LatestMysore

ಸಿಎಂ ಡಿ.ಕೆ.ಶಿವಕುಮಾರ್ ಕೈಗೆ ಬೆಳ್ಳಿ ಕಡಗ ತೊಡಿಸಿದ ಮಾಜಿ ಶಾಸಕ ಹೆಚ್ ಪಿ ಮಂಜುನಾಥ್

ಹುಣಸೂರು ಕಾಂಗ್ರೆಸ್ ನಿಂದ ನೂತನ ಸಿಎಂಗೆ ಗೌರವ ಸಮರ್ಪಣೆ

ಹುಣಸೂರು,(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ):   ಹುಣಸೂರು ನಗರ,  ಗ್ರಾಮಾಂತರ ಹಾಗೂ ಬಿಳಿಕೆರೆ ಬ್ಲಾಕ್  ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ನೇಹಜೀವಿ ಬಳಗದ ಸ್ನೇಹಿತರು ಹುಣಸೂರಿನ ಮಾಜಿ ಶಾಸಕ  ಎಚ್ ಪಿ ಮಂಜುನಾಥ್ ರವರ ನೇತೃತ್ವದಲ್ಲಿ ನೂತನ  ಮುಖ್ಯಮಂತ್ರಿ   ಡಿ ಕೆ ಶಿವಕುಮಾರ್ ಅವರನ್ನು  ಬೆಂಗಳೂರಿನ ಕುಮಾರ ಕೃಪ ಅತಿಥಿಗೃಹದಲ್ಲಿ ಭೇಟಿ ಮಾಡಿ ಕೈ ಗೆ  ಬೆಳ್ಳಿ ಕಡಗವನ್ನು ತೊಡಿಸಿ ಸನ್ಮಾನಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭ  ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್  ಕಳೆದ ಚುನಾವಣೆಯಲ್ಲಿ ಎಚ್ ಪಿ ಮಂಜುನಾಥ್ ಹುಣಸೂರು ಕ್ಷೇತ್ರದಲ್ಲಿ ಗೆಲುವು ಪಕ್ಕ  ಎಂಬ ನಿರೀಕ್ಷೆಯಲ್ಲಿದ್ದೆವು.  ಆದರೆ ಅತ್ಯಲ್ಪ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಸೋಲಿಗೆ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಪಕ್ಷವನ್ನು ಸದೃಢ ಮತ್ತು ಎಚ್ ಪಿ ಮಂಜುನಾಥ್ ರವರ ಕೈ ಬಲಪಡಿಸಲು ಮತ್ತಷ್ಟು ಶ್ರಮ ವಹಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಮುಂಬರುವ 2028 ರ ಚುನಾವಣೆಯಲ್ಲಿ  ಅವರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕೆಪಿಸಿಸಿ ರಾಜ್ಯ ವಕ್ತಾರ ಎಂ ಲಕ್ಷ್ಮಣ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಿ ಕೆ ಕುನ್ನೇಗೌಡರು ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ, ಹುಣಸೂರು ತಾ. ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಗದ್ದಿಗೆ ದೇವರಾಜ್, ಗಣಪತಿ ಇಂಡಲ್ಕರ್, ಬ್ಲಾಕ್ ಅಧ್ಯಕ್ಷರುಗಳಾದ ರವಿಪ್ರಸನ್ನ, ಬಾಲಸುಂದರ್, ಬಿಳಿಕೆರೆ ಪ್ರೇಮ್ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್ಎಸ್ ಕುಮಾರ್, ಉದ್ಯಮಿಗಳಾದ ಟಿ.ಕೃಷ್ಣ, ಡಾ. ಎಚ್ ವಿ ಕಾರ್ತಿಕ್, ಮಹಿಳಾ ಅಧ್ಯಕ್ಷರಾದ ಸುನಿತಾಜಯರಾಮೇಗೌಡ, ಸುಮಿತ್ರ, ಯುವ ಅಧ್ಯಕ್ಷರಾದ ದರ್ಶನ್, ಕಾರ್ತಿಕ್  ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