ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶವಾಗಿದೆ ಎಂದು ಕೆಎಸ್ಆರ್ ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ತಾಂತ್ರಿಕ ಅಭಿಯಂತರರಾದ ಮಹೇಶ್ ತಿಳಿಸಿದರು.
ಪಿರಿಯಾಪಟ್ಟಣದ ಸಾರಿಗೆ ಘಟಕದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಶರಣರ ಸಂದೇಶಗಳನ್ನು ನಾವು ಜೀವನದಲ್ಲಿ ಪಾಲಿಸಿದಾಗ ಸನ್ಮಾರ್ಗದಲ್ಲಿ ಸಾಗಬಹುದು, ನಾವು ಮಾಡುವ ಕಾಯಕದಲ್ಲಿ ಶ್ರದ್ದೆ ಭಕ್ತಿ ಇದ್ದರೆ ಖಂಡಿತ ಯಶಸ್ಸು ಸಿಗುತ್ತದೆ ಈ ನಿಟ್ಟಿನಲ್ಲಿ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಸಂಸ್ಥೆಗೆ ಹೆಸರು ತರುವಂತೆ ತಿಳಿಸಿದರು.
ಘಟಕ ವ್ಯವಸ್ಥಾಪಕರಾದ ಸುಬ್ರಮಣ್ಯ ಅವರು ಮಾತನಾಡಿ ವಚನಗಳ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದ ಮಹಾನ್ ನಾಯಕರು ಬಸವಣ್ಣನವರಾಗಿದ್ದರು, ನಾವು ಮಾಡುವ ಒಳ್ಳೆ ಕೆಲಸಗಳಲ್ಲಿ ದೇವರನ್ನು ಕಾಣಬಹುದು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ವಿಶ್ವಗುರು ಬಸವಣ್ಣರವರಾಗಿದ್ದರು ಎಂದರು.

ಈ ವೇಳೆ ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಲಾಯಿತು, ಈ ಸಂದರ್ಭ ಘಟಕದ ಸಂಚಾರ ನಿರೀಕ್ಷಕರಾದ ಪ್ರಶಾಂತ್ ಹಿರೇಮಠ್, ಪಾರು ಪತ್ತೆಗಾರಾರಾದ ಪ್ರಕಾಶ್, ಲೋಕೇಶ್, ಸಂಚಾರ ನಿಯಂತ್ರಕರಾದ ಗಣೇಶ್, ಶ್ರೀಧರ್, ಈಶ್ವರ್ ಸಿಬ್ಬಂದಿಗಳಾದ ಶ್ರೀಕಾಂತ್, ಲೋಕೇಶ್, ವಿಜಯೇಂದ್ರ, ಮನುಕುಮಾರ್, ಶಿವಾಜಿ, ಕುದ್ರತ್, ವಸಂತ್, ರವಿಶಂಕರ್, ವೃಷಭೇಂದ್ರ, ಗಿರೀಶ್, ನಾಗರಾಜ್, ಹರ್ಷ, ಅವಿನಾಶ್, ಅರವಿಂದ್, ಮಹೇಶ್, ರಫೀಕ್, ಲಿಂಗರಾಜ್, ಪುಟ್ಟರಾಜ್, ರಾಜೇಶ್ ಸೇರಿದಂತೆ ಚಾಲಕ ನಿರ್ವಾಹಕ ತಾಂತ್ರಿಕ ಹಾಗೂ ಭದ್ರತಾ ಮತ್ತು ಕಚೇರಿ ಸಿಬ್ಬಂದಿ ಇದ್ದರು.








