LatestMysore

ಮಕ್ಕಳ ವಾರಾಂತ್ಯ ಅಭಿನಯ ಕಾರ್ಯಾಗಾರ, ರಂಗ ತರಬೇತಿ ತರಗತಿ ಆರಂಭ… ಆಸಕ್ತರಿಗೆ ಅವಕಾಶ

ರಂಗಾಸಕ್ತ ಮಕ್ಕಳಿಂದ ನೋಂದಣಿಗಾಗಿ ಅರ್ಜಿ ಆಹ್ವಾನ

ಮೈಸೂರು: ಅದಮ್ಯ ರಂಗಶಾಲೆ(ರಿ)ಯ ವತಿಯಿಂದ   ವಿ. ಕೆ. ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ಇದೇ ಜೂನ್ 13ರಿಂದ ಒಂದು ವರ್ಷ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ ತರಬೇತಿ ಕೋರ್ಸ್ ಆರಂಭವಾಗಲಿದ್ದು, ರಂಗಾಸಕ್ತ ಮಕ್ಕಳಿಂದ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅದಮ್ಯ ರಂಗಶಾಲೆಯು ಕಳೆದ ಎಂಟು ವರ್ಷಗಳಿಂದ ವಯಸ್ಕರ ಹಾಗೂ ಮಕ್ಕಳ ಅಭಿನಯ ಮತ್ತು ರಂಗ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬರುತ್ತಿರುವ ಸಕ್ರಿಯ ರಂಗ ಸಂಘಟನೆಯಾಗಿದ್ದು, ಮಕ್ಕಳನ್ನು ರಂಗಭೂಮಿಯಲ್ಲಿ ತೊಡಗಿಸುವ ಪರಮ ಧ್ಯೇಯ ಹೊಂದಿದೆ. ಶಾಲಾ ಪಠ್ಯಪುಸ್ತಕದಲ್ಲಿನ ವಸ್ತುವಿಷಯಗಳನ್ನು ಬೋಧಿಸಲು ಚಟುವಟಿಕೆಯುಕ್ತ ಕಲಿಕಾ ವಿಧಾನ ಅತ್ಯಂತ ಯಶಸ್ವಿದಾಯಕ.

ಈ ಹಿನ್ನೆಲೆಯಲ್ಲಿಯೇ ಪಠ್ಯ ವಸ್ತು ಕಲಿಕೆಗೆ ನಾಟಕ ಅಥವಾ ರಂಗ ಮಾಧ್ಯಮವನ್ನು ಅಳವಡಿಸಲಾಗಿದೆ. ಇದು ಅತ್ಯಂತ ಪರಿಣಾಕಾರಿ ಕಲಿಕೆಯ ವಿಧಾನವಾಗಿದ್ದು, ಮಕ್ಕಳಿಗೆ ಅತ್ಯಂತ ಆಕರ್ಷಣೀಯವಾಗಿದೆ. ಅವರಲ್ಲಿ ಕಲಿಕಾಸಕ್ತಿಯ ಕೆರಳಿಸಿ, ಕಲಿಕಾ ವಿಷಯವನ್ನು ಮನೋ-ಅಂತರ್ಗತ ಮಾಡುವ ಅತ್ಯುತ್ತಮ ಮಾರ್ಗೋಪಾಯವಾಗಿದೆ.

ಇದಕ್ಕೆ ಪೂರಕವಾಗಿ ಅದಮ್ಯದ ಮುಂದಿನ ಭಾಗವಾಗಿ ಒಂದು ವರ್ಷ ಅವಧಿಯ ವಾರಾಂತ್ಯ ಮಕ್ಕಳ ಅಭಿನಯ ಮತ್ತು ರಂಗ ತರಬೇತಿ ಕಾರ್ಯಗಾರವು ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ವಿ. ಕೆ. ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯುತ್ತದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು ಜೂನ್ 13 ರ ಒಳಗೆ ದಾಖಲಿಸಿ ಪ್ರವೇಶಾತಿಯನ್ನು ಪಡೆದಿರಬೇಕು.

ಜೂನ್ 13ರಿಂದಲೇ ತರಗತಿಗಳು ಪ್ರಾರಂಭವಾಗಲಿವೆ. ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ ಮತ್ತು ಪರಿಷ್ಕರಣೆ, ಪ್ರಸಾದನ, ಬೆಳಕು, ರಂಗವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ನಾಟಕ ಪ್ರದರ್ಶನ  ಸೇರಿದಂತೆ ರಂಗಭೂಮಿಯ ಮತ್ತು ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ರಂಗಭೂಮಿಯ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ತರಗತಿ ನಡೆಯಲಿದ್ದು, ಶನಿವಾರ ಸಂಜೆ 5-30 ರಿಂದ 8 ರವರೆಗೂ ಭಾನುವಾರ ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆಯವರೆಗೂ ತರಗತಿಗಳು ನಡೆಯಲಿವೆ. ಕಾರ್ಯಾಗಾರಕ್ಕೆ ಗರಿಷ್ಠ 25 ಮಂದಿ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಮಕ್ಕಳ ವಯೋಮಿತಿ 5 ವರ್ಷದಿಂದ 13 ವರ್ಷವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಚಂದ್ರು ಮಂಡ್ಯ ಅವರ ದೂರವಾಣಿ ಸಂಖ್ಯೆ 8660103141 ಸಂಪರ್ಕಿಸಬಹುದು ಎಂದು ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.

admin
the authoradmin

Leave a Reply

Translate to any language you want