LatestMysore

ಪತ್ನಿಗೆ ಇನ್ ಸ್ಟಾದಲ್ಲಿ ಅಶ್ಲೀಲ ಕಾಮೆಂಟ್… ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಶಾಸಕ ಹರೀಶ್ ಗೌಡ ಗರಂ

ಮೈಸೂರು: ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಪೋಸ್ಟ್ ಗಳನ್ನು ಹಾಕಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸದೆ‌ ವಿಳಂಬ ಮಾಡಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ನಗರ ಪೊಲೀಸ್ ಅಯುಕ್ತರ ಹಳೆಯ ಕಚೇರಿ ಕಟ್ಟಡದಲ್ಲಿ ಇರುವ ನಗರ ಸೈಬರ್ ಠಾಣೆಯ ಎಸಿಪಿ ಮನೋಜ್ ಕುಮಾರ್ ಅವರನ್ನು ತಮ್ಮ ಪತ್ನಿ ವರ್ಷಗೌಡ, ವಕೀಲರೊಂದಿಗೆ ಭೇಟಿ ಮಾಡಿ ಚರ್ಚಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾದ ಪೋಸ್ಟ್ ಮಾಡಿರುವ ಬಗ್ಗೆ ದೂರು ನೀಡಿ ಕಾನೂನು ಕ್ರಮ ಜರುಗಿಸುವಂತೆ ಹೇಳಿದರೂ ಈತನಕ ಯಾವುದೇ ಕ್ರಮಕೈಗೊಂಡಿಲ್ಲ.‌ ದೂರು ನೀಡಿ ಹದಿಮೂರು ದಿನಗಳು ಕಳೆದರೂ ಈತನಕ ಯಾವ ಕ್ರಮವಾಗಿಲ್ಲ.

ಪೋಸ್ಟ್ ಮಾಡಿರುವ ವಿಚಾರದಲ್ಲಿ ಎಫ್ ಐಆರ್ ದಾಖಲಿಸದೆ ವಿಳಂಬ ಮಾಡಲಾಗಿದೆ.‌ ಇದರ ಹಿಂದೆ ಯಾರಿದ್ದಾರೆ? ಯಾರ ಒತ್ತಡವಿದೆ ಎಂದು ಪ್ರಶ್ನಿಸಿದರು. ಈ ವೇಳೆ ಎಸಿಪಿ ಮನೋಜ್ ಕುಮಾರ್ ಸಮಜಾಯಿಷಿ ನೀಡಲು ಮುಂದಾದರೂ ಶಾಸಕ ಹರೀಶ್ ಗೌಡರು ಕೇಳಲಿಲ್ಲ. ಒಂದು ಮಹಿಳೆಗೆ ಅಸಭ್ಯ ಕಾಮೆಂಟ್ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಒಬ್ಬ ಶಾಸಕರ ಪತ್ನಿಗೆ ಈ ರೀತಿಯಾಗಿದೆ. ಮೊದಲ ಬಾರಿಗೆ ಇಂತಹ ವಿಚಾರದಲ್ಲಿ ನನ್ನ ಪತ್ನಿಯಿಂದ ದೂರು ಕೊಡಿಸಬೇಕಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ವರ್ಷ ಗೌಡ ಅವರ ಪರ ವಕೀಲರು ಕಾನೂನು ಅಂಶಗಳು ಮತ್ತು ದೂರಿಗೆ ಸಂಬಂಧಿಸಿದಂತೆ ಮಾಹಿತಿ ಪ್ರಸ್ತಾಪ ಮಾಡಿ ತಕ್ಷಣವೇ ಎಫ್ ಐಆರ್ ದಾಖಲಿಸಬೇಕು ಎಂದು ಹೇಳಿದರು.

