janamanakannada > Blog > Latest > ಸೋಮವಾರಪೇಟೆಯಲ್ಲಿ ಜನರಿಗೆ ಕಚ್ಚಿ ಗಾಯಗೊಳಿಸಿ ಭಯಭೀತಿ ಸೃಷ್ಟಿಸಿದ್ದ ಬೀದಿನಾಯಿ ಸೆರೆ
ಸೋಮವಾರಪೇಟೆ : ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಹನ್ನೆರಡು ಜನರಿಗೆ ಕಚ್ಚಿ ಗಾಯಗೊಳಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಬೀದಿನಾಯಿಯನ್ನು ಪಟ್ಟಣ ಪಂಚಾಯತಿ ಪೌರಕಾರ್ಮಿಕರು ಸಾರ್ವಜನಿಕರ ಸಹಕಾರದಿಂದ ಸೆರೆ ಹಿಡಿದಿದ್ದಾರೆ.
ಪಟ್ಟಣದಲ್ಲಿ ಜನರಿಗೆ ಹಾಗೂ ಇತರೆ ಪ್ರಾಣಿಗಳಿಗೂ ಕಚ್ಚಿಗಾಯಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರ ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ಭಯಭೀತಿ ಉಂಟುಮಾಡಿದ್ದ ನಾಯಿಯನ್ನು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದು ಸಾರ್ವಜನಿಕರ ಆತಂಕವನ್ನು ದೂರಮಾಡಿದ್ದಾರೆ.ಆ ನಾಯಿಯನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್ ಹಾಗೂ ಆರೋಗ್ಯ ನಿರೀಕ್ಷಕ ಜಾಸೀಮ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಸಿಬ್ಬಂದಿಗಳು ಇದ್ದರು.
Tags:somwarpet news
admin








