ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಮಾರಮ್ಮನ ಹಬ್ಬವು ಅದ್ದೂರಿಯಾಗಿ ನೆರವೇರಿತು.

ಮಂಗಳವಾರ ಮಧ್ಯಾಹ್ನ 3 ಘಂಟೆ ಸಮಯದಲ್ಲಿ ಗ್ರಾಮದ ಹೂರವಲಯದ ತೋಟವೊಂದರಲ್ಲಿ ಗ್ರಾಮದ ಜನರು ತಮಟೆ ವಾದ್ಯಗೋಷ್ಠಿ ಯೊಂದಿಗೆ ಕಳಸ ಪೂಜೆ ನೆರವೇರಿಸಿ ನಂತರ ಗ್ರಾಮದ ಒಳಗಡೆ ಮೆರವಣಿಗೆ ಮಾಡಿ ಮಾರಮ್ಮನ ದೇವಸ್ಥಾನಕ್ಕೆ ತಂದರು. ಇದೇ ವೇಳೆ ಇಡೀ ಗ್ರಾಮವೇ ಜಾತಿ ಭೇದ ಮರೆತು ಸಂಜೆ ಮಾರಮ್ಮನಿಗೆ ಮೊಸರು ಅನ್ನ ತಂಪು ನೀಡಿದರು.

ಮಾರಮ್ಮನ ದೇವಸ್ಥಾನವು ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿತ್ತು. ತೆಂಗಿನ ಗರಿಯ ಚಪ್ಪರ ಹಾಕಿ ಅಲ್ಲಿ ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗಾರ ಮಾಡಲಾಗಿತ್ತು.

ಗ್ರಾಮದ ಎಲ್ಲಾ ಜನಾಂಗದ ಮಹಿಳೆಯರು ಪ್ರತಿ ಬೀದಿ ಬೀದಿಯಲ್ಲಿ ತಮಟೆ ಮೆರವಣಿಗೆ ಮೂಲಕ ನಾರಿಯರು ಭಾರತದ ಸಂಸ್ಕೃತಿಯಂತೆ ಸೀರೆಯುಟ್ಟು ತಂಬಿಟ್ಟನ್ನು ವಿವಿಧ ಅಲಂಕಾರ ಮಾಡಿ ಅದಕ್ಕೆ ಬೇವಿನ ಸೊಪ್ಪಿನೊಂದಿಗೆ ಕಣಗಲೇ ಹೂವು ಮುಡಿಸಿ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆಗೆ ಬರುವ ಎಲ್ಲಾ ಮಹಿಳೆಯರನ್ನು ಅವರವರ ಬೀದಿಯಲ್ಲಿ ಪ್ರತ್ಯೇಕವಾಗಿ ಕರೆದುಕೊಂಡು ಬಳಿಕ ಒಟ್ಟಾಗಿ ಸೇರಿಸಿ ಮಾರಮ್ಮನ ದೇವಸ್ಥಾನಕ್ಕೆ ಕರೆ ತಂದರು

ಆ ನಂತರ ಮಹಿಳೆಯರು ಮಾರಮ್ಮನ ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ನಂತರ ತಾವು ತಂದಿರುವ ಹಣ್ಣು ಕಾಯಿ ಯೊಂದಿಗೆ ಮಾರಮ್ಮನಿಗೆ ಪೂಜೆ ಸಲ್ಲಿಸಿ ತಂದಿರುವ ತಂಬಿಟ್ಟನ್ನು ಸ್ವಲ್ಪ ದೇವರಿಗೆ ಅರ್ಪಿಸುವರು. ಇದಾದ ನಂತರ ಮಹಿಳೆಯರು ಪೂಜೆ ಸಲ್ಲಿಸಿದ ಮಾರಿಗೆ ಜೋಡಿ ಮರಿ ಅರ್ಪಿಸಿದ್ದಾರೆ.

ಗಂಡಸರು ಜೋಡಿ ಮರಿ ಬಲಿ ನಂತರ ಪ್ರತಿ ಮನೆಯಿಂದ ಎಲ್ಲ ಸರ್ವ ಜನಾಂಗದವರು ಮಾರಮ್ಮನ ದೇವಸ್ಥಾನದ ಮುಂದೆ ಕೋಳಿ ಬಲಿ ನೀಡಿ ನಂತರ ಮಾರಮ್ಮನ ದೇವಸ್ಥಾನದ ಮೇಲೆ ಎಸೆದು ದೇವಸ್ಥಾನದ ಹಿಂಭಾಗದಲ್ಲಿ ಅದನ್ನು ಹೋಗಿ ಅವರವರ ಕೋಳಿಯನ್ನು ತೆಗೆದುಕೊಂಡು ಮನೆಗೆ ಹೋಗುತ್ತಾರೆ.

ಇನ್ನು ಹಬ್ಬದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳು ಮಹಿಳೆಯರು ಪುರುಷರು ಯುವಕ ಯುವತಿಯರು ಸೇರಿದಂತೆ ಜಾತ್ರೆಯಲ್ಲಿ ಪಾಲ್ಗೊಂಡು ಸಾಮಗ್ರಿಗಳನ್ನು ಖರೀದಿಸುತ್ತಿರುವುದೇ ಒಂಥರಾ ಮಜಾ..

ಜಾತ್ರೆಯ ಉಸ್ತುವಾರಿಯನ್ನು ಗ್ರಾಮದ ದೊಡ್ಡ ಯಜಮಾನರು ಹಾಗೂ ಚಿಕ್ಕ ಯಜಮಾನರು ವಿವಿಧ ಕೋಮಿನ ಯಜಮಾನರು ಸೇರಿ ಶಾಸ್ತ್ರೋಸ್ತ್ರವಾಗಿ ನೆರೆವೇರಿಸಿದರು.








