janamanakannada > Blog > Latest > Mysore > ಡಾ.ವಸಂತ್ ಕುಮಾರ್ ತಿಮಕಾಪುರ ನಿವಾಸದಲ್ಲಿ ಮನೆ ಮನೆಗೆ ಗ್ರಂಥಾಲಯ ಅನುಷ್ಠಾನ ಸಮಾರಂಭ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿಯ ಸಂಯುಕ್ತಾಶ್ರಯದಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿಗಳೂ, ಲೇಖಕರೂ ಆದ ಡಾ.ವಸಂತ್ ಕುಮಾರ್ ತಿಮಕಾಪುರ ಅವರ ನಿವಾಸದಲ್ಲಿ ಮನೆ ಮನೆಗೆ ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕನ್ನಡ ಪ್ರಭ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ಉದ್ಘಾಟಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಾನಸ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಳೇಗೌಡ ನಾಗವಾರ, ಪ್ರೊ.ಹೆಚ್.ಎಂ. ವಸಂತಮ್ಮ ಭಾಗವಹಿಸಿದ್ದರು.
ಸಮಿತಿಯ ಸಂಚಾಲಕರಾದ ಚಂದ್ರಶೇಖರ್ ಆಶಯ ನುಡಿಗಳನ್ನು, ಶಿಕ್ಷಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವರಾಜು ಪಿ ಚಿಕ್ಕಳ್ಳಿ ನಿರೂಪಣೆ ಮಾಡಿದರೆ , ಸದಸ್ಯರಾದ ಮೈ ನಾ ಲೋಕೇಶ್ ವಂದಿಸಿದರು.
Tags:my na lokesh
admin
You Might Also Like
ಇಂದಿನ (20-09-2026 ಭಾನುವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?
adminಸೆಪ್ಟೆಂಬರ್ 20, 2026
ಮೈಸೂರು ಅರಮನೆ ಸಿಂಹಾಸನಕ್ಕಿದೆ ಪೌರಾಣಿಕ ನಂಟು… ಇದರ ಇತಿಹಾಸವೇ ರೋಚಕ!
adminಸೆಪ್ಟೆಂಬರ್ 20, 2026








