ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಕಾರ್ಮಿಕರ ಪ್ರತಿಭಟನಾ ಸಭೆಯಲ್ಲಿ ಮಹಿಳಾ ದೌರ್ಜನ್ಯಕ್ಕೆ ಖಂಡನೆ

ಕುಶಾಲನಗರ(ಆರ್ ಹೆಚ್): ತಾಲ್ಲೂಕಿನ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ ಯಾವುದೇ ಬಲವಂತದ ಮತಾಂತರವಾಗಲಿ ಅಥವಾ ಮಹಿಳಾ ದೌರ್ಜನ್ಯ ಘಟನೆಗಳು ಇದುವರೆಗೂ ನಡೆದಿಲ್ಲ. ಈ ಕೇಂದ್ರದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಎಲ್ಲಾ ಕಾರ್ಮಿಕರು ಒಕ್ಕೊರಲಿನಿಂದ ಖಂಡಿಸಿದರು.
ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ ಮತಾಂತರ ಹಾಗೂ ದೌರ್ಜನ್ಯ ನಡೆಯುತ್ತಿದೆ ಎಂದು ಕೆಲವರು ಮಾಡುತ್ತಿರು ಆರೋಪವನ್ನು ಖಂಡಿಸಿ ಸೋಮವಾರ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನಾ ಸಭೆ ನಡೆಸಿದರು. ಮಹಿಳಾ ಕಾರ್ಮಿಕರಾದ ರೂಪ ಮಾತನಾಡಿ,ನಾವು ಬಡ ಕುಟುಂಬದಿಂದ ಬಂದ ಮಹಿಳೆಯಾಗಿದ್ದು,ಈ ಕೇಂದ್ರ ಕೆಲಸಬಮಾಡಿಕೊಂಡು ಜೀವನನಿರ್ವಹಣೆ ಮಾಡುತ್ತಿದ್ದೇನೆ.
ನಾವು ಅನೂನ್ಯತೆ,ಪರಸ್ಪರ ಸಹಭಾಳ್ವೆಯಿಂದ ಕೆಲಸ ನಿರ್ವಹಿಸುತ್ತಿದ್ದು, ಈ ಕೇಂದ್ರ ಭಾವೈಕ್ಯತೆ ಕೇಂದ್ರವಾಗಿದೆ ಎಂದು ಹೇಳಿದರು. ಈ ಕೇಂದ್ರದಲ್ಲಿ ನೂರಾರು ಬಡ ಕಾರ್ಮಿಕರು ಬದುಕ ಕಂಡುಕೊಂಡಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಎನ್ಟಿಸಿ ಕೇಂದ್ರದಲ್ಲಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಹಾಗೂ ಮಹಿಳೆಯರು ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಮಾಡುತ್ತಿರುವ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ.ಯಾರೋ ಒಬ್ಬ ವ್ಯಕ್ತಿ ಹೊರಗಡೆ ಮಾಡಿರುವ ಮತಾಂತರ ಪ್ರಕರಣವನ್ನು ಇಟ್ಟುಕೊಂಡು ಎನ್ಟಿಸಿ ಕೇಂದ್ರದ ಮೇಲೆ ಕಪ್ಪುಚುಕ್ಕೆ ಹಾಗೂ ಕೆಟ್ಟ ಹೆಸರು ತರಲು ಕೆಲವು ವ್ಯಕ್ತಿ ನಡೆಸಿತ್ತಿರುವ ಕುತಂತ್ರವನ್ನು ಖಂಡಿಸುವುದಾಗಿ ಹೇಳಿದರು.
ಕಾರ್ಮಿಕ ಮಹಿಳೆ ಸುನೀತಾ ಮಾತನಾಡಿ, ಎನ್ಟಿಸಿ ಕೇಂದ್ರದಲ್ಲಿ ಮಹಿಳೆಯರು ಸುರಕ್ಷತೆ ಹಾಗೂ ರಕ್ಷಣೆ ಇದೆ.ಇಲ್ಲಿನ ಎಲ್ಲಾ ಅಂಗಡಿ ಮಾಲಿಕರು ಕಾರ್ಮಿಕ ಮಹಿಳೆಯರಿಗೆ ಯಾವುದೇ ತೊಂದರೆ ನೀಡುತ್ತಿಲ್ಲ.ನಾವೆಲ್ಲ ಕಾರ್ಮಿಕರು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದರು.
