janamanakannada > Blog > Latest > Mysore > ಪತ್ರಕರ್ತ ಸಂಘಟನೆ ಮಂಜುನಾಥ್ ಗೆ ಕೆ.ಆರ್.ನಗರ ತಾಲೂಕು ಆಡಳಿತದಿಂದ ಗೌರವದ ಸನ್ಮಾನ
ಕೆ.ಆರ್.ನಗರ: ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ಸಾಲಿಗ್ರಾಮ ತಾಲೂಕು ವತಿಯಿಂದ ನಡೆದ 517 ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹೊಸೂರು ಸಂಘಟನೆ ಮಂಜುನಾಥ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಡಿ ರವಿಶಂಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಚ್.ಹೆಚ್.ನಾಗೇಂದ್ರ, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಯುವ ಮುಖಂಡರಾದ ಮಿರ್ಲೆ ನಂದೀಶ್, ಹೊಸೂರು ಡೈರಿ ಮಧು ಉಪಸ್ಥಿತರಿದ್ದರು.
Tags:k r nagar news
admin








