janamanakannada > Blog > Latest > Mysore > ಹೊಸೂರು ಕೃಷಿ ಪತ್ತಿನ ಸಂಘದಿಂದ ನಿವೃತ್ತಿಗೊಂಡ ನೌಕರ ಹೊಸೂರು ರವಿರವರಿಗೆ ಆತ್ಮೀಯ ಬೀಳ್ಕೊಡುಗೆ
ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹೊಸೂರು ರವಿ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಸಂಘದ ಸಿಇಓ ಚಂದ್ರಕಲಾ ಮಾತಾಡಿ ನಮ್ಮ ಸಂಘದಲ್ಲಿ 25 ವರ್ಷದಿಂದ ಪ್ರಾಮಾಣಿಕ ನೌಕರರಾಗಿ ದುಡಿದ ರವಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಹೆಚ್. ಬಿ ನವೀನ್ ಕುಮಾರ್, ಉಪಾಧ್ಯಕ್ಷ ಎಸ್ ಆರ್ ವಿವೇಕಾನಂದ, ನಿರ್ದೇಶಕರಾದ ಹೆಚ್ ಆರ್ ಮಹೇಶ್, ಹೆಚ್. ಎಸ್ ಜಗದೀಶ್, ಹೆಚ್ ಆರ್ ಕೃಷ್ಣಮೂರ್ತಿ ಎಸ್. ಬಿ ಹುಚ್ಚೇಗೌಡ, ಹೆಚ್ ಎನ್ ರಮೇಶ್, ಸಿ ಎಂ ರಾಜೇಗೌಡ, ಕಮಲಮ್ಮಶಿವಣ್ಣ, ಕಲ್ಯಾಣಮ್ಮ , ಪಾರ್ಥಯ್ಯ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲಕೊಪ್ಪಲು ದಿನೇಶ್, ಸಿಬ್ಬಂದಿ ಅರುಣ್, ಮಹದೇವ್ ಈಶ್ವರ್ ಉಪಸ್ಥಿತರಿದ್ದರು.
Tags:sangatane manjunath
admin








