LatestMysore

ಸಮಾಜ ಕಾರ್ಯವು ಮಾನವನ ಸಾಮಾಜಿಕ ಆರೋಗ್ಯದ ರಕ್ಷಣೆಗೆ ಕೊಡುಗೆ: ವರ್ಷ ಹರೀಶ್ ಗೌಡ

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಸಮಾಜ ಕಾರ್ಯವು ಮಾನವನ ಸಾಮಾಜಿಕ ಆರೋಗ್ಯದ ರಕ್ಷಣೆಗೆ ಮತ್ತು ಬೆಳವಣಿಗೆಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದೆ ಎಂದು ಶಾಸಕ ಜಿ ಡಿ ಹರೀಶ್ ಗೌಡ ಪತ್ನಿ ವರ್ಷ ಹರೀಶ್ ಗೌಡ ಹೇಳಿದರು.

ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆಚಾರ್ಯ ವಿದ್ಯಾ ಸಂಸ್ಥೆ ಬೆಂಗಳೂರು ರವರು  ಹಮ್ಮಿಕೊಂಡಿದ್ದ ವಾರ್ಷೀಕ ಸಮಾಜ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ  ಮಾನವನು ಒಂದು ಸಂಘ ಜೀವಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದ್ದಂತೆ ತನ್ನ ಬದುಕನ್ನು ಹಸನುಗೊಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು. ಮನುಷ್ಯ ಜೀವನವನ್ನು ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸಿಕೊಳ್ಳಲು ನಡೆಸಿದ ಹಲವು ಪ್ರಯತ್ನಗಳು ಸಾಮಾಜಿಕ ಆರೋಗ್ಯದ ಸುಧಾರಣೆಗೆ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದೆ

ಸಮಾಜ ಕಾರ್ಯದ ನೆಲೆಯಲ್ಲಿ ಸಮುದಾಯ ಅಭಿವೃದ್ಧಿ ಎಂಬ ನೆಲಗಟ್ಟಿನ  ಮೇಲೆ ಮಾನವನ ಸಾಮಾಜಿಕ ಜೀವನದ ಪ್ರಗತಿಯಾಗಲು ಸಾಧ್ಯ. ಅದು ಒಂದು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರೂ  ಸಮಾಜ ಕಾರ್ಯ ಮತ್ತು ಸಮುದಾಯದ ಅಭಿವೃದ್ಧಿ ಯನ್ನು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಬಾಂಧವ್ಯ ಮತ್ತು ಸರ್ವತೋಮುಖ ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂದರು.

ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ.ಲೋಹಿತ್ ಮಾತನಾಡಿ ಸಮಾಜ ಕಾರ್ಯದ ಮುಖ್ಯ ಉದ್ದೇಶ ಮಾನವನ ಸಾಮಾಜಿಕ ಜೀವನವನ್ನು ಸಮೃದ್ಧಗೊಳಿಸುವುದು ಮತ್ತು ಸಂತೋಷಕರ ಹಾಗೂ ಆರೋಗ್ಯಕರ ಸಮಾಜವನ್ನು ರೂಪಿಸುವುದಾಗಿದೆ. ಸಮಾಜಕಾರ್ಯವು ವ್ಯಕ್ತಿ ಸಮೂಹ ಸಮುದಾಯವನ್ನು ಸ್ವಪ್ರಯತ್ನದ ಮೂಲಕ ಸಾಮಾಜಿಕ ಸಮಸ್ಯೆಗಳಿಂದ ಮುಕ್ತಿಗೊಳಿಸುವ ಪ್ರಾಯೋಗಿಕ ಕೆಲಸವಾಗಿದೆ ಆದರಿಂದ  ಸಮುದಾಯ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ. ಮಿರ್ಶದ್ ರೆಹಮನ್ ಪ್ರೊ. ಡಾ. ಕುಮಾರ್ ಸ್ವಾಮಿ ದೀಪಿಕಾ ಎನ್ ಜೆಡಿಎಸ್ ತಾಲೂಕು ಅದ್ಯಕ್ಷ ಸುರೇಂದ್ರ ತಾ ಪಂ ಮಾಜಿ ಸದಸ್ಯ ಕೆ ಗಣಪತಿ ಎಪಿಎಂಸಿ ಮಾಜಿ ಅದ್ಯಕ್ಷ ಶುಭಾಷ್, ನಿವೃತ್ತ ಶಿಕ್ಷಕ ವೆಂಕಟರಮಣ, ಅಪ್ಪಾಜಿಗೌಡ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

admin
the authoradmin

Leave a Reply

Translate to any language you want