LatestMysore

ಪ್ರಗತಿಪರ ಗಾಣಿಗರ ವೇದಿಕೆ ಅಸ್ತಿತ್ವಕ್ಕೆ… ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹುಣಸೂರು: ಹುಣಸೂರು ತಾಲೂಕಿನ ಗಾಣಿಗ ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.70ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳ ಪೋಷಕರು ಹುಣಸೂರು ತಾಲೂಕಿನ ನಗರ ಮತ್ತು ಗ್ರಾಮಾಂತರ ನಿವಾಸಿಗಳಾಗಿರಬೇಕು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯ ಸ್ಟೇಟ್, ಸಿಬಿಎಸ್‌ಇ, ಐಸಿಎಸ್‌ಇ ವಿದ್ಯಾರ್ಥಿಗಳು ತಮ್ಮ ಪ್ರಥಮ ಯತ್ನದಲ್ಲೇ ಶೇ.70ಕ್ಕಿಂತಲೂ ಹೆಚ್ಚಿನ ಅಂಕ ಪಡೆದಿರಬೇಕು ಹಾಗೂ ಉನ್ನತ ಶಿಕ್ಷಣದಲ್ಲಿ ಉತ್ತೀರ್ಣ ರಾದವರನ್ನು ಗೌರವಿಸಲಾಗುವುದು.

ಅರ್ಜಿಯೊಂದಿಗೆ ಆಧಾರ್‌ಕಾರ್ಡ್ ಜೆರಾಕ್ಸ್, ಅಂಕಪಟ್ಟಿ ಶಾಲಾ ಮುಖ್ಯಶಿಕ್ಷಕರು ಅಥವಾ ಪ್ರಾಂಶುಪಾಲರಿಂದ ದೃಢೀಕರಿಸಿ ಮೇ 25ರೊಳಗೆ ಅರ್ಜಿ ಸಲ್ಲಿಸುವುಂತೆ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಹುಣಸೂರು ತಾಲೂಕು ಪ್ರಗತಿಪರ ಗಾಣಿಗರ ವೇದಿಕೆಯ ಅಧ್ಯಕ್ಷ ಮನುಕುಮಾರ್, ಕಾನೂನು ಸಲಹೆಗಾರರು ಪುಟ್ಟಶೆಟ್ಟಿ, ಗೌರವಾಧ್ಯಕ್ಷ ರಮೇಶ್ ,  ಖಜಾಂಚಿ ವಿ.ಮಹದೇವ್ ಮೊ. 9844633309,  9844435657, 944-834-3561, 944-887-2040,  97312 52186 ಇವರನ್ನು ಸಂಪರ್ಕಿಸಲು ಕೋರಿದರು.

ಪ್ರಗತಿಪರ ಗಾಣಿಗರ ವೇದಿಕೆ ಅಸ್ತಿತ್ವಕ್ಕೆ…

ಹುಣಸೂರು ತಾಲೂಕು ಗಾಣಿಗರ ವೇದಿಕೆಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ನಂಜಾಪುರ ಮನುಕುಮಾರ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಜ್ಯೋತಿ ನಗರದ ಪ್ರಸಾದ್, ಗೌರವಾಧ್ಯಕ್ಷರಾಗಿ ರಮೇಶ್‌, ಪುಟ್ಟಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಸಾದ್‌ ತಿಳಿಸಿದ್ದಾರೆ.

 

admin
the authoradmin

Leave a Reply

Translate to any language you want