ಹುಟ್ಟು, ಸಾವಿನ ಮಧ್ಯೆ ಸಾಧನೆಯಿಂದ ಇತಿಹಾಸ ಸೃಷ್ಠಿಸಿದವರು ನಾಡಪ್ರಭು ಕೆಂಪೇಗೌಡರು
ಕೆಆರ್ ನಗರದಲ್ಲಿ 517 ನೇ ನಾಡಪ್ರಭು ಕೆಂಪೇಗೌಡ ಜಯಂತಿ

ಕೆ.ಆರ್.ನಗರ(ಜಿಟೆಕ್ ಶಂಕರ್): ಮನುಷ್ಯ ಹುಟ್ಟು ಮತ್ತು ಸಾವಿನ ಮಧ್ಯೆ ಮಾಡಿದ ಸಾಧನೆಗಳು ಇತಿಹಾಸ ಸೃಷ್ಠಿಸಬೇಕು ಆ ಸಾಲಿಗೆ ನಾಡಪ್ರಭು ಕೆಂಪೇಗೌಡರು ಸೇರುತ್ತಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣ ತಾಲೂಕು ಕಛೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ಸಾಲಿಗ್ರಾಮ ತಾಲೂಕು ವತಿಯಿಂದ ನಡೆದ 517 ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರ ದೂರದೃಷ್ಟಿಯಿಂದ ನಿರ್ಮಾಣವಾದ ಬೆಂದಕಾಳೂರು ದೇಶದಲ್ಲೇ ಸಿಲಿಕಾನ್ ಸಿಟಿ ಎನ್ನಿಸಿಕೊಂಡಿದೆ ಎಂದ ಶಾಸಕರು ಕನ್ನಡ ನಾಡಿಗೆ ಉತ್ತಮ ಕೊಡುಗೆ ನೀಡಿದವರಲ್ಲಿ ಕರ್ನಾಟಕಕ್ಕೆ ಕೆಂಪೇಗೌಡರೇ ಮೊದಲನೆಯವರು ಎಂದು ಬಣಿಸಿದರು.
ಜಾತಿಗೆ ಸೀಮಿತವಾಗದೇ ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿ ಬೆಂಗಳೂರಿನಂತಹ ಮಹಾನಗರವನ್ನು ಕಟ್ಟಿದ ಅವರನ್ನು ಸದಾ ಸ್ಮತಿಸುವಂತಾಗಬೇಕೆಂದರಲ್ಲದೆ ಮಹಾನೀಯರ ಜಯಂತಿಗಳನ್ನು ಆಚರಿಸುವಾಗ ಎಲ್ಲ ಸಮುದಾಯದ ಮುಖಂಡರು ಪಾಲ್ಗೊಂಡಾಗ ಮಾತ್ರ ಆ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸುವಾಗ ಯಾವುದೇ ಜಾತಿ ಮತ್ತು ರಾಜಕೀಯ ಬೆರಸದೇ ಕಾರ್ಯಕ್ರಮಕ್ಕೆ ಆಗಮಿಸಿ ಆಚರಣೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ ಶಾಸಕರು ತಾವು ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪನೆ ಮಾಡಲು ತೀರ್ಮಾನಿಸಿದ್ದು ಸಮಾಜದ ಭಾಂದವರು ಸೂಕ್ತ ಜಾಗವನ್ನು ಗುರುತಿಸಿ ತಮ್ಮ ಗಮನಕ್ಕೆ ತಂದರೆ ವೈಯುಕ್ತಿಕ ಹಣದಲ್ಲಿ ಪತ್ರಿಮೆ ಮಾಡಿಸಿಕೊಡುವುದಾಗಿ ತಿಳಿಸಿದರು.
ಪಟ್ಟಣ ಪುರಸಭೆ ವ್ಯಾಪ್ತಿಯ ಯಾವುದಾರೂ ಒಂದು ರಸ್ತೆಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದಲ್ಲದೆ ಮುಂದಿನ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯುವಂತೆ ಹೇಳಿದರು.
ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ ಮಾತನಾಡಿ ಕೆಂಪೇಗೌಡರವರ ಸಾಧನೆ ಮತ್ತು ಅವರ ಮೂಲ ತಿಳಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ನಾಡ ಪ್ರಭುಗಳ ಬಗ್ಗೆ ಯುವ ಪೀಳೆಗೆಗೆ ಪರಿಚಯಿಸುತ್ತಿರುವುದರ ಜತೆಗೆ ಅದನ್ನು ಪ್ರವಾಸಿ ತಾಣವನ್ನಾಗಿ ರೂಪಿಸುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಪತ್ರಕರ್ತ ಸಂಘಟನೆ ಮಂಜುನಾಥ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಕೃಷ್ಣರಾಜೇಂದ್ರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಬೆಳ್ಳಿ ರಥದಲ್ಲಿ ಕೆಂಪೇಗೌಡ ರ ಭಾವಚಿತ್ರವನ್ನು ಮೆರವಣಿ ಮೂಲಕ ತಹಶೀಲ್ದಾರ್ ಕಛೇರಿಯ ವರೆಗೆ ವಿವಿಧ ಕಲಾತಂಡಗಳೊಂದಿಗೆ ಕರೆತರಲಾಯಿತು.
ಕೆ.ಆರ್.ನಗರ ತಾಲೂಕು ತಹಶೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಸಾಲಿಗ್ರಾಮ ತಾಲೂಕು ದಂಡಾಧಿಕಾರಿ ರುಕಿಯಾಬೇಗಂ, ಸಾಲಿಗ್ರಾಮ ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಸ್.ರವಿ, ಬಿಇಒ ಆರ್.ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್, ಮಾಜಿ ಸದಸ್ಯ ಕೆ.ವಿನಯ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿಂಡಿಮಶಂಕರ್, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಚ್.ಹೆಚ್.ನಾಗೇಂದ್ರ, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ವೈ.ಎಸ್.ಜಯಂತ್, ಜಿ.ಆರ್.ರಾಮೇಗೌಡ, ವ್ಯಾನ್ ಸುರೇಶ್, ಬಿಎಸ್ ಎನ್ ಎಲ್ ಕೃಷ್ಣ, ಮೂಡಲಕೊಪ್ಪಲು ಕೃಷ್ಣೇಗೌಡ, ಕಲ್ಲಹಳ್ಳಿಶ್ರೀನಿವಾಸ್, ಹೆಬ್ಬಾಳುಪರಶುರಾಮ್, ವಕೀಲ ಪಣೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.







