CinemaLatest

ನಾ ಕಂಡ  ಜೂನಿಯರ್ ರಾಜ್ ಕುಮಾರ್ ಅಭಿನಯದ ಕೌಟುಂಬಿಕ ಚಿತ್ರ ‘ಧರ್ಮಿಷ್ಠ’

ಧರ್ಮಿಷ್ಠ ಚಿತ್ರವು ಎಲ್ಲರೂ ನೋಡಬಹುದಾದ ಕೌಟುಂಬಿಕ ಚಿತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಚಿತ್ರದ ಕಥೆ ಸರಳವಾಗಿದ್ದರೂ ಅದರ ಆಳ ದೊಡ್ಡದಿದೆ. ಒಬ್ಬಳೇ ಮಗಳು ಗೌರಿ ತುಂಬಾ  ಪೀತ್ರಿಯಿಂದ ನೋಡಿಕೊಳ್ಳುವ ತಂದೆ ತಾಯಿ ಕುಟುಂಬದಲ್ಲಿ ಕಷ್ಟವಿದ್ದರೂ ಜೀವನ ನಡೆಸಿಕೊಂಡು ಹೋಗಬಹುದು ಎಂಬುದು ಧರ್ಮಿಷ್ಠ ಚಿತ್ರ ನೋಡಿದಾಗ ಗೊತ್ತಾಗುತ್ತದೆ.

ಈ ಚಿತ್ರದಲ್ಲಿ ಅತಿಯಾದ ನಾಟಕೀಯತೆ ಇಲ್ಲ. ಹಳ್ಳಿಯ ಬದುಕಿಗೆ  ಕ್ಯಾಮರಾ ಇಟ್ಟಂತೆ, ಎಲ್ಲವೂ ಸುಂದರವಾಗಿ ಚಿತ್ರಣಗೊಂಡಿದೆ. ಧರ್ಮಿಷ್ಠ ಚಿತ್ರವು ಹಳ್ಳಿ ಹಿನ್ನೆಲೆಯ  ಕುಟುಂಬದ ಹಾಸ್ಯಚಿತ್ರದಂತೆ ಕಾಣುತ್ತದೆ. ಹಳ್ಳಿಯ ಪರಿಸರವನ್ನು ಅಲ್ಲಲ್ಲಿ  ಚಿತ್ರೀಕರಿಸಲಾಗಿದೆ. ಕಥೆ ಸಾಹಿತ್ಯ ಬರೆದಿರುವ  ಹೆಚ್.ವಿ. ಪುಟ್ಟಸ್ವಾಮಿ ನಿರ್ದೇಶನ ಮಾಡಿರುವ ಈ ಚಿತ್ರ ಇಂದಿನ ಪೀಳಿಗೆಗೆ ಒಂದು ದೊಡ್ಡ ಪಾಠ ಎನ್ನುವುದು ಚಿತ್ರವನ್ನು ನೋಡಿದವರಿಗೆ ಅನಿಸದಿರಲಾರದು.

ನಾಯಕ ನಟನಾಗಿ ಅಭಿನಯಿಸಿರುವ ಅಜಿತ್ ಕುಮಾರ್ ( ಜೂನಿಯರ್ ರಾಜ್ ಕುಮಾರ್ ), ಮೈತ್ರಿ, ನಾಗರತ್ನ, ಟಿ. ಗೋಲ್ಡನ್ ಸುರೇಶ್, ಬಲರಾಮ, ಪೀತಮ್, ಮೋನಿಶಾ, ಸುಮಂತ್ ಮತ್ತು ಸಹ ಕಲಾವಿದರು ಅಭಿನಯಿಸಿದ್ದಾರೆ. ಛಾಯಾಗ್ರಹಣ ಚೇತನ್,  ಸಂಗೀತ ರವೀಶಂಕರ್,  ಸಂಕಲನ ಮಹೇಂದ್ರ ಮಹದೇವು,  ನಿರ್ಮಾಪಕರು ಟಿ. ಗೋಲ್ಡನ್ ಸುರೇಶ್,  ಕಾರ್ಯಕಾರಿ ನಿರ್ಮಾಪಕರು ಲಯನ್ ಪಮಿಳ್ ಎಸ್. ಆಚಾರ್ ಆಗಿದ್ದಾರೆ.

admin
the authoradmin

Leave a Reply