LatestMysore

ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಿದವರು ಬಸವೇಶ್ವರರು: ನಟರಾಜ ಸ್ವಾಮೀಜಿ

 ಕೆ.ಆರ್.ನಗರ(ಜಿಟೆಕ್ ಶಂಕರ್): 12 ನೇ ಶತಮಾನದಲ್ಲಿಯೇ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಿದ ಜನಗಜ್ಯೋತಿ ಬಸವೇಶ್ವರರ ಬದುಕು ಮತ್ತು ಜನಪರ ಚಿಂತನೆಗಳು ಜಗತ್ತಿಗೆ‌ಮಾದರಿ ಎಂದು ಗಾವಡಗೆರೆ ಗುರು ಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿಗಳು ಹೇಳಿದರು.

ಪಟ್ಟಣದ ಸಾರಿಗೆ ಸಂಸ್ಥೆ ಬಸ್ ಘಟಕದ ಆವರಣದಲ್ಲಿ ಕೆಎಸ್ ಆರ್ ಟಿಸಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ದೈವಾಂಶ ಶಂಭೂತರಾಗಿದ್ದ ಅಣ್ಣ ಬಸವಣ್ಣನವರ ವಚನ ಸಾರವನ್ನು ಅರಿತು ಬದುಕು ನಡೆಸಿದರೆ ಸಂತಸದಿಂದ ಜೀವನ ನಡೆಸಬಹುದು ಎಂದರು.

ಪ್ರತಿಯೊಬ್ಬ ಮನುಷ್ಯನು ಸಂತಸ ಮತ್ತು ಸಹಬಾಳ್ವೆ ಯಿಂದ ಬದುಕ ಬೇಕೆಂಬ ಕನಸನ್ನು ಕಂಡಿದ್ದ ಕಾಯಕ ಯೋಗಿ ಅದನ್ನು ಸಹಕಾರ ಗೊಳಿಸಲು ತಮ್ಮ‌ ಜೀವನದುದ್ದಕ್ಕೂ ಕಂಕಣ ಬದ್ದರಾಗಿ ಕೆಲಸ ಮಾಡಿದ್ದರು ಎಂದು ನುಡಿದರು.

ಸರ್ವ ಕಾಲಕ್ಕು ಸಲ್ಲುವ ಬಸವೇಶ್ವರರ ಯೋಚನೆ, ಚಿಂತನೆ ಮತ್ತು ಮಾನವ ಪರ ಕಾಳಚಿ ಅನುಕರಣೀಯವಾಗಿದ್ದು ಅಂತಹ ಯುಗ ಪುರುಷ ಕನ್ನಡ ನಾಡಿನಲ್ಲಿ ಜನಿಸಿ ತಮ್ಮ ವಿಚಾರಧಾರೆ ಗಳ ಮೂಲಕ ನಾಡಿನ ಗೌರವ ಮತ್ತು ಘನತೆಯನ್ನು‌ ಮುಗಿಲೆತ್ತರಕ್ಕೇರಿಸಿದ್ದಾರೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಜಿಲ್ಲಾ ಗ್ರಾಮಾಂತರ ವಿಭಾಗೀಯ ತಾಂತ್ರಿಕ ಅಭಿಯಂತರ ಪಿ.ಮಹೇಶ್ ಮಾತನಾಡಿ ಸಮಾಜದ ಉದ್ದಾರಕ್ಕಾಗಿ ದುಡಿದ ಮಹಾನುಭಾವರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಅವರುಗಳ ತತ್ವ ಆದರ್ಶ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಭದ್ರತಾ ಜಾಗೃತಾಧಿಕಾರಿ ಎಂ.ಪಿ.ರಘು, ಸಹಾಯಕ ಕಾರ್ಮಿಕ ಕಲ್ಯಾಣಾಧಿಕಾರಿ ರಶ್ಮಿ, ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗದ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಹೆಚ್.ರಾಜೇಶ್ ಮಡಹಳ್ಳಿ ಮಾತನಾಡಿದರು. ಕೆ.ಆರ್.ನಗರ ಬಸ್ ಘಟಕದ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಬಸ್ ಘಟಕದ ಸಿಬ್ಬಂದಿ ವರ್ಗ ಹಾಜರಿದ್ದರು.

ಸಮನ್ವಯದ ಕೊರತೆಯಿಂದ ತೊಂದರೆ..

ಪಟ್ಟಣದ ಬಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ವ್ಯವಸ್ಥಾಪಕರ ನಡುವೆ ಸಮನ್ವಯತೆ ಇಲ್ಲದ ಪರಿಣಾಮ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ತೊಂದರೆಯಾಗುತ್ತಿದ್ದು ಇದನ್ನು ಸರಿಪಡಿಸಿಕೊಂಡು ಕೆಲಸ ಮಾಡದಿದ್ದರೆ ಎಲ್ಲರನ್ನು ಸಾಮೂಹಿಕವಾಗಿ ವರ್ಗವಣೆ ಮಾಡಲಾಗುತ್ತದೆ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ಸಂಚಲನಾಧಿಕಾರಿ ದಿನೇಶ್ ಕುಮಾರ್ ಎಚ್ಚರಿಕೆ ನೀಡಿದರು.

ಘಟಕದ ಆವರಣದಲ್ಲಿ ನಡೆದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಚಾರದ ಬಗ್ಗೆ ನಮಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿದ್ದು ಇದನ್ನು ನಾವು ಸಹಿಸಲು ಸಾಧ್ಯವಿಲ್ಲವೆಂದು ಕಠಿಣ ಎಚ್ಚರಿಕೆ ನೀಡಿದ ಅವರು ಒಂದೆಡೆ ಕೆಲಸ‌ ಮಾಡುವವರು ವೈಮನಸ್ಸಿಲ್ಲದೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸುವ ನಾವುಗಳು ನೀತಿ ನಿಯಮಗಳಿಗೆ ತಲೆ ಬಾಗಿ ಅದರನುಸಾರ ನಡೆದುಕೊಳ್ಳಬೇಕಾಗುತ್ತದೆ ಅದನ್ನು ಹೊರತು ಪಡಿಸಿ ದುರ್ವತನೆ ತೋರಿ ಸಾರಿಗೆ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ನಡೆದು ಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

admin
the authoradmin

Leave a Reply

Translate to any language you want