LatestMysore

ಸರ್ಕಾರದ ಸವಲತ್ತು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಸರ್ಕಾರಿ ನೌಕರರು ತಲುಪಿಸಬೇಕು

 ಕೆ.ಆ‌ರ್.ನಗರ(ಸಂಘಟನೆ ಮಂಜನಾಥ್): ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದು ಸರ್ಕಾರಿ ನೌಕರರ ಕರ್ತವ್ಯವಾಗಿದ್ದು, ಎಲ್ಲಾ ನೌಕರರು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ 20 ಮಂದಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿನಿಗಮದ ವತಿಯಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಸಮಾಜದಲ್ಲಿ ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಬೇಕು. ಉದ್ಯೋಗಕ್ಕಾಗಿ ಮತ್ತು ಮತ್ತಿತರ ವ್ಯವಸ್ಥೆಗಳಿಗೆ ಬೇರೆಯವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಆ ಕಾರಣಕ್ಕೆ ಅವರ ಬದುಕಿಗೆ ಚೈತನ್ಯ ನೀಡಲು ಸರ್ಕಾರ ತ್ರಿಚಕ್ರ ವಾಹನ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಬದುಕು ಸಾಗಿಸಬೇಕು ಎಂದರು.

ಡಿ.ದೇವರಾಜ ಅರಸು ನಿಗಮದಿಂದ 2024-25ನೇ ಸಾಲಿನಲ್ಲಿ ಒಟ್ಟು 30 ಮಂದಿ ಫಲಾನುಭವಿಗಳು ಉಚಿತ ಹೊಲಿಗೆ ಯಂತ್ರ ವಿತರಣೆಗೆ ಆಯ್ಕೆಯಾಗಿದ್ದು, ಇಂದು ಕೇವಲ ನಾಲ್ಕು ಮಂದಿಗೆ ಸಾಂಕೇತಿಕವಾಗಿ ನೀಡಲಾಗಿದ್ದು, ಉಳಿದವರಿಗೆ ಇಲಾಖೆಯ ಅಧಿಕಾರಿಗಳು ವಿತರಣೆ ಮಾಡುತ್ತಾರೆ. ಫಲಾನುಭವಿಗಳು ಸರ್ಕಾರದ ಸವಲತ್ತುಗಳನ್ನು ಅನ್ಯರಿಗೆ ನೀಡದೆ ಸದುಪಯೋಗ ಪಡಿಸಿಕೊಂಡು ಯೋಜನೆಗಳ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಎಸ್.ಮಹ ದೇವ್, ಉದಯಶಂಕರ್, ತಾಲ್ಲೂಕು ವಕ್ತಾರ ಸೈಯದ್‌ ಜಾಬೀರ್, ತಾ.ಪಂ. ಇಒಗಳಾದ ವಿ.ಪಿ.ಕುಲದೀಪ್, ಎ.ಎನ್. ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಬಿ.ನಟರಾಜು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸಹಾಯಕ ಅಭಿವೃದ್ದಿ ಅಧಿಕಾರಿ ಎನ್. ರಂಗಸ್ವಾಮಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾ.ಸಂಯೋಜಕ ಕೆ.ಎಲ್. ಹೇಮಂತ್‌ಕುಮಾರ್, ತಾ.ಪಂ. ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ಹುಚ್ಚೇಗೌಡ, ವಿ. ಸುರೇಶ್, ಎನ್.ಎಂ.ಶಂಕರಪ್ಪ, ತಿಮ್ಮಶೆಟ್ಟಿ ಹಾಜರಿದ್ದರು.

ಹೊಸೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆಗೆ ಭೂಮಿ ಪೂಜೆ

ಸಾಲಿಗ್ರಾಮ ತಾಲೂಕು ಹೊಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯ ಪ್ರಯುಕ್ತ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಮಾಡಲು  ಭೂಮಿ ಪೂಜೆ  ನೆರವೇರಿಸಲಾಯಿತು.

ಟಿಎಪಿಎಸ್ಎಂಎಸ್ ಮಾಜಿ ನಿರ್ದೇಶಕ ಎಸ್ ಟಿ ಕೀರ್ತಿ, ತಾ ಒಕ್ಕಲಿಗ ಸಂಘದ ನಿರ್ದೇಶಕ ಏ ಕುಚಿಲ್, ಮಾಜಿ ಗ್ರಾಪಂ ಅಧ್ಯಕ್ಷ ಹೆಚ್ ಆರ್ ಮಹೇಶ್, ಗಾರೆ ಕೃಷ್ಣ, ಮಾಜಿ ಗ್ರಾಪಂ ಸದಸ್ಯ ಡೈರಿ ಮಾಧು , ಸಂಘದ ಮಾಜಿ ಅಧ್ಯಕ್ಷರಾದ ಹೆಚ್.ಎಸ್ ಜಗದೀಶ್, ಹೆಚ್. ಆರ್ ಕೃಷ್ಣಮೂರ್ತಿ, ಎಚ್ಎಸ್ ಶ್ರೀನಿವಾಸ್, ಎಸ್ ಬಿ ಹುಚ್ಚೇಗೌಡ ಸಂಘದ ನಿರ್ದೇಶಕ ಹೆಚ್. ಎನ್ ರಮೇಶ್, ಮಾಜಿ ನಿರ್ದೇಶಕ ಹೆಚ್.ಆರ್.ಯಶವಂತ್, ಹಳಿಯೂರು ಬಡಾವಣೆ ಡೈರಿ ನಿರ್ದೇಶಕ ಎಚ್ ಟಿ ಪ್ರಮೋದ್, ಕೃಷಿ ಸಮಾಜದ ನಿರ್ದೇಶಕ  ಡಿ.ಸಿ.ರಾಮೇಗೌಡ, ರೈತ ಸಂಘದ ಮುಖಂಡರಾದ ಆರ್‌ಎಸ್‌ಎಸ್‌ ಚಂದ್ರೇಗೌಡ, ತರಕಾರಿ ಸುರೇಶ್,ಕುಮಾರ್, ಬೋರೇಗೌಡ, ಹೊಸೂರ್ ಆಟೋ ಸಂಘದ ಅಧ್ಯಕ್ಷ ಮಂಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

admin
the authoradmin

Leave a Reply

Translate to any language you want