janamanakannada > Blog > Latest > Mysore > ಶ್ರೀ ಅರ್ಜುನ ಅವಧೂತ ಗುರು ಮಹಾರಾಜರ ನಿವಾಸಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ
ಮೈಸೂರು: ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಭಾರತೀಯ ಜನತಾ ಪಕ್ಷದ (BJP) ಛಲವಾದಿ ನಾರಾಯಣಸ್ವಾಮಿ ಅವರು ಬುಧವಾರ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಗುರು ಮಹಾರಾಜರ ಮೈಸೂರು ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು..

ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಅವರು ಪರಮಪೂಜ್ಯರಿಗೆ ಫಲ-ತಾಂಬೂಲ ನೀಡಿ ಗೌರವ ಸಮರ್ಪಿಸಿ ನಿಮ್ಮನ್ನು ಬಹಳ ಕಾಲದಿಂದಲೂ ಭೇಟಿ ಮಾಡಿ ಆಶೀರ್ವಾದ ಪಡೆಯಬೇಕು ಎಂದು ಬಯಸಿದ್ದೆ ಈಗ ಅವಕಾಶ ಒದಗಿ ಬಂತು ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು , ಕಾರ್ಯಕರ್ತರು ಹಾಗೂ ಗುರು ಬಂಧುಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

admin








