LatestMysore

ಶಾಸಕ ಡಿ ರವಿಶಂಕರ್ ರವರ ಹುಟ್ಟುಹಬ್ಬ ಆಚರಣೆ.. ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

ಕೆ.ಆ‌ರ್.ನಗರ(ಸಂಘಟನೆ ಮಂಜುನಾಥ್): ಪಟ್ಟಣದ ಪುರಸಭಾ ವೃತ್ತದಲ್ಲಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ ರವಿಶಂಕರ್ ರವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಶಾಸಕ ಡಿ. ರವಿಶಂಕರ್ ಅಭಿಮಾನಿಗಳಿಂದ ಸಾರ್ವಜನಿಕರಿಗೆ ಸಿಹಿ ಹಂಚಿ ಲಘು ಉಪಹಾರವನ್ನು ವಿತರಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಎಸ್. ಮಹದೇವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್‌, ಪುರಸಭಾ ಮಾಜಿ ಸದಸ್ಯರಾದ ನಟರಾಜ್, ಮಿಕ್ಸರ್ ಶಂಕರ್, ಸೈಯದ್ ಅಸ್ಲಾಂ ತಾಲೂಕು ಬಗಾ‌ರ್ ಹುಕುಮ್ ಸಮಿತಿ ಸದಸ್ಯ ಅಪ್ಪಾಜಿ ಗೌಡ, ವಕ್ತರ ಸೈಯದ್ ಜಾಬಿರ್ ಕಾಂಗ್ರೆಸ್ ಮುಖಂಡರಾದ ಪೈಂಟರ್ ನವೀದ್, ಶ್ರೀರಾಮ್ ಬ್ಲಾಕ್ ಪುಟ್ಟು, ನಾಗೇಂದ್ರ, ಫ್ಲಾಗ್ ಕುಮಾರ, ಶಮಂತ, ಮೋಹನ, ಮಾಜಿ ಗ್ರಾಂ ಪಂ ಉಪಾಧ್ಯಕ್ಷ ಸಾಲೆಕೊಪ್ಪಲು ನೂತನ ಗೌಡ  ಇತರರು ಇದ್ದರು.

ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ

ಇನ್ನು ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಅನ್ನ ಸಂತರ್ಪಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಆತ್ಮತೃಪ್ತಿ ಸಂಸ್ಥಾಪಕರು ಹಾಗೂ ಕಾರ್ಯದರ್ಶಿ ಪ್ರಿಯದರ್ಶಿನಿ  ಹೇಳಿದರು.

ಶಾಸಕ ಡಿ.ರವಿಶಂಕರ್ ಅವರ 50ನೇ ವರ್ಷದ ಹುಟ್ಟುಹಬ್ಬ ಪ್ರಯುಕ್ತ ಆತ್ಮತೃಪ್ತಿ ಟ್ರಸ್ಟ್ ಕಡೂರು ಚಿಕ್ಕಮಗಳೂರು ಜಿಲ್ಲೆ ಇವರ ವತಿಯಿಂದ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನಸಾಮಾನ್ಯರಿಗೂ ಕೈಗೆಟುಕುವ ಅವರು ಸರ್ವ ಜನಾಂಗವನ್ನು ತಮ್ಮವರಂತೆ ಕಾಣುತ್ತಿದ್ದು, ತಾಲ್ಲೂಕಿನಲ್ಲಿ ಜಾತಿ, ಧರ್ಮ ಹಾಗೂ ಪಕ್ಷಭೇದವಿಲ್ಲದೇ ಸರ್ವ ಅಭಿವೃದ್ಧಿಯ ಜೊತೆಗೆ ಅವಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಭಿವೃದ್ಧಿಯ ಹರಿಕಾರ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂ.ಎಸ್.ಮಹದೇವ, ಹಿರಿಯ ಆರೋಗ್ಯ ನಿರೀಕ್ಷಕರು ರಾಜೇಂದ್ರ, ಮಾಡುವ ಮು ಸಂತಾಜವರಪ್ಪ ಮಾತನಾಡಿದರು.

ಆತ್ಮತೃಪ್ತಿ ಅನ್ ಸದಸ್ಯ ಸಚ್ಚಿದಾನಂದ ಎಸ್. ಯಡಹಳ್ಳಿ ಮಹದೇವ, ವಕ್ತಾರ ಸೈಯದ್ ಚಾಬೀರ್, ಕಾಂಗ್ರೆಸ್ ಯುವ ಮುಖಂಡರಾದ ಚಾಂದ್ ಪಾಷ, ಪುರಸಭಾ ಪರಿಸರ ಅಭಿಯಂತರ ಮಧುಕಂದನ್ ಕಾಂಗ್ರೆಸ್ ಅಧ್ಯಕ್ಷೆ ಲತಾರವಿಶಂಕರ್, ರಾಣಿ ಮೊದಲಾದವರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want