CinemaLatest

ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿರುವ ‘ಕಾಲಘಟ್ಟ’ ಚಿತ್ರದ “ನೀನೇನೆ ನನ್ನ ದೇವತೆ” ಹಾಡು..

ಬೆಂಗಳೂರು: ದಿಕ್ಷೀತಾ ಎಂಟರ್ ಪ್ರೈಸೆಸ್ ಬೆಂಗಳೂರು  ಅವರ “ಕಾಲಘಟ್ಟ” ಕನ್ನಡ ಚಲನಚಿತ್ರದ  ಮೊದಲ ಲಿರಿಕಲ್ ಹಾಡು “ನೀನೇನೆ ನನ್ನ ದೇವತೆ” ಬಿಡುಗಡೆಯಾಗಿದ್ದು ಸಿನಿಪ್ರೇಕ್ಷಕರ ಮತ್ತು ಸಂಗೀತ ಪ್ರಿಯರ ಗಮನ ಸೆಳೆದು ಯ್ಯೂಟೂಬ್‌ದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಹಾಡು ಕೇವಲ ಒಂದು ಮೆಲೋಡಿ ಅಲ್ಲ, ಅದು ನಮ್ಮ ಮಣ್ಣಿನ ಆತ್ಮವನ್ನು ಹೊತ್ತ ಭಾವನೆ. ಹಾಡಿನಲ್ಲಿ ಮೈಲಾರ, ಹರಕೆ, ಜಾಗಟೆ, ಕಾವೇರಿ ಹೀಗೆ ನಮ್ಮ ನಾಡಿನ ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪದಗಳನ್ನು ಬಳಸಲಾಗಿದೆ. ಈ ಹಾಡಿನ ಮೂಲಕ ಪ್ರೇಕ್ಷಕರಿಗೆ ತಮ್ಮ ಊರು, ತಮ್ಮ ಪ್ರೀತಿ, ತಮ್ಮ ನೆನಪುಗಳನ್ನು ನಮ್ಮ ನಾಡಿನ ಸಂಸ್ಕೃತಿಯನ್ನು ಹೊಸ ರೀತಿಯಲ್ಲಿ ಮರುಕಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಯುವ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ತಿಳಿಸಿದ್ದಾರೆ.

ಚಿತ್ರದಲ್ಲಿ ನಾಯಕನಾಗಿ ಅಭಿದಾಸ್ ಹಾಗೂ ನಿತಿಲ್ ಅಭಿನಯಿಸಿದ್ದು, ನಾಯಕಿಯರಾಗಿ ಖುಷಿ ಮತ್ತು ಮೇಘ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದರಾದ ಶೋಭರಾಜ್, ಭವ್ಯ, ರಮೇಶ್ ಭಟ್, ಪ್ರಶಾಂತ್ ರವಿ , ಮಂಡ್ಯ ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ-ಸದಾಶಿವ ಹಿರೇಮಠ-ರಾಜ್ ಕಡೂರ್, ಸಂಗೀತ ಎ.ಎಂ.ನೀಲ್, ಸಂಕಲನ ವೆಂಕಿ ಯುಡಿವಿ, ಸಾಹಸ ಮಾಸ್‌ಮಾದ, ಸಾಹಿತ್ಯ ನಮ್ ಋಷಿ, ಸ್ಯಾಂಕಿ, ಸಿದ್ದುಶಿವರಾಮ್, ಪ್ರಸಾಧನ ವಿಜಯ್, ಪಿಆರ್ ಓ- ಹರೀಶ್ ಅರಸು, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಪ್ರಚಾರ ವಿನ್ಯಾಸ ಆರ್.ಕ್ರಿಯೇಟಿವ್ , ನಿರ್ದೇಶನ ತಂಡ ಗಣೇಶ್, ರವಿ, ಸಾಗರ್ ಇದೆ.

ಕಥೆ-ಚಿತ್ರಕಥೆ-ಸಂಭಾಷಣೆ ಜೊತೆಗೆ ನಿರ್ದೇಶನವನ್ನು  ಕೆ. ಪ್ರಕಾಶ್ ಅಂಬಳೆ  ಮಾಡಿದ್ದಾರೆ. ಲಯನ್ ಚಿಕ್ಕೇಗೌಡ , ಟಿ.ಸಿ ತಳಗವಾಡಿ ನಿರ್ಮಾಪಕರಾಗಿದ್ದಾರೆ. ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆಗೆ ಬರಲಿರುವ  “ಕಾಲಘಟ್ಟ” ಚಿತ್ರತಂಡಕ್ಕೆ ಸಿನಿಪ್ರೇಕ್ಷಕರ ಪ್ರೀತಿ ಮತ್ತು ಆಶೀರ್ವಾದ ಇರಲಿ ಎಂಬ ಆಶಯವನ್ನು ಚಿತ್ರ ತಂಡ ವ್ಯಕ್ತಪಡಿಸಿದೆ.

admin
the authoradmin

Leave a Reply

Translate to any language you want