ಉದ್ಯಮಿ ರಜಾಕ್ ಹೊಸಕೋಟೆ ಮಾತನಾಡಿ,ಇಲ್ಲಿ ಎಲ್ಲ ಜಾತಿ, ಧರ್ಮ ಜನರು ಕೆಲಸ ಮಾಡುವ ಮೂಲಕ ನೆಲೆ ಕಂಡು ಕೊಂಡಿದ್ದಾರೆ. ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳು, ಎಲ್ಲಾ ಧರ್ಮದ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಿಸಿಕೊಂಡು ಬರುತ್ತಿದ್ದೇವೆ. ಹನುಮ ಜಯಂತಿ ಶೋಭಾಯಾತ್ರೆಯಲ್ಲಿ ಭಾಗವಹಿಸುವ ಜನರಿಗೆ ಜ್ಯೂಸ್ ಹಂಚುತ್ತೇವೆ ಎಂದರು. ಎನ್ಟಿಸಿ ಕೇಂದ್ರ ಆರಂಭಗಳು ಎರಡು ದಶಕಗಳು ಕಳೆದಿವೆ ಆದರೆ ಇಲ್ಲಿವರೆಗೆ ಯಾವುದೇ ಹಿಂದೂ ಮುಸ್ಲಿಂ ಗಲಾಟೆ ನಡೆದಿಲ್ಲ.ಯಾವುದೇ ಪ್ರಕರಣ ದಾಖಲಾಗಿಲ್ಲ. ಎಲ್ಲಾ ಕಾರ್ಮಿಕರು ಸೌಹಾರ್ದತೆ,ಸಹಬಾಳ್ವೆ ಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದರು.

ಮತಾಂತರ ಪ್ರಕರಣವನ್ನು ನಾವು ಖಂಡನೀಯ ಇದರ ಬಗ್ಗೆ ತನಿಖೆ ನಡೆಯುತ್ತಿದೆ.ಆದರೆ ಸಂಸ್ಥೆ ಮೇಲೆ ಮಾಡುತ್ತಿರುವ ಆರೋಪ ಬೇಸರವಾಗಿದೆ. ಈ ಆರೋಪದಲ್ಲಿ ಹುರುಳಿಲ್ಲ. ಪೂರ್ವಾಗ್ರಹ ಪೀಡಿತವಾಗಿ ಮಾಡುತ್ತಿರುವ ಆರೋಪವನ್ನು ನಾವುಗಳು ಖಂಡಿಸುತ್ತೇವೆ ಎಂದರು.
ಸಿಎನ್ಟಿಸಿ ವ್ಯವಸ್ಥಾಪಕಿ ಆಶಾಸಲಾಂ ಮಾತನಾಡಿ, ಈ ಕೇಂದ್ರದಲ್ಲಿ ಎಲ್ಲಾ ಜಾತಿ,ಧರ್ಮ ಜನರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಕೇಂದ್ರದಲ್ಲಿ ಎಲ್ಲಾ ಧರ್ಮದ ಗಣಪತಿ ಹಬ್ಬ, ಕ್ರಿಸ್ಮಸ್, ರಂಜನ್ ಸೇರಿದಂತೆ ರಾಷಯ ಹಬ್ಬಗಳನ್ನು ಎಲ್ಲರೂ ಒಟ್ಟಾಗಿ ಸೇರಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ.ಇಲ್ಲಿ ಎಲ್ಲಾ ಧರ್ಮದವರು ಅನೂನ್ಯತೆಯಿಂದ ಭಾವೈಕ್ಯತೆಯಿಂದ ಜೀವನ ಕಂಡುಕೊಂಡಿದ್ದಾರೆ. ಇಲ್ಲಿ ಕೆಲಸಮಾಡುವ ಮಹಿಳೆಯರ ಮೇಲೆ ಇಲ್ಲಸಲ್ಲದ ಪಟ್ಟಣದ ಮಾಡಿ ಅವರ ಧೈರ್ಯವನ್ನು ಕುಂದಿಸುವ ಕೆಲಸವನ್ನು ಯಾರ ಮಾಡಬಾರದು ಎಂದು ಹೇಳಿದರು.
