LatestMysore

ತಂಬಾಕಿನಿಂದ ದೂರವಿರುವಂತೆ ಅರಿವು ಮೂಡಿಸುವ ಕಣ್ಣೂರು ವಿ ಗೋವಿಂದಾಚಾರಿ

ನಿಮ್ಮ ಸಮಾಜಸೇವೆಗೆ ನಮ್ಮ ಸೆಲ್ಯೂಟ್

ಮೈಸೂರು: ವಿಶ್ವ ತಂಬಾಕು ವಿರೋಧಿ ದಿನದ ಸಂದರ್ಭದಲ್ಲಿ ಸಮುದ್ಯತಾ ಕೇಳುಗರ ಬಳಗದ ಅಧ್ಯಕ್ಷರಾದ  ಹಾಗೂ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆ ಆರ್ ಎಂ ಪಿ ಯಲ್ಲಿ  ಹಿರಿಯ ಶುಶ್ರೂಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಶ್ರೀ ಕಣ್ಣೂರು ವಿ ಗೋವಿಂದಾಚಾರಿ ರವರು ಬೀಡಿ, ಸಿಗರೇಟ್ ಗೆ ದಾಸರಾಗಿದ್ದ 55 ವರ್ಷದ ಮಾದಣ್ಣ ರವರನ್ನು ಈ  ಹಿಂದೆ ಮನವಲಿಸಿದ್ದರ ಪ್ರಯುಕ್ತ ಅವರು ಅದರಿಂದ ಮುಕ್ತರಾಗಿದ್ದಾರೆ.

ಮಾದಣ್ಣ ರವರು ಈಗ ಮೈಸೂರಿನ ಬೆಮೆಲ್ ನಗರದ ಆರ್ಚ್ ಬಳಿ ಇರುವ ಸಾರ್ವಜನಿಕರ ತರಕಾರಿ ಮಾರುಕಟ್ಟೆಯಲ್ಲಿ ಭೇಟಿ ಮಾಡಿ ಅಭಿನಂದಿಸಿದರು.   ಈ ಸಂದರ್ಭದಲ್ಲಿ ಮಾದಣ್ಣ ರವರು ಮಾತನಾಡುತ್ತಾ ನಿಮ್ಮ ಒಂದು ಮಾತಿನಿಂದ ಈಗ ಮಾದಕ ವಸ್ತುಗಳಿಂದ ದೂರವಿದ್ದು, ತರಕಾರಿ ಮಾರಾಟ ಮಾಡಿ ಸುಖ ಸಂಸಾರ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ರೀತಿ ಗೋವಿಂದಾಚಾರಿ ರವರು ಹಲವರ ಮನಃಪರಿವರ್ತನೆ ಮಾಡುತ್ತಾ ಬರುತ್ತಿದ್ದಾರೆ. ಅವರನ್ನ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ಅಭಿನಂದಿಸಿದ್ದಾರೆ.

admin
the authoradmin

Leave a Reply