CinemaLatest

ಯುಟ್ಯೂಬ್ ನಲ್ಲಿ ಈಗ ಭರ್ಜರಿ ಸದ್ದು ಮಾಡುತ್ತಿರುವ  ‘ಫ್ಯೂಚರ್ ಪ್ಲಾನ್’ಆಲ್ಬಮ್ ಸಾಂಗ್ 

ಅನು ಸಾರಾ ಆಡಿಯೋ ನಿರ್ಮಾಣದ  ‘ಫ್ಯೂಚರ್ ಪ್ಲಾನ್’ ಎಂಬ ಉತ್ತರ ಕರ್ನಾಟಕ  ಆಲ್ಬಮ್ ಸಾಂಗ್ ಇದೀಗ ಬಿಡುಗಡೆಯಾಗಿ ಯುಟ್ಯೂಬ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

‘’ಫ್ಯೂಚರ್ ಪ್ಲಾನ್ ಹಾಕೂನಂತ ಪಿಚ್ಚರ ತಗದ, ಮೈ ಮೇಲೆ ಏರಿ ಬರತಿ ಯಾಕ ಸಿಡದ’ ಹಾಡು ಇದೀಗ ವೈರಲ್ ಆಗಿದೆ. ವಿಶೇಷವೆಂದರೆ  ಮಾಜಿ ಸಚಿವರಾದ  ಸಾರಾ ಮಹೇಶ್ ರವರ ಧರ್ಮಪತ್ನಿ ಅನಿತಾ ಸಾರಾ ಮಹೇಶ್ ಅವರು ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಲಪಂಗ್ ರಾಜ್ ರವರ ಜೊತೆಗೆ ಈ ಆಲ್ಬಮ್ ಸಾಂಗ್‌ಗೆ ಗಾಯಕಿಯಾಗಿರುವುದು.

ಲಪಂಗ ರಾಜ್ ಮತ್ತು ಸ್ಟೆಫಿ ಲೂಯಿಸ್ ಅವರ ಅಮೋಘ ನೃತ್ಯ ಯಾವದೇ ಚಲನಚಿತ್ರದ ಹಾಡಿಗೂ ಕಡಿಮೆ ಇಲ್ಲದಂತೆ ಕಣ್ಮನ ಸೆಳೆಯುತ್ತದೆ. ಸಂಪೂರ್ಣ ಈ ಹಾಡಿನ ಚಿತ್ರೀಕರಣ ವಿಜಯಪುರ ಜಿಲ್ಲೆಯ ಆಲಮಟ್ಟಿ ಸುತ್ತ ಮುತ್ತ ನಡೆಸಲಾಗಿದೆ.  ನೃತ್ಯ ಸಂಯೋಜನೆ ಪವನ್ ಗೋಕಾಕ್, ಬಾಗಲಕೋಟೆಯ ರವಿತೇಜ  ಸಂಗೀತ ಸಂಯೋಜಿಸಿದ್ದಾರೆ.

ಸಾಹಿತ್ಯ ಶಿವು ಅಂಬಿಗರ್, ಕೋರಸ್ ರವಿತೇಜ, ಅಶೋಕ ಕುಮಾರ ಬಡಿಗೇರ, ಶಾರದಾ ಪವಾರ್, ಭೀಮಶಿ ಚಿಕ್ಕೂರು, ಶಾರದಾ ಬಿದರಕಿಂಡಿ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ , ಪ್ರಚಾರ  ವಿನ್ಯಾಸ ಎಚ್.ಬಿ.ಘಟಪ್ರಭಾ, ಗೋಕಾಕ, ಮೈಸೂರು, ಚೆನೈನಲ್ಲಿ ಸಂಕಲನ ಕಾರ್ಯ ಆಗಿದ್ದು,   ಪ್ರೊಡಕ್ಷನ್ ಎಕ್ಸಿಕ್ಯೂಟ್ ಶಿವು ಚಾವಡಿ ಆಗಿದ್ದಾರೆ. ಸಾರಾ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ.

admin
the authoradmin

Leave a Reply

Translate to any language you want