LatestMysore

ವೀರಶೈವ ಸಮಾಜದ ಮುಖಂಡ ಸಿ.ಪಿ.ರಮೇಶ್ ಕುಮಾರ್ ಗೆ ಶುಭಹಾರೈಸಿದ ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಕೆಪಿಸಿಸಿ ಸದಸ್ಯರೂ ಆದ  ವೀರಶೈವ ಸಮಾಜದ ಪ್ರಭಾವಿ ಮುಖಂಡ ಸಿ.ಪಿ.ರಮೇಶ್ ಕುಮಾರ್ ಅವರ ಸೇವಾ ಕಾರ್ಯ ಮತ್ತು ರಾಜಕೀಯ ಬದುಕು ಇತರರಿಗೆ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿ ಸಿ.ಪಿ.ರಮೇಶ್ ಕುಮಾರ್ ಅವರ 59 ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ಕಳೆದ ಎರಡು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಇವರು ರಾಜಕೀಯಕ್ಕಿಂತ ಸಮಾಜ ಸೇವೆಗೆ ಹೆಚ್ಚು ಒತ್ತು ನೀಡುತ್ತಿದ್ದು ಮಠ ಮಾನ್ಯಗಳು ಸೇರಿದಂತೆ ನೊಂದವರು ಮತ್ತು ತುಳಿತಕ್ಕೊಳಗಾದವರಿಗೆ ಸದಾ ಆರ್ಥಿಕ ಸಹಕಾರ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಸಹಕಾರ ಬಯಸಿ ಯಾರೇ ತಮ್ಮಲ್ಲಿಗೆ ಬಂದರೂ ಅವರನ್ನು ಅತ್ಯಂತ ಗೌರವದಿಂದ ಕಾಣುವ ಮಾನವೀಯ‌ ಗುಣ ಬೆಳೆಸಿಕೊಂಡಿರುವ ಸಿ.ಪಿ.ರಮೇಶ್ ಕುಮಾರ್ ನೊಂದವರು ಮತ್ತು ಬಂದವರ ಸಂಕಷ್ಟ ಆಲಿಸಿ ಅವುಗ ಪರಿಹಾರಕ್ಕೆ ಪ್ರಾಮಾಣಿಕ‌ ಪ್ರಯತ್ನ ಮಾಡುವ ಮೂಲಕಜನ ನಾಯಕರಾಗಿ ಅಪಾರ ಹೆಸರು ಗಳಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಕೆಪಿಸಿಸಿ ಸದಸ್ಯರಿಗೆ ಭವಿಷ್ಯದಲ್ಲಿ ಹೆಚ್ಚಿನ ರಾಜಕೀಯ ಅಧಿಕಾರ ದೊರೆಯಲೆಂದು ಆಶಿಸಿದ ಶಾಸಕರು ವೀರ ಶೈವ ಸಮಾಜದ ಕಣ್ಮಣಿಯಾಗಿರುವ ಇಂತಹವರ ನಡೆ ಮತ್ತು ನುಡಿ ಎಲ್ಲಾ ವರ್ಗದವರಿಗೂ ಆದರ್ಶ ಮತ್ತು ಅನುಕರಣೀಯ ಎಂದು ಕೊಂಡಾಡಿದರು.

ಜನ್ಮ ದಿನದ ಶುಭ ಹಾರೈಕೆ ಸ್ವೀಕರಿಸಿ ಮಾತನಾಡಿದ ಸಿ.ಪಿ.ರಮೇಶ್ ಕುಮಾರ್ ಸಮಾಜದಲ್ಲಿ ಉಳ್ಳವರು ಮತ್ತು ಹಣವಂತರು ತಮ್ಮ ಜನ್ಮ‌ದಿನವನ್ನು ಅನಗತ್ಯ ದುಂದು ವೆಚ್ಚದ ಮೂಲಕ ಆಚರಿಸಿಕೊಳ್ಳದೆ ನೊಂದವರ ನೆರಳಿಗೆ ಸಹಾಯ ಹಸ್ತ ಚಾಚಬೇಕು.      ನಮ್ಮ‌ ಕುಟುಂಬ ನಿರಂತರವಾಗಿ ಸಮಾಜದ ಕಟ್ಟಕಡೆ ವ್ಯಕ್ತಿಗಳನ್ನು ಗುರುತಿಸಿ ಅವರ ನೆರವಿಗೆ ನಿಲ್ಲುವ ಕೆಲಸ‌ ಮಾಡುತ್ತಿದ್ದು ಮುಂದೆಯೂ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದು ನುಡಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ,  ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಶಾಸಕರ ಪತ್ನಿ ಸುನೀತಾರವಿಶಂಕರ್, ಅರ್ಜುನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ದಿಲೀಪ್, ಮುಖಂಡರಾದ ಬಿ.ಟಿ.ಮೋಹನ್ ಕುಮಾರ್, ಗಂಧನಹಳ್ಳಿವೆಂಕಟೇಶ್ ಸೇರಿದಂತೆ ನೂರಾರು ಮಂದಿ ಅಭಿಮಾನಿಗಳು ಮತ್ತು ಸ್ನೇಹಿಯರು ಜನ್ಮ ದಿನದ ಶುಭಾಷಯ‌ ಕೋರಿದರು.

ಇದಕ್ಕೂ ಮೊದಲು ತಮ್ಮ ಮನೆ ದೇವರಾದ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ‌ ರಮೇಶ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿ ಆ ನಂತರ‌ ಭೇರ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೈಸೂರಿನ ಸ್ಪಂದನಾ ಆಸ್ಪತ್ರೆ ಮತ್ತು ಜೀವಧಾರ ರಕ್ತ ನಿಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ‌ ಶಿಬಿರಕ್ಕೆ ಚಾಲನೆ ನೀಡಿದರು.

ಸ್ಪಂದನಾ ಆಸ್ಪತ್ರೆ ಯ ಕೀಲು ಮತ್ತು ಮೂಳೆ ತಜ್ಞ ಡಾ.ಅವಿನಾಶ್, ನೇತ್ರ ತಜ್ಞ ಡಾ.ಅಗರ್ ವಾಲ್ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ಸಾವಿರಾರು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಅರಕೆರೆ ವಿರಕ್ತ ಮಠದ ಸಿದ್ದೇಶ್ವರಸ್ವಾಮೀಜಿ,    ಹಾಡ್ಯ ಈ ಶನೇಶ್ವರ ಮಠದ ಬಸವೇಶ್ವರಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ  ಅಭಿನವ ಶಿವಾಚಾರ್ಯ ಚಂದ್ರಶೇಖರ ಸ್ವಾಮೀಜಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷೆ ಪುಷ್ಪ ಲತಾ ರಮೇಶ್ ಕುಮಾರ್, ಸಿ.ಆರ್.ಮಂಜುನಾಥ್, ಮುಖಂಡರಾದ ಬಿ.ಎನ್.ಪ್ರಕಾಶ್, ಕುಮಾರಸ್ವಾಮಿ, ಯತಿರಾಜ್, ಮುಂಜನಹಳ್ಳಿಮಹದೇವನಾಯಕ, ಸೇರಿದಂತೆ ಸ್ನೇಹಿತರು ಮತ್ತು ಹಿತೈಷಿಗಳು ಹಾಜರಿದ್ದರು.

admin
the authoradmin

Leave a Reply

Translate to any language you want