ್ಲ. ವಲಸೆಗಾರರು, ಊರು, ಪಟ್ಟಣ ಬಿಟ್ಟವರು, ಬಡವರು, ಹಿಂದುಳಿದವರು ಹೆಚ್ಚಿನವರು ಆಗಿರುತ್ತಾರೆ. ಅಂತಹವರನ್ನು ಪತ್ತೆ ಹಚ್ಚಿ ಅವರ ಹಣ ವಾಪಾಸ್ ನೀಡಬೇಕಾಗಿದ್ದು, ಈ ಸಂಬಂಧ ಆಯಾಯ ಜಿಲ್ಲಾಡಳಿತ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.  ವಾಪಸ್ ಹಣ ಪಡೆಯಬೇಕಾದರೆ ಬ್ಯಾಂಕ್ ಖಾತೆ ಸ್ಟೇಟ್ ಮೆಂಟ್ ಅಥವಾ ಪಾಸ್ ಬುಕ್, ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಅಥವಾ ಚಾಲನಾ ಪರವಾನಗಿ, ವಿಳಾಸದ ಪುರಾವೆ: ಪಾಸ್ಪೋರ್ಟ್ ಚಾಲನೆ ಪರವಾನಗಿ, ಕ್ರೆಡಿಟ್ ಕಾರ್ಡ್, ಸ್ಟೇಟ್ಮೆಂಟ್, ವೇತನದ ಸ್ಲಿಪ್, ವೋಟರ್ ಐಡಿ, ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ ಮೊದಲಾದವುಗಳನ್ನು ನೀಡಬೇಕಾಗುತ್ತದೆ.

ಕಾನೂನು ಬದ್ಧ ವಾರಸುದಾರರು ಅಥವಾ ನಾಮಿನಿ ಕ್ಲೈಮ್ ಮಾಡಲು ಮೂಲ ಖಾತೆದಾರರ ಮರಣ ಪ್ರಮಾಣದ ಪತ್ರದ ಪ್ರತಿ, ಕಾನೂನು ಬದ್ಧ ಉತ್ತರಾಧಿಕಾರಿ ಪ್ರಮಾಣ ಪತ್ರ ಎಲ್ಲಾ ವಾಸುದಾರರಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ(ಅನೇಕ ವಾರಸುದಾರರಿದ್ದಲ್ಲಿ), ಕ್ಲೈಮ್ ಮಾಡುವ ವ್ಯಕ್ತಿಯ ಗುರುತಿನ ಮತ್ತು ವಿಳಾಸದ ಪುರಾವೆಯನ್ನು ನೀಡಬೇಲಾಗುತ್ತದೆ.  ಇನ್ನು ಕ್ಲೈಮ್ ಮಾಡುವ ವಿಧಾನವನ್ನು ನೋಡಿದ್ದೇ ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ನ ಯುಡಿಜಿಎಎಂ ವೆಬ್ಸೈಟ್  https://udgam.rbi.org.in ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಕ್ಲೈಮ್ ಆಗದಿರುವ ಠೇವಣಿಗಳನ್ನು ಹುಡುಕಬಹುದಾಗಿದೆ.

ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಕ್ಲೈಮ್ ಅನ್ನು ಪ್ರಾರಂಭಿಸಲು ಠೇವಣಿ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಶಾಖೆ ವಿಳಾಸ ತಿಳಿದಿಲ್ಲದಿದ್ದರೆ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಬ್ಯಾಂಕ್ ನೀಡುವ ಕ್ಲೈಮ್ ಫಾರ್ಮ್ ನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ರಸೀದಿಯನ್ನು ಪಡೆದುಕೊಳ್ಳಬೇಕಾಗಿದೆ. ದಾಖಲೆಯ ಪರಿಶೀಲನೆಯ ನಂತರ ಬ್ಯಾಂಕ್ ಕ್ಲೈಮ್ ಅನ್ನು ಸಂಸ್ಕರಿಸಿ ಹಣವನ್ನು ಮರಳಿ ನೀಡುತ್ತದೆ. ಅರ್ಜಿ ಸಲ್ಲಿಸಿದ 15 ದಿನದೊಳಗೆ ಠೇವಣಿ ಹಣ ವಾಪಾಸ್ ನೀಡದಿದ್ದಲ್ಲಿ ಶೇಕಡ ಹತ್ತರಷ್ಟು ದಂಡವನ್ನು ಬ್ಯಾಂಕ್ ನವರು ಭರಿಸಬೇಕಾಗುತ್ತದೆ.

admin
the authoradmin

Leave a Reply