ಸೈಬರ್ ಠಾಣೆ ಎಸಿಪಿ ಮನೋಜ್ ಕುಮಾರ್ ಅವರ ಭೇಟಿ ಬಳಿಕ ಮಾತನಾಡಿದ ಶಾಸಕ ಹರೀಶ್ ಗೌಡ, ನಾವು ಜೂನ್ 26ರಂದು ದೂರು ಕೊಟ್ಟಿದ್ದೇವೆ. ‌ತಾಂತ್ರಿಕ ಕಾರಣಗಳ ಬಗ್ಗೆ ಎರಡು ಕ್ಲಾರಿಫಿಕೇಶನ್ ಕೇಳಿದ್ದರು. ಅದಕ್ಕೆ ತಕ್ಕಂತೆ ಈಗ ಮಾಹಿತಿಯನ್ನು ಕೊಡಲಾಗಿದೆ. ಒಬ್ಬ ಮಹಿಳೆಗೆ ಅಂದರೆ ನಮ್ಮ ಧರ್ಮಪತ್ನಿ ಅನ್ನುವ ವಿಚಾರಕ್ಕಿಂತ ಯಾರೇ ಮಹಿಳೆಯಾದರೂ ಕೆಟ್ಟ ಮೆಸೇಜ್ ಹಾಕದಂತೆ ದೂರು ನೀಡಿದ್ದಾರೆ.

ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.  ಕಾಮೆಂಟ್ ಹಾಕಿದವನನ್ನು ಪತ್ತೆ ಹಚ್ಚಿ ಕರೆ ತರಲಾಗುವುದು ಎನ್ನುವ ಅಂಶವನ್ನು ಹೇಳಿದ್ದಾರೆ. ಹಾಗಾಗಿ ಎರಡು ದಿನಗಳ ಕಾಲ ಕಾದು‌ ನೋಡೋಣ ಎಂದು ನುಡಿದರು.  ಯಾರೇ ಆಗಿದ್ದರೂ ಹುಡುಕಿ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವುದಕ್ಕೆ ಎಫ್ ಐಆರ್ ಹಾಕಿ ತನಿಖೆ ಶುರು‌ಮಾಡಿದ್ದಾರೆ. ನಾನು ಒಬ್ಬ ಶಾಸಕನಾಗಿ ಈ ರೀತಿಯಲ್ಲಿ ಬಂದಿರುವುದಕ್ಕೆ ಬೇಸರ ಆಗುವುದಕ್ಕಿಂತ ವಿಕೃತ ಮನಸ್ಸಿನ ಜನರು ಸಮಾಜದಲ್ಲಿ ಇನ್ನೂ ಇರುವ ಬಗ್ಗೆ ನೋವಾಗಿದೆ.‌ ಈ ವಿಚಾರವನ್ನು ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ಮಾಡಿರುವೆ.ಮುಂದೆ ಅಧಿವೇಶನದಲ್ಲಿ ಪ್ರಸ್ತಾಪವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಯಾರ ಬಗ್ಗೆ ನಮಗೆ ಅನುಮಾನ ಇಲ್ಲ. ಪತ್ತೆ ಆಗಬೇಕು. ಒಬ್ಬ ಮಹಿಳೆಗೆ ಈ ರೀತಿಯಲ್ಲಿ ಅಪಮಾನ ಸರಿಯಲ್ಲ ಎನ್ನುವ ಕಾರಣದಿಂದಾಗಿ ನನ್ನ ಪತ್ನಿ ಹೋರಾಟ ಶುರು‌ಮಾಡಿದ್ದಾರೆ. ಈ ಹೋರಾಟದಲ್ಲಿ ನಾನೂ ಕೂಡ ಕೈಜೋಡಿಸಿ ಹೋರಾಟ ಮಾಡುವೆ. ರಾಜಕೀಯ ಕಾರಣಕ್ಕಾಗಿ ಹೋರಾಟ ಮಾಡಲಿ. ಆದರೆ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಮಾಡಬಾರದು ಎಂದು ಹೇಳಿದರು. ವರ್ಷ ಹರೀಶ್ ಗೌಡ, ವಕೀಲ‌ ಸಾಗರೆ ಶಿವಕುಮಾರ್ ಹಾಜರಿದ್ದರು.

ಹುಣಸೂರು ಶಾಸಕರ ಪತ್ನಿಗೆ  ಇನ್ ಸ್ಟಾದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದವನ ವಿರುದ್ಧ ದೂರು

admin
the authoradmin

Leave a Reply