LatestMysore

ಬಸವಮಾರ್ಗ ಉಚಿತ ಕುಡಿತ ಬಿಡಿಸುವ ಶಿಬಿರಕ್ಕೆ ಉತ್ತಮ ಸ್ಪಂದನೆ… ರಾಜ್ಯದ ವಿವಿಧೆಡೆಯಿಂದ ಬಂದ ಶಿಬಿರಾರ್ಥಿಗಳು

ಮೈಸೂರು(ನವೀನ್ ಕುಮಾರ್ ಹೆಚ್.ಪಿ.): ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್.ಬಸವರಾಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ 10 ದಿನಗಳ 58ನೇ ಉಚಿತ ಕುಡಿತ ಬಿಡಿಸುವ ಶಿಬಿರದ ಹಿನ್ನೆಲೆಯಲ್ಲಿ ಶನಿವಾರ ದಾಖಲಾತಿ ಪ್ರಕ್ರಿಯೆ ನಡೆಯಿತು. ಬೀದರ್, ಬೆಳಗಾವಿ, ಯಾದವಗಿರಿ, ಕಲಬುರಗಿ, ಬಾಗಲಕೋಟೆ, ರಾಯಚೂರು, ಹುಬ್ಬಳ್ಳಿ, ದಾರವಾಡ, ಗದಗ, ಹಾವೇರಿ, ಕೊಪ್ಪಳ, ಉಡುಪಿ, ದಕ್ಷಿಣ ಕನ್ನಡ, ಹಾಸನ ಮಂಗಳೂರು, ಬೆಂಗಳೂರು, ಬೆಂಗಳೂರು, ರಾಮನಗರ ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ವ್ಯಸನಿಗಳ ಜೊತೆಗೆ ಆಗಮಿಸಿದ್ದ ಕುಟುಂಬಸ್ಥರು, ಶಿಬಿರಾರ್ಥಿಗಳನ್ನು ದಾಖಲಾತಿ ಮಾಡಿದರು.

ಹಲವಾರು ವರ್ಷಗಳಿಂದ ಕುಡಿತ ಹಾಗೂ ಇತರೆ ವ್ಯಸನಕ್ಕೆ ದಾಸರಾಗಿದ್ದಾರೆ. ಮನೆಯಲ್ಲಿ ಎಷ್ಟೇ ಬುದ್ಧಿವಾದ ಹೇಳಿದರೂ ಕೇಳುತ್ತಿಲ್ಲ. ಕುಡಿದ ಮೇಲೆ ಮನುಷ್ಯನಾಗಿ ಇರುವುದಿಲ್ಲ. ನಿತ್ಯ ಜಗಳ, ಹೆಂಡತಿ, ಮಕ್ಕಳನ್ನು ಹೊಡೆಯುವುದು, ಆಸ್ತಿಯಲ್ಲಿ ಪಾಲು ಕೇಳುವುದು, ಡೈರ‍್ಸ್ ಕೇಳುವುದು, ಹೆಚ್ಚಾಗಿ ಬುದ್ದವಾದ ಹೇಳಿ ನಿಯಂತ್ರಣ ಮಾಡಿದರೆ ಸತ್ತುಹೋಗುತ್ತೇನೆ ಎಂದು ಬ್ಲಾö್ಯಕ್‌ಮೇಲ್ ಮಾಡುತ್ತಾನೆ. ದಯವಿಟ್ಟು ಈತನ ಕುಡಿತದ ಚಟವನ್ನು ಬಿಡಿಸಲು ನಮಗೆ ಸಹಾಯ ಮಾಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.

ಬಸವ ಮಾರ್ಗ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಉತ್ತಮ ಹೆಸರು ಇದೆ. ಸಂಸ್ಥೆಯ ಸಂಸ್ಥಾಪಕರು ಇದುವರೆಗೆ 57 ಕುಡಿತ ಬಿಡುವ ಶಿಬಿರಗಳನ್ನು ಉಚಿತವಾಗಿ ಆಯೋಜಸಿದ್ದಾರೆ. 16 ಸಾವಿರಕ್ಕೂ ಹೆಚ್ಚು ಜನರಿಗೆ ಸೇವೆ ಕಲ್ಪಿಸಿದ್ದಾರೆ. ಅವರ ಮನೆಯಲ್ಲಿ ಇಂದು ನೆಮ್ಮದಿಯ ವಾತಾವರಣ ಇದೆ. ಆ ವಾತಾವರಣ ನಮ್ಮ ಮನೆಯಲ್ಲೂ ನೆಲಸಬೇಕು. ಕುಡಿತ ಬಿಟ್ಟು ಹೊಸ ಮನುಷ್ಯನಾಗಿ ಬದಲಾದರೆ ಸಾಕು. ನಾವು ಕೋಟಿ, ಕೋಟೆ ಧನ್ಯವಾದಗಳನ್ನು ಬಸವಣ್ಣ ಹಾಗೂ ಬಸವಮಾರ್ಗ ಸಂಸ್ಥೆಗೆ ಹೇಳುತ್ತೇವೆ ಎಂದು ಕಣ್ಣೀರು ಹಾಕಿದರು.

ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್. ಬಸವರಾಜು ಮಾತನಾಡಿ, ಕುಡಿತ ನಮ್ಮ ಮನೆಯಲ್ಲಿ ನೆಮ್ಮದಿ ಹಾಳು ಮಾಡಿದೆ. ಆಶಾಂತಿಗೆ ಕಾರಣವಾಗಿದೆ. ವ್ಯಸನಕ್ಕೆ ದಾಸನಾದ ವ್ಯಕ್ತಿಯು ಮಾನಸಿ, ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಗಳನ್ನು ಹಾಳು ಮಾಡಿಕೆಳ್ಳುತ್ತಿದ್ದಾನೆ. ಈ ನಿಟ್ಟಿನಲ್ಲಿ ಸಂಸ್ಥೆಯು ಉಚಿತವಾಗಿ ಈ ಶಿಬಿರವನ್ನು ಆಯೋಜನೆ ಮಾಡಿದೆ. ಪ್ರತಿಯೊಬ್ಬರು ಈ ಶಿಬರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಶಿಬಿರದಲ್ಲಿ ಕುಡಿತ ಬಿಡಲು ಪೂರಕವಾದ ವೇದಿಕೆಯನ್ನು ನಾವು ಕಲ್ಪಿಸಿಕೊಡುತ್ತೇವೆ. ಬೆಳಗ್ಗೆ ಯೋಗ, ಧ್ಯಾನ, ಪ್ರಾಣಾಯಾಮ, ಪೌಷ್ಠಕ ಆಹಾರ, ತರಗತಿಗಳು, ಕ್ರೀಡೆಗಳು, ಶಿವನಪೂಜೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಕಲ್ಪಿಸಿಕೊಡಲಾಗುತ್ತದೆ. ಅಮಲು ರೋಗಿ ದೇವೋಭಯ ಎನ್ನುವ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಸಂಸ್ಥೆಯು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸೇವೆ ಮಾಡುತ್ತಿದೆ. ಈ ಸೌಲಭ್ಯ ಪ್ರತಿಯೊಬ್ಬರಿಗೂ ಸಿಗಬೇಕು. ತಿಳಿದವರು ತಿಳಿಯದವರಿಗೆ ಈ ಬಗ್ಗೆ ತಿಳಿಸಬೇಕು ಎಂದು ಮನವಿ ಮಾಡಿದರು.

admin
the authoradmin

Leave a Reply

Translate to any language you want