LatestMysore

ಲೋಕ ಕಲ್ಯಾಣಕ್ಕಾಗಿ ಲಲಿತಾ ಪರಮೇಶ್ವರಿಗೆ ಹರಿದ್ರಾ ಅರ್ಚನೆ.. ಸಾಲಿಗ್ರಾಮ‌, ತಿರುಪತಿ ಲಡ್ಡು ವಿತರಣೆ

ಮೈಸೂರು:  ಮೈಸೂರಿನ‌ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಲೋಕಾ ಕಲ್ಯಾಣಕ್ಕಾಗಿ ಲಲಿತಾ ಪರಮೇಶ್ವರಿ ಅಮ್ಮನವರಿಗೆ, ಹರಿದ್ರಾ(ಅರಿಸಿನ) ಅರ್ಚನೆ ನಡೆಯಿತು.

ಪರಮಪೂಜ್ಯ ಶ್ರೀ ವೆಂಕಟಾಚಲ ಅವಧೂತ ಗುರು ಮಹಾರಾಜರ ಆಶೀರ್ವಾದದೊಂದಿಗೆ ನಡೆದ ಈ ವಿಶೇಷ ಪೂಜಾ ಕೈಂಕರ್ಯದಲ್ಲಿ  ಶ್ರೀ ಅರ್ಜುನ ಅವಧೂತರು ಅರ್ಚನೆ ನೆರವೇರಿಸಿದರು. ಅಮ್ಮನವರಿಗೆ ಹರಿದ್ರಾ ಅರ್ಚನೆಯೊಂದಿಗೆ ಈಶ್ವರಲಿಂಗಕ್ಕೆ ರುದ್ರಾಭಿಷೇಕ ಮಾಡಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಈ ಬಾರಿ ಉತ್ತಮ ಮಳೆ-ಬೆಳೆಯಾಗಿ ಲೋಕ ಸುಭೀಕ್ಷೆಯಿಂದ ಕೂಡಿರಲಿ ಎಂದು ಕೋರಿದರಲ್ಲದೆ, ಭಕ್ತರ ಕಣ್ಣು ಮತ್ತು ಹೃದಯದಲ್ಲಿ ಶ್ರೀ ವೆಂಕಟಾಚಲ ಅವಧೂತರನ್ನು ಕಾಣುತ್ತಿದ್ದೇನೆ ಎಂದರು.

ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಈ ಕಾರ್ಯಕ್ರಮ ಸಂಜೆಯವರೆಗೂ ನೆರವೇರಿತು. ರಾಜ್ಯದ ನಾನಾ ಮೂಲಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗುರುಗಳ ದರ್ಶನ ಮತ್ತು ಆಶೀರ್ವಾದ ಪಡೆದು ಪುನಿತರಾದರು…. ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಸ್ವತಃ ಗುರುಗಳೆ ಫಲ ಮಂತ್ರಕ್ಷತೆ, ಸಾಲಿಗ್ರಮ, ದೇವಿಗೆ ಅರ್ಚನೆ ಮಾಡಿದ ಅರಿಸಿನ ಮತ್ತು ತಿರುಪತಿಯಿಂದ ತರಿಸಲಾಗಿದ್ದ ಲಾಡು ಪ್ರಸಾದವನ್ನು ವಿತರಿಸಿದರು.

ಮುಗಿ ಬಿದ್ದ ಭಕ್ತರು…

ಅರ್ಜುನ ಅವಧೂತರ ಆಶೀರ್ವಾದ ಪಡೆಯಲು ಮತ್ತು ಅವರಿಂದ ಸಾಲಿಗ್ರಾಮ ಪಡೆದು ಪುನೀತರಾಗಲು ಭಕ್ತ ಸಾಗರವೆ ಮುಗಿ ಬಿದ್ದಿತು… ಪುಟ್ಟ ಮಕ್ಕಳು ಸೇರಿದಂತೆ ಎಲ್ಲ ವಯೋ ಮಾನದ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು.

 

 ಆಯುಷ್ ಮ್ಹಾತ್ರೆ ಭೇಟಿ…

ಇದೇ ವೇಳೆ ಮೈಸೂರಿಗೆ ಆಗಮಿಸಿದ್ದ ಅಂಡರ್- 19 ಭಾರತ ಕ್ರಿಕೆಟ್ ತಂಡದ ನಾಯಕ ಆಯುಷ್ ಮ್ಹಾತ್ರೆ ಅವರು ಅರ್ಜುನ ಗುರುಗಳು ನಡೆಸುತ್ತಿರುವ ಲೋಕ ಕಲ್ಯಾಣ ಪೂಜೆಯಲ್ಲಿ ಭಾಗವಹಿಸಿ ಅರ್ಜುನ ಗುರೂಜಿಯರ ಆಶೀರ್ವಾದ ಪಡೆದರು.

ಅದೆ ರೀತಿ ಕನ್ನಡ ಚಿತ್ರರಂಗ ಮತ್ತು ಕಿರು‌ ತೆರೆ ಕಲಾವಿದರು ಮತ್ತು ಸಮಾಜದ ಗಣ್ಯರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು. ನೆರೆದ ಸಾವಿರಾರು ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಅಧಿಕ ಮಾಸ ವಿಶೇಷವಾಗಿ ಪೂಜೆ, ಆರಾಧನೆ, ಜಪ, ತಪ ದಾನ ಧರ್ಮಕ್ಕೆ ಹೇಳಿದ ಮಾಸ, ಪ್ರತಿ 33 ತಿಂಗಳಿಗೊಮ್ಮೆ ಇದು ಬರುತ್ತದೆ… ಈ ಬಾರಿ ಅಧಿಕ ಜ್ಯೇಷ್ಠ ಮಾಸ ಮತ್ತು ನಮ್ಮ ಪೂಜ್ಯ ಗುರುಗಳು ಜನಿಸಿದ್ದು ಅಧಿಕ ಜ್ಯೇಷ್ಠ ಮಾಸದಲ್ಲಿ ಅದೊಂದು ವಿಶೇಷ….

admin
the authoradmin

Leave a Reply

Translate to any language you want