ಸಿಎನ್ಟಿಸಿ ಕೆಂದ್ರ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸಲಾಂ ಮಾತನಾಡಿ, ಸಿಎನ್ಟಿಸಿ ಕೇಂದ್ರದ ಮೇಲೆ ಇದುವರೆಗೂ ಯಾವುದೇ ಆರೋಪಗಳು ಬಂದಿಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಮಹಿಳೆಯರು ಮೇಲೆ ಮಾಡುತ್ತಿರುವ ಆರೋಪ ಬೇಸರ ತಂದಿದೆ. ಈ ಉದ್ದೇಶದಿಂದಲೇ ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ನಿರ್ಧರಿಸಿದ್ದೆ. ಆದರೆ ಬಡ ಮಹಿಳೆಯರು ಬದುಕ ಹಾಳುಮಾಡುವುದು ಬೇಡ ಎಂದು ತೀರ್ಮಾನಿಸಿದ್ದೇನೆ.
ಈ ಕೇಂದ್ರದಲ್ಲಿ ಯಾವುದೇ ಜಾತಿ, ಮತ ಧರ್ಮ ಭೇದ ಇಲ್ಲದೆ ಎಲ್ಲಾ ಕಾರ್ಮಿಕರು ದುಡಿಯುತ್ತಿದ್ದಾರೆ.ಆದರೆ ಈ ಕೇಂದ್ರ ಬಿರುಕು ಮುಡಿಸುವ ಹಾಗೂ ಕೆಟ್ಟ ಹೆಸರು ತರಲಯ ಕುತಂತ್ರ ನಡೆಯುತ್ತಿದೆ.ಇಲ್ಲಿ ಯಾವುದೇ ಯಾವುದೇ ದೌರ್ಜನ್ಯ ನಡೆಯುತ್ತಿಲ್ಲ. ಮಹಿಳೆಯರಿಗೆ ಎಲ್ಲಾ ರೀತಿಯ ಸುರಕ್ಷತೆ, ರಕ್ಷಣೆಗಾಗಿ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಕೂಡ ಅಳವಡಿಸಲಾಗಿದೆ ಎಂದರು.
ನಾನು ಕೂಡ ಬಲವಂತದ ಮತಾಂತರ ಹಾಗೂ ಮಹಿಳಾ ದೌರ್ಜನ್ಯವನ್ನು ಖಂಡಿಸುತ್ತೇನೆ.ನಾಳೆ ನಡೆಯುವ ಮಹಿಳಾ ದೌರ್ಜನ್ಯ ವಿರೋಧಿ ಹೋರಾಟ ನಮ್ಮ ಬೆಂಬಲವಿದೆ ಎಂದರು.ಸಿಎನ್ಟಿಸಿ ಕೇಂದ್ರ ಡ್ರಗ್ಸ್ ಮುಕ್ತ ವಾತಾವರಣವನ್ನು ಹೊಂದಿದೆ. ಕೇಂದ್ರ ಒಳಗೆ ಯಾರಾದರೂ ಡ್ರಗ್ಸ್, ಅಫೀಮು, ಗಾಂಜಾ ಮತ್ತಿತರರು ಮಾದಕವಸ್ತುಗಳನ್ನು ತಂದು ಮಾರಾಟ ಮಾಡುವುದಾಗಲಿ ಅಥವಾ ಸೇವನೆ ಮಾಡುವ ಪ್ರಕರಣ ಕಂಡು ಬಂದ್ ಅಂತರವನ್ನು ನಿರ್ದಾಕ್ಷಿಣ್ಯವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಸಿಎನ್ಟಿಸಿ ಮುಖಂಡರಾದ ಶಾಂತಿ ಯಾಜ್ಞಿತ ಹರೀಶ್, ಜಾನ್ಸಿಜಾನ್ ಮತ್ತಿತರರು ಭಾಗವಹಿಸಿದ್ದರು